ಬೈಕ್ ಗೆ ಬೊಲೆರೋ ವಾಹನ ಡಿಕ್ಕಿ ಚಿಕಿತ್ಸೆ ಫಲಿಸದೆ ಗಂಭೀರ ಗಾಯಗೊಂಡ ಬಾಲಕಿ ಮೃತ್ಯು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೀಟು ಎಂಬಲ್ಲಿ ನಡೆದ ಬೈಕ್ ಹಾಗೂ ಬೊಲೆರೋ ಅಪಘಾತದಲ್ಲಿ ಉಜಿರೆ ಎಸ್‌ಡಿಎಂ ಶಾಲೆಯ ವಿದ್ಯಾರ್ಥಿನಿ ಅನರ್ಘ್ಯ ಮೃತಪಟ್ಟಿದ್ದಾರೆ.

ಮಂಡಾಜೆ ಕಲ್ಮಂಜ ಕುಡೆಂಚಿ ಗುರುಪ್ರಸಾದ್ ಗೋಖಲೆ ಹಾಗೂ ಮಗಳು ಅನರ್ಘ್ಯ(12) ಬೈಕ್ ನಲ್ಲಿ ಉಜಿರೆಯಿಂದ ಮನೆಗೆ ಹೊರಟಿದ್ದರು. ಮಾರ್ಗ ಮಧ್ಯ ಬೊಲೆರೋ ಹಿಂದಿನಿಂದ ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಲ್ಲಿ ತಂದೆ ಮಗಳು ಇಬ್ಬರೂ ಗಾಯಗೊಂಡಿದ್ದರು. ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಅನರ್ಘ್ಯ ಬಳಿಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಅಪಘಾತವಾದ ಬಳಿಕ ತಪ್ಪಿಸಿಕೊಂಡಿದ್ದ ಬೊಲೆರೋ ವಾಹನವನ್ನು ಸಾರ್ವಜನಿಕರ ಸಹಕಾರದಿಂದ ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಅಪಘಾತವೆಸಗಿದ ನೆರಿಯದ ಬೊಲೆರೋ ಚಾಲಕ ಅಲ್ಲಿಂದ ಪರಾರಿಯಾಗಲೆತ್ನಿಸಿದ್ದು, ಸೀಟು ಕಾಡು ಬಸ್ ಸ್ಟ್ಯಾಂಡ್ ಬಳಿಯ ಒಳಗಿನ ರಸ್ತೆಯಲ್ಲಿ ಸಾಗಿದ್ದು, ಅಲ್ಲಿ ಪರಾರಿಯಾಗಲು ದಾರಿ ಸಿಗದ ಕಾರಣ ಹಿಂದಿರುಗಿ ಬರುವ ವೇಳೆ ಸ್ಥಳೀಯರು ವಾಹನವನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಘಟನಾ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ಸಂಚಾರಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಬೊಲೆರೋವಾಹದಲ್ಲಿದ್ದ ವಾಹನದ ಮಾಲೀಕ ನೆರಿಯದ ಪ್ರಶಾಂತ್ ಸೇರಿ ಮೂವರನ್ನು ಸಾರ್ವಜನಿಕರು ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ.

Spread the love
  • Related Posts

    ಬೆಳ್ತಂಗಡಿ ವಕೀಲರ ಭವನಕ್ಕೆ ಹಾಗೂ ನ್ಯಾಯಾಲಯಕ್ಕೆ ಅಧೀಕ್ಷಕರಾದ ಗೋಕುಲ್ ದಾಸ್ ಭೇಟಿ

    Belthangady: ಬೆಳ್ತಂಗಡಿ ವಕೀಲರ ಭವನಕ್ಕೆ ಹಾಗೂ ನ್ಯಾಯಾಲಯಕ್ಕೆ ಶ್ರೀ ಗೋಕುಲದಾಸ್ ಅಧೀಕ್ಷಕರು, ಲೋಕೋಪಯೋಗಿ ಇಲಾಖೆ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ರಾಘವೇಂದ್ರ ನಾಯ್ಕ್ ಭೇಟಿನೀಡಿ ಸ್ಥಳ ಪರಿಶೀಲನೆ ಮಾಡಿ ನ್ಯಾಯಾಧೀಶ ರೊಂದಿಗೆ ಮತ್ತು ವಕೀಲರೊಂದಿಗೆ ಸಂವಾದ ನಡೆಸಿದರು. ಈ ಸಂಧರ್ಭದಲ್ಲಿ ವಕೀಲರ ಸಂಘದ…

    Spread the love

    ಜ್ವರ ಕೆಮ್ಮು ನೆಗಡಿ ಇರುವ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಸೂಚನೆ

    ಬೆಂಗಳೂರು: ಜ್ವರ, ಕೆಮ್ಮು, ನೆಗಡಿ ಹಾಗೂ ಇತರ ಅನಾರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬೇಡಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಈ ಬಗ್ಗೆ ಇಲಾಖೆ ಆಯುಕ್ತ ಕೆ.ಬಿ. ಶಿವಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಸರ್ಕಾರಿ…

    Spread the love

    You Missed

    ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ಬಿಲ್ಲುಗಳಲ್ಲಿ ಬಳಕೆದಾರರಿಗೆ ಮೂಡಿದೆ P&G ಶುಲ್ಕದ ಗೊಂದಲ!!!!

    • By admin
    • July 8, 2025
    • 325 views
    ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ಬಿಲ್ಲುಗಳಲ್ಲಿ ಬಳಕೆದಾರರಿಗೆ ಮೂಡಿದೆ P&G ಶುಲ್ಕದ ಗೊಂದಲ!!!!

    ಧರ್ಮಸ್ಥಳದಿಂದ ಹೊರಡುವ ರಸ್ತೆ ಸಾರಿಗೆ ನಿಗಮದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

    • By admin
    • July 8, 2025
    • 136 views
    ಧರ್ಮಸ್ಥಳದಿಂದ ಹೊರಡುವ ರಸ್ತೆ ಸಾರಿಗೆ ನಿಗಮದ ಮೂರು  ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

    ಎತ್ತಿನಹೊಳೆ ಯೋಜನೆಗೆ ಬಾರಿ ಹಿನ್ನಡೆ, 423ಎಕರೆ ಅರಣ್ಯ ಬಳಕೆಗೆ ಕೇಂದ್ರ ಅರಣ್ಯ ಸಲಹಾ ಸಮಿತಿ ನಿರಾಕರಣೆ

    • By admin
    • July 8, 2025
    • 52 views
    ಎತ್ತಿನಹೊಳೆ ಯೋಜನೆಗೆ ಬಾರಿ ಹಿನ್ನಡೆ, 423ಎಕರೆ ಅರಣ್ಯ ಬಳಕೆಗೆ ಕೇಂದ್ರ ಅರಣ್ಯ ಸಲಹಾ ಸಮಿತಿ ನಿರಾಕರಣೆ

    ಮಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರ ಈಗ ಸ್ಮಾರ್ಟ್ ಅಂಗನವಾಡಿ ಕೇಂದ್ರವಾಗಿ ಪರಿವರ್ತನೆ, ಜಿಲ್ಲಾ ಪತ್ರಕರ್ತರ ಸಂಘ ಹಾಗೂ ದಾನಿಗಳಿಂದ ನೆರವು

    • By admin
    • July 5, 2025
    • 53 views
    ಮಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರ ಈಗ ಸ್ಮಾರ್ಟ್ ಅಂಗನವಾಡಿ ಕೇಂದ್ರವಾಗಿ ಪರಿವರ್ತನೆ, ಜಿಲ್ಲಾ ಪತ್ರಕರ್ತರ ಸಂಘ ಹಾಗೂ ದಾನಿಗಳಿಂದ ನೆರವು

    ಬೆಳ್ತಂಗಡಿ ವಕೀಲರ ಭವನಕ್ಕೆ ಹಾಗೂ ನ್ಯಾಯಾಲಯಕ್ಕೆ ಅಧೀಕ್ಷಕರಾದ ಗೋಕುಲ್ ದಾಸ್ ಭೇಟಿ

    • By admin
    • July 5, 2025
    • 39 views
    ಬೆಳ್ತಂಗಡಿ ವಕೀಲರ ಭವನಕ್ಕೆ ಹಾಗೂ ನ್ಯಾಯಾಲಯಕ್ಕೆ ಅಧೀಕ್ಷಕರಾದ ಗೋಕುಲ್ ದಾಸ್ ಭೇಟಿ

    ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಬಗ್ಗೆ ಉಚಿತ ತರಬೇತಿಗಾಗಿ ಉಜಿರೆಯ ರುಡ್ ಸೆಟ್ ತರಭೇತಿ ಕೇಂದ್ರದಲ್ಲಿ ಅರ್ಜಿ ಆಹ್ವಾನ

    • By admin
    • July 5, 2025
    • 59 views
    ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಬಗ್ಗೆ ಉಚಿತ ತರಬೇತಿಗಾಗಿ ಉಜಿರೆಯ ರುಡ್ ಸೆಟ್ ತರಭೇತಿ ಕೇಂದ್ರದಲ್ಲಿ ಅರ್ಜಿ ಆಹ್ವಾನ