ಸೇವಾ ಭಾರತಿ ಮತ್ತು ಗಿಫ್ಟ್ ಎಬಲ್ಡ್ ಫೌಂಡೇಶನ್ ಬೆಂಗಳೂರು ಇದರ ಸಹಯೋಗದಲ್ಲಿ ವಿಶೇಷ ಚೇತನರು ಹಾಗೂ ಪೋಷಕರಿಗೆ ಉಚಿತ ಜೇನು ಕೃಷಿ ಕಾರ್ಯಗಾರ

ಬೆಳ್ತಂಗಡಿ: ಸೇವಭಾರತಿ ಕನ್ಯಾಡಿ ಇದರ ಆಶ್ರಯದಲ್ಲಿ ಗಿಫ್ಟ್ ಎಬಲ್ಡ್ ಫೌಂಡೇಶನ್ ಬೆಂಗಳೂರು ಇವರ ಸಹಯೋಗದೊಂದಿಗೆ ಜ.31 ರಂದು ಸೇವಾ ಭಾರತಿ ಪ್ರಧಾನ ಕಚೇರಿಯಾದ ಸೇವಾನಿಕೇತಾನದಲ್ಲಿ ಸೇವಾ ಧಾಮದ ಮೂಲಕ ಗುರುತಿಸಲ್ಪಟ್ಟ ಬೆನ್ನು ಮೂಳೆ ಮುರಿತಕ್ಕೊಳಗಾದ ವಿಶೇಷ ಚೇತನರು ಹಾಗೂ ಪೋಷಕರಿಗೆ ಉಚಿತ ಜೇನು ಕೃಷಿ ಕಾರ್ಯಗಾರ ನಡೆಯಿತು. ಜೇನು ಕೃಷಿ ತರಬೇತುದಾರರಾದ ಶಶಿಧರ್ ರಾವ್ ಮತ್ತಿಲ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸಲು ಸುಸ್ಥಿರತೆ, ಹಾಗೂ ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು, ಜೇನು ಎಂದರೇನು ? ಅದರ ಪ್ರಭೇದಗಳು, ಪ್ರಾಮುಖ್ಯತೆ ಅದನ್ನು ಹೇಗೆ ಸಂರಕ್ಷಣೆ ಮತ್ತು ಮಾರಾಟ ಮಾಡಬೇಕು ಎಂದು ಸಂಪೂರ್ಣ ಮಾಹಿತಿ ನೀಡಿದರು. ಸೇವಾಭಾರತಿ ಮ್ಯಾನೇಜರ್ ಆದ ಮೋಹನ್ ಎಸ್ ಅವರು ಮಾತನಾಡಿ ವಿಶೇಷ ಚೇತನರು ಸ್ವ-ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬಿಯಾಗಬೇಕು ಹಾಗೂ ಅದರ ಪ್ರಯೋಜನವನ್ನು ತಿಳಿಸಿದರು. ತರಬೇತಿಯಲ್ಲಿ ೧೩ ಜನ ಬೆನ್ನು ಮೂಳೆ ಮೂರಿತಕ್ಕೊಳಗಾದ ವಿಶೇಷ ಚೇತನ ಫಲಾನುಭವಿಗಳು ಹಾಗೂ ಸೇವಾಭಾರತಿಯ ಸಿಬ್ಬಂದಿಗಳಾದ ಅಖಿಲೇಶ್ ಎ, ಚರಣ್ ಕುಮಾರ್ ಹಾಗೂ ಮನು ಆರ್ ಭಾಗವಹಿಸಿದ್ದರು. ಸ್ವ-ಉದ್ಯೋಗ ಕಾರ್ಯಕ್ರಮ ಸಂಯೋಜಕ ಅಖಿಲೇಶ್ ಎಸ್ ಅವರು ಕಾರ್ಯಕ್ರಮವನ್ನು ನಿರೂಪಸಿಕೊಟ್ಟರು.

Spread the love
  • Related Posts

    ಚಿರತೆ ದಾಳಿ ಕೂಲಿಕಾರ್ಮಿಕರಿಗೆ ಗಾಯ ಆನೆಹಾವಳಿಯ ಬಳಿಕ ಇದೀಗ ಚಿರತೆ ಕಾಟಕ್ಕೆ ಬೆಚ್ಚಿಬಿದ್ದ ಕಾರ್ಮಿಕರು

    ಬೇಲೂರು : ಬೇಲೂರು ತಾಲೂಕಿನ ಗೌತಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಚಿರತೆ ದಾಳಿ ಸಂಭವಿಸಿ ಇಬ್ಬರು ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗೌತವಳ್ಳಿ ಗ್ರಾಮವು ಬೇಲೂರು ತಾಲೂಕಿನ ಮಾಡ್ ಗೋಡು-ಚುಂಗನಹಳ್ಳಿ ಬಾರ್ಡರ್ ವ್ಯಾಪ್ತಿಗೆ ಸೇರಿದ್ದು, ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿರುವುದರಿಂದ ಚಿರತೆಗಳ…

    Spread the love

    ಶ್ರೀ ಕ್ಷೇತ್ರ ಮೊಂಟೆತ್ತಡ್ಕದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

    ಬೆಳ್ತಂಗಡಿ: ಶ್ರೀ ಕ್ಷೇತ್ರ ಮೊಂಟೇತ್ತಡ್ಕ ದೇವಸ್ಥಾನ ಶಿಬಾಜೆ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ದಿನಾಂಕ 26/02/2026ನೇ ಗುರುವಾರದಿಂದ 28/02/2026ನೇ ಶನಿವಾರದ ವರೆಗೆ ನಡೆಯಲಿದೆ. ವೈದಿಕ ಕಾರ್ಯಕ್ರಮಗಳು ದಿನಾಂಕ 26-02-2026ನೇ ಗುರುವಾರದಂದುಸಂಜೆ ಗಂಟೆ 7.00ಕ್ಕೆ : ತೋರಣ ಮುಹೂರ್ತ ರಾತ್ರಿ ಗಂಟೆ 7.30ಕ್ಕೆ:…

    Spread the love

    You Missed

    ಚಿರತೆ ದಾಳಿ ಕೂಲಿಕಾರ್ಮಿಕರಿಗೆ ಗಾಯ ಆನೆಹಾವಳಿಯ ಬಳಿಕ ಇದೀಗ ಚಿರತೆ ಕಾಟಕ್ಕೆ ಬೆಚ್ಚಿಬಿದ್ದ ಕಾರ್ಮಿಕರು

    • By admin
    • February 9, 2026
    • 55 views
    ಚಿರತೆ ದಾಳಿ ಕೂಲಿಕಾರ್ಮಿಕರಿಗೆ ಗಾಯ ಆನೆಹಾವಳಿಯ ಬಳಿಕ ಇದೀಗ ಚಿರತೆ ಕಾಟಕ್ಕೆ ಬೆಚ್ಚಿಬಿದ್ದ ಕಾರ್ಮಿಕರು

    ಶ್ರೀ ಕ್ಷೇತ್ರ ಮೊಂಟೆತ್ತಡ್ಕದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

    • By admin
    • February 8, 2026
    • 41 views
    ಶ್ರೀ ಕ್ಷೇತ್ರ ಮೊಂಟೆತ್ತಡ್ಕದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

    ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಜೊತೆಗೆ ಧಾರ್ಮಿಕ ನಂಬಿಕೆ ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ತಾಯಂದಿರದ್ದು: ತೆಂಕಲಗೂಡು ಶ್ರೀ

    • By admin
    • February 7, 2026
    • 28 views
    ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಜೊತೆಗೆ ಧಾರ್ಮಿಕ ನಂಬಿಕೆ ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸುವ  ಜವಾಬ್ದಾರಿ ತಾಯಂದಿರದ್ದು: ತೆಂಕಲಗೂಡು ಶ್ರೀ

    ಗ್ರಾ.ಪಂ ಕಡಿರುದ್ಯಾವರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಭಾಗಿತ್ವದಲ್ಲಿ ಕಾನರ್ಪದಲ್ಲಿ ನಿರ್ಮಾಣ ಗೊಂಡ ಮುಕ್ತಿದಾಮ ಲೋಕಾರ್ಪಣೆ

    • By admin
    • February 7, 2026
    • 232 views
    ಗ್ರಾ.ಪಂ ಕಡಿರುದ್ಯಾವರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಭಾಗಿತ್ವದಲ್ಲಿ ಕಾನರ್ಪದಲ್ಲಿ  ನಿರ್ಮಾಣ ಗೊಂಡ ಮುಕ್ತಿದಾಮ ಲೋಕಾರ್ಪಣೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಸೂರು ಹಸ್ತಾಂತರ

    • By admin
    • February 5, 2026
    • 65 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಸೂರು ಹಸ್ತಾಂತರ

    ಚಾರ್ಮಾಡಿ ಅರಣ್ಯದಲ್ಲಿ ಬಾರಿ ಪ್ರಮಾಣದಲ್ಲಿ ಹಬ್ಬಿದ ಬೆಂಕಿಯ ಕೆನ್ನಾಲಿಗೆ

    • By admin
    • February 2, 2026
    • 33 views
    ಚಾರ್ಮಾಡಿ ಅರಣ್ಯದಲ್ಲಿ  ಬಾರಿ ಪ್ರಮಾಣದಲ್ಲಿ ಹಬ್ಬಿದ ಬೆಂಕಿಯ ಕೆನ್ನಾಲಿಗೆ