ಬೆಂಗಳೂರು : ಲಾಕ್ ಡೌನ್ ನಂತ್ರ, ಕೊರೋನಾ ಸೋಂಕಿನ ಭೀತಿಯಿಂದಾಗಿ ಮದ್ಯಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಈ ಬಳಿಕ ಮದ್ಯಮಾರಾಟಕ್ಕೆ ಅನುಮತಿಯನ್ನು ನೀಡಲಾಗಿತ್ತು. ವೈನ್ ಶಾಪ್, ಎಂ ಎಸ್ ಐ ಎಲ್ ಗಳಲ್ಲಿ ಮದ್ಯಮಾರಾಟಕ್ಕೆ ಕೇಂದ್ರದ ಮಾರ್ಗಸೂಚಿಯಂತೆ ಅವಕಾಶ ನೀಡಲಾಗಿತ್ತು. ಇದೀಗ ಸೆಪ್ಟೆಂಬರ್.1ರಿಂದ ಬಾರ್, ಕ್ಲಬ್ ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಮೂಲಕ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಅನ್ನು ರಾಜ್ಯ ಸರ್ಕಾರ ನೀಡುತ್ತಿದೆ.
ರಾಜ್ಯದ ಹಣಕಾಸು ಇಲಾಖೆಯ ಸಭೆಯಲ್ಲಿ ರಾಜ್ಯ ಬೊಕ್ಕಸಕ್ಕೆ ಹಣ ತುಂಬಿಸುವ ನಿಟ್ಟಿನಲ್ಲಿ ಬಿಸಿ ಬಿಸಿ ಚರ್ಚೆ ನಡೆಸಲಾಗಿದ್ದು, ಬಾರ್, ಕ್ಲಬ್ ಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ಸಂಬಂಧ ಚರ್ಚೆ ನಡೆಸಲಾಗಿದೆ. ಅಲ್ಲದೇ ಇದಕ್ಕಾಗಿ ಮಾರ್ಗಸೂಚಿ ಹೊರಡಿಸಲು ಸರ್ಕಾರದ ತಯಾರಿ ನಡೆಸಿದೆ.
ಸೋಮವಾರ ಸಿಎಂ ಯಡಿಯೂರಪ್ಪ ಅವರಿಗೆ ಕಡತ ರವಾನೆ ಮಾಡಲಿದೆ. ಸಿಎಂ ಅವರು ಈ ಕಡತಕ್ಕೆ ಅಂಕಿತ ಹಾಕಿದ್ರೇ, ಸೆ.1ರಿಂದ ಬಾರ್, ಕ್ಲಬ್ ಗಳಲ್ಲಿಯೂ ಮದ್ಯ ಮಾರಾಟವಾಗಲಿದೆ. ಆದ್ರೇ ಸಿಎಂ ಇಂತಹ ಕಡತಕ್ಕೆ ಅಂಕಿತ ಹಾಕುತ್ತಾರಾ..? ಸೆಪ್ಟೆಂಬರ್ 1ರಿಂದ ಬಾರ್, ಕ್ಲಬ್ ಗಳಲ್ಲಿ ಮದ್ಯ ಮಾರಾಟ ಆರಂಭವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.