ದ.ಕ ಜಿಲ್ಲೆ ಬೆಳ್ತಂಗಡಿಯ ಯಾಕೂಬ್, ಕಲಬುರಗಿಯ ಸುರೇಖಾ ಸೇರಿದಂತೆ ಒಟ್ಟು 47 ಶಿಕ್ಷಕರು ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಯಾಕೂಬ್, ಕಲಬುರಗಿಯ ಅಫ್ಷಲ್ ಪುರದ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ್ ಸೇರಿದಂತೆ ಒಟ್ಟು 47 ಶಿಕ್ಷಕರಿಗೆ 2020ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನು ಘೋಷಿಸಲಾಗಿದೆ.

ಬೆಳ್ತಂಗಡಿ ತಾಲೂಕು ನಡ ಪ್ರೌಢ ಶಾಲೆಯ ಗಣಿತ ಶಿಕ್ಷಕ , ಶಾಲೆಯ ಗಣಿತ ಪ್ರಯೋಗಾಲಯದ ರೂವಾರಿ ಯಾಕೂಬ್‌ರವರನ್ನು ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದ ರಾಷ್ಟ್ರ ಮಟ್ಟದ ಉತ್ತಮ‌ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಸೆಪ್ಟೆಂಬರ್ 5ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಘನತೆವೆತ್ತ ರಾಮನಾಥ ಕೋವಿಂದ್ ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯವು ಈ ಸಾಲಿನ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು ಅದರಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಶಿಕ್ಷಕರು ಪ್ರಶಸ್ತಿ ಪುರಸ್ಕೃತರಾಗಿರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.

ಈ ಸಚಿವಾಲಯವು ನೇಮಕ ಮಾಡಿದ್ದ ಸ್ವತಂತ್ರ ತೀರ್ಪುಗಾರರ ಸಮಿತಿಯು ಈ ಪಟ್ಟಿಯನ್ನು ಅಂತಿಮಗೊಳಿಸಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 7 ಸಾಂಸ್ಥಿಕ ಆಯ್ಕೆ ಸಮಿತಿ ಅಂತಿಮಗೊಳಿಸಿದ್ದ 153 ಶಿಕ್ಷಕರ ಅರ್ಜಿಯನ್ನು ಪರಿಶೀಲಿಸಿ ಒಟ್ಟು 45 ಶಿಕ್ಷಕರನ್ನು ಈ ಬಾರಿಯ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Spread the love
  • Related Posts

    ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ಬಿಲ್ಲುಗಳಲ್ಲಿ ಬಳಕೆದಾರರಿಗೆ ಮೂಡಿದೆ P&G ಶುಲ್ಕದ ಗೊಂದಲ!!!!

    ಮಂಗಳೂರು: ವಿದ್ಯುತ್ ಸರಬರಾಜು ಕಂಪನಿಯು ತನ್ನ ಬಿಲ್ಲುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಾರಿ ಮಾರ್ಪಾಡು ಮಾಡಿ P&G ಹೆಸರಿನಲ್ಲಿ 0.36 surcharge ಮಾಡುತ್ತಿದ್ದು ಬಳಕೆದಾರರು ಈ ಬಗ್ಗೆ ಅರಿವಿಲ್ಲದೇ ವಿದ್ಯುತ್ ಬಿಲ್ ಪಾವತಿ ಮಾಡುತ್ತಾ ಬಂದಿದ್ದು ಕಳೆದ ಎರಡು ಮೂರು ತಿಂಗಳುಗಳಿಂದ ಈ…

    Spread the love

    ಧರ್ಮಸ್ಥಳದಿಂದ ಹೊರಡುವ ರಸ್ತೆ ಸಾರಿಗೆ ನಿಗಮದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

    ಧರ್ಮಸ್ಥಳ : ಧರ್ಮಸ್ಥಳದಿಂದ -ಉಜಿರೆ-ಬೆಳಾಲು -ಬಂದಾರು-ಉಪ್ಪಿನಂಗಡಿ, ಸೌತಡ್ಕ ಹಾಗೂ ನೆಲ್ಯಾಡಿ, ಮಾರ್ಗವಾಗಿ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರವರು ಜುಲೈ 08 ರಂದು ಧರ್ಮಸ್ಥಳ ದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ…

    Spread the love

    You Missed

    ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ಬಿಲ್ಲುಗಳಲ್ಲಿ ಬಳಕೆದಾರರಿಗೆ ಮೂಡಿದೆ P&G ಶುಲ್ಕದ ಗೊಂದಲ!!!!

    • By admin
    • July 8, 2025
    • 325 views
    ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ಬಿಲ್ಲುಗಳಲ್ಲಿ ಬಳಕೆದಾರರಿಗೆ ಮೂಡಿದೆ P&G ಶುಲ್ಕದ ಗೊಂದಲ!!!!

    ಧರ್ಮಸ್ಥಳದಿಂದ ಹೊರಡುವ ರಸ್ತೆ ಸಾರಿಗೆ ನಿಗಮದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

    • By admin
    • July 8, 2025
    • 137 views
    ಧರ್ಮಸ್ಥಳದಿಂದ ಹೊರಡುವ ರಸ್ತೆ ಸಾರಿಗೆ ನಿಗಮದ ಮೂರು  ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

    ಎತ್ತಿನಹೊಳೆ ಯೋಜನೆಗೆ ಬಾರಿ ಹಿನ್ನಡೆ, 423ಎಕರೆ ಅರಣ್ಯ ಬಳಕೆಗೆ ಕೇಂದ್ರ ಅರಣ್ಯ ಸಲಹಾ ಸಮಿತಿ ನಿರಾಕರಣೆ

    • By admin
    • July 8, 2025
    • 52 views
    ಎತ್ತಿನಹೊಳೆ ಯೋಜನೆಗೆ ಬಾರಿ ಹಿನ್ನಡೆ, 423ಎಕರೆ ಅರಣ್ಯ ಬಳಕೆಗೆ ಕೇಂದ್ರ ಅರಣ್ಯ ಸಲಹಾ ಸಮಿತಿ ನಿರಾಕರಣೆ

    ಮಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರ ಈಗ ಸ್ಮಾರ್ಟ್ ಅಂಗನವಾಡಿ ಕೇಂದ್ರವಾಗಿ ಪರಿವರ್ತನೆ, ಜಿಲ್ಲಾ ಪತ್ರಕರ್ತರ ಸಂಘ ಹಾಗೂ ದಾನಿಗಳಿಂದ ನೆರವು

    • By admin
    • July 5, 2025
    • 53 views
    ಮಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರ ಈಗ ಸ್ಮಾರ್ಟ್ ಅಂಗನವಾಡಿ ಕೇಂದ್ರವಾಗಿ ಪರಿವರ್ತನೆ, ಜಿಲ್ಲಾ ಪತ್ರಕರ್ತರ ಸಂಘ ಹಾಗೂ ದಾನಿಗಳಿಂದ ನೆರವು

    ಬೆಳ್ತಂಗಡಿ ವಕೀಲರ ಭವನಕ್ಕೆ ಹಾಗೂ ನ್ಯಾಯಾಲಯಕ್ಕೆ ಅಧೀಕ್ಷಕರಾದ ಗೋಕುಲ್ ದಾಸ್ ಭೇಟಿ

    • By admin
    • July 5, 2025
    • 39 views
    ಬೆಳ್ತಂಗಡಿ ವಕೀಲರ ಭವನಕ್ಕೆ ಹಾಗೂ ನ್ಯಾಯಾಲಯಕ್ಕೆ ಅಧೀಕ್ಷಕರಾದ ಗೋಕುಲ್ ದಾಸ್ ಭೇಟಿ

    ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಬಗ್ಗೆ ಉಚಿತ ತರಬೇತಿಗಾಗಿ ಉಜಿರೆಯ ರುಡ್ ಸೆಟ್ ತರಭೇತಿ ಕೇಂದ್ರದಲ್ಲಿ ಅರ್ಜಿ ಆಹ್ವಾನ

    • By admin
    • July 5, 2025
    • 59 views
    ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಬಗ್ಗೆ ಉಚಿತ ತರಬೇತಿಗಾಗಿ ಉಜಿರೆಯ ರುಡ್ ಸೆಟ್ ತರಭೇತಿ ಕೇಂದ್ರದಲ್ಲಿ ಅರ್ಜಿ ಆಹ್ವಾನ