ಸಿದ್ದಕಟ್ಟೆ: ಸ್ವಸ್ತಿಕ್ ಜೈನ ಯುವಜನ ಸಂಘ (ರಿ), ಸಿದ್ದಕಟ್ಟೆ ಇದರ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸೋಮವಾರ ಸ್ವಸ್ತಿಕ್ ಸಭಾ ಭವನ ಸಿದ್ದಕಟ್ಟೆಯಲ್ಲಿ ನಡೆಯಿತು.

SDM ಕಾಲೇಜು ಉಜಿರೆ ಇದರ ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ| ಎ. ಜಯಕುಮಾರ್ ಶೆಟ್ಟಿ ಯವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಿದರು. ನೂತನ ಅಧ್ಯಕ್ಷರಾದ ವೀರೇಂದ್ರ ಎಂ ಸಿದ್ದಕಟ್ಟೆ, ಪ್ರದಾನ ಕಾರ್ಯದರ್ಶಿ ಶುಶಾಂತ್, ಕೋಶಾಧಿಕಾರಿಯಾಗಿ ಪ್ರಾಣೇಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಉಪಾಧ್ಯಕ್ಷರುಗಳಾದ ಅವನ್, ಸಚಿನ್ ಹೆಗ್ಡೆ, ವಿವೇಕ್ ರಾಜ್, ಪ್ರಜೋತ್, ಜೊತೆ ಕಾರ್ಯದರ್ಶಿ ಅಕರ್ಷ್ ಜೈನ್, ಸಂಸ್ಕೃತಿಕ ಕಾರ್ಯದರ್ಶಿ ಸುಮನ್ ಜೈನ್, ಕ್ರೀಡಾ ಕಾರ್ಯದರ್ಶಿ ಯಾಗಿ ಮನೀಷ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರರು ಹಾಗೂ ಪೂರ್ವಧ್ಯಕ್ಷರ ಮಂಡಳಿ ಸದಸ್ಯರಾದ ವಿನಯಚಂದ್ರ ಜೈನ್, ಡಾ| ಸುದೀಪ್, ಮದ್ವರಾಜ್ ಜೈನ್, ಪಾಂಡಿರಾಜ್ ಜೈನ್, ಅಶೋಕ್ ಜೈನ್, ಸುಜನ್ ಜೈನ್, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಚಿವರಾದ ಅಭಯ ಚಂದ್ರ ಜೈನ್, ಅನಂತಪದ್ಮ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಪ್ರೇಮ, ಅರ್ಕಕೀರ್ತಿ ಇಂದ್ರ, ಜಯರಾಜ್ ಪುತ್ತಿಲ ರವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಅತಿಥಿಗಳನ್ನು ನಿಯೋಜಿತ ಅಧ್ಯಕ್ಷರಾದ ವೀರೇಂದ್ರ ಎಂ ಸಿದ್ದಕಟ್ಟೆಯವರು ಸ್ವಾಗತಿಸಿದರು. ಆಕರ್ಷ್ ಜೈನ್ ಧನ್ಯವಾದ ಸಲ್ಲಿಸಿದರು. ಸುಜನ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು





