ಬೆಂಗಳೂರು: ದೀಪಾವಳಿ ಉಡುಗೊರೆಯಾಗಿ ಎರಡು ಸೀರೆಗಳನ್ನು ಮಹಿಳಾ ಕೊರೊನಾ ವಾರಿಯರ್ಸ್ ಗೆ ನೀಡಲಾಗುವುದು. ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ ನೇಕಾರರಿಗೆ ನೆರವಾಗುವ ಉದ್ದೇಶದಿಂದ ಕೈಮಗ್ಗ ಮತ್ತು ಜವಳಿ ಇಲಾಖೆ ಯೋಜನೆ ರೂಪಿಸಿದೆ.
ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜೀವ ಒತ್ತೆ ಇಟ್ಟು ಹೋರಾಟ ನಡೆಸುತ್ತಿರುವ ಮಹಿಳಾ ಕೊರೊನಾ ವಾರಿಯರ್ಸ್ ಗೆ ರಾಜ್ಯ ಸರ್ಕಾರ ಉಡುಗೊರೆ ನೀಡಲು ಮುಂದಾಗಿದೆ.
ಸಂಕಷ್ಟದಲ್ಲಿರುವ ನೇತಾರರು ಮತ್ತು ಪವರ್ ಲೂಮ್ ನೇಕಾರರಿಗೆ ನೆರವು ನೀಡಲು ಸೀರೆಗಳನ್ನು ಖರೀದಿಸಿ ವಿವಿಧ ಇಲಾಖೆಗಳ ಮೂಲಕ ಮಹಿಳಾ ಕೊರೊನಾ ವಾರಿಯರ್ಸ್ ಗಳಿಗೆ ತಲಾ 2 ಸೀರೆ ಉಚಿತವಾಗಿ ನೀಡಲಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಜವಳಿ ಸಚಿವ ಶ್ರೀಮಂತ್ ಪಾಟೀಲ್ ಚರ್ಚಸಿದ್ದು, ಸಿಎಂ ಸೂಚನೆಯಂತೆ ನೇಕಾರರಿಂದ 6 ಲಕ್ಷ ಸೀರೆ ಖರೀದಿಸಿ ದೀಪಾವಳಿ ಉಡುಗೊರೆಯಾಗಿ ಎರಡು ಸೀರೆಗಳನ್ನು ಮಹಿಳಾ ವಾರಿಯರ್ಸ್ ಗೆ ನೀಡಲಾಗುವುದು ಎಂದು ಹೇಳಲಾಗಿದೆ.