ಹಲವು ವ್ಯಕ್ತಿಗಳ ಹೆಸರಿನಲ್ಲಿ ಅಕ್ರಮವಾಗಿ ಸಿಮ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೋಲೀಸರಿಂದ ಐವರ ಬಂಧನ

Belthangady: ಹಲವು ವ್ಯಕ್ತಿಗಳ ಹೆಸರಿನಲ್ಲಿ ಸಿಮ್‌ಕಾರ್ಡ್‌ ಬಳಸಿ ಬೆಂಗಳೂರು ಪ್ರಯಾಣ ಮಾಡುತ್ತಿರುವ ಕುರಿತು ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್‌ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಅನಿಲ್‌ ಕುಮಾರ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಇದೀಗ ಐದು ಮಂದಿಯನ್ನು ಬಂಧನ ಮಾಡಲಾಗಿದೆ.

ಫೆ.1 ರಂದು ಸಂಜೆ 4 ಗಂಟೆ ಸುಮಾರಿಗೆ ಧರ್ಮಸ್ಥಳ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಯುವಕರಿಗಾಗಿ ಹುಡುಕಾಟ ಮಾಡುವ ಸಂದರ್ಭ ಐದು ಮಂದಿ ಗುಂಪು ಸೇರಿದ್ದು, ಇವರನ್ನು ವಶಕ್ಕೆ ಪಡೆದುಕೊಂಡು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, ಅವರ ಬ್ಯಾಗ್‌ನಲ್ಲಿದ್ದ ಬೇರೆ ಬೇರೆ ವಿಳಾಸದ ಹೆಸರಿನಲ್ಲಿ ಅಕ್ರಮವಾಗಿ ಪಡೆದುಕೊಂಡಿದ್ದ 42 ಸಿಮ್‌ ಕಾರ್ಡ್‌ ಮತ್ತು ಅವರ ಬಳಿಕ ಇದ್ದ ಮೊಬೈಲ್‌ ಫೋನ್‌ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ರಮೀಝ್‌ (20), ಅಕ್ಬರ್‌ ಆಲಿ (24), ಮೊಹಮ್ಮದ್‌ ಮುಸ್ತಾಫಾ (22), ಮಹಮ್ಮದ್‌ ಸಾಧಿಕ್‌ (27), ಇನ್ನೋರ್ವ ಅಪ್ರಾಪ್ತ ಬಾಲಕ (17ವರ್ಷ) ನನ್ನು ಬಂಧನ ಮಾಡಲಾಗಿದೆ.

ಮೋಸ ವಂಚನೆ ಮಾಡುವ ಅಥವಾ ನಿಗೂಢ ಕಾರ್ಯ ಸಾಧನೆ ಬಳಸು ತಮ್ಮ ಗ್ಯಾಂಗ್‌ ಸದಸ್ಯರು ಸೇರಿ ಬಡ ವರ್ಗದ ಜನರನ್ನು ಟಾರ್ಗೆಟ್‌ ಮಾಡಿ ಸುಳ್ಳು ಹೇಳಿ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಒಟ್ಟು 42 ಸಿಮ್‌ ಖರೀದಿ ಮಾಡಿ, ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಯಾವುದೋ ವ್ಯವಹಾರ ನಡೆಸುತ್ತಾರೆ ಎಂದು ಧರ್ಮಸ್ಥಳ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಹಲವು ವ್ಯಕ್ತಿಗಳು ಭಾಗಿಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ಇದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಐದು ಜನ ಆರೋಪಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ವಂಚನೆ, ಒಳಸಂಚು ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಭಾರೀ ಮಾತ್ರದಲ್ಲಿ ವಿವಿಧ ವ್ಯಕ್ತಿಗಳ ಸಿಮ್‌ ಕಾರ್ಡ್‌ ಖರೀದಿಸಿ ಯಾರಿಗೆ ರವಾನೆಯಾಗುತ್ತಿತ್ತು ಎನ್ನುವುದು, ಯಾಕೆ ಬಳಕೆ ಮಾಡುತ್ತಿದ್ದರು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸರು ಈ ಪ್ರಕರಣದ ಕುರಿತು ತಮ್ಮ ತನಿಖೆ ಚುರುಕುಗೊಳಿಸಿದ್ದು, ಕಾರ್ಯಾಚರನೆ ನಡೆಸುತ್ತಿದ್ದಾರೆ.

Spread the love
  • Related Posts

    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರವು ರಾಜ್ಯದ ವಿವಿಧ ಭಾಗಗಳಲ್ಲಿ ನೂತನ 12 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಸಾರ್ವಜನಿಕರ ಭದ್ರತೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಸೇವೆಗಳನ್ನು ಜನರಿಗೆ ಇನ್ನಷ್ಟು ಸಮೀಪಕ್ಕೆ ತಲುಪಿಸಲು ಈ ಕ್ರಮ…

    Spread the love

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಮುಂಬೈ: ಐಸಿಸಿ ಟಿ–20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸಮಗ್ರ ಆಟದ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ…

    Spread the love

    You Missed

    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    • By admin
    • March 6, 2026
    • 6 views
    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    • By admin
    • March 5, 2026
    • 14 views
    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    • By admin
    • March 5, 2026
    • 39 views
    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    • By admin
    • March 5, 2026
    • 52 views
    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ, ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    • By admin
    • March 5, 2026
    • 23 views
    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ,  ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್

    • By admin
    • March 5, 2026
    • 17 views
    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್