ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಗುಡ್ಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರ ದುರ್ಮರಣ!

ಶಿರಸಿ: ಗುಡ್ಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ ಸಂತೆಬೈಲು ಇಡಗುಂದಿ ಗ್ರಾಮದಲ್ಲಿ ನಡೆದಿದೆ.

ಇಡಗುಂದಿ ರಾಮಲಿಂಗೇಶ್ವರ ದೇವಾಲಯದ ಹತ್ತಿರ ಒಳ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪದ ಗೌಳಿವಾಡದ ನಿವಾಸಿಗಳಾದ ಭಾಗ್ಯಶ್ರೀ ಎಡಗೆ (21), ಲಕ್ಷ್ಮೀ ಡೋಯಿಪಡೆ (38), ಸಂತೋಷ್ ಡೋಯಿಪಡೆ (18) ಹಾಗೂ ಮಾಳು ಡೋಯಿಪಡೆ (21) ಎಂದು ಗುರುತಿಸಲಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

READ ALSO

ಮಂಜುನಾಥ ನಾಗಪ್ಪ ಎಂಬವರ ತೋಟದಲ್ಲಿ 7 ಜನ ಕೆಲಸ ಮಾಡುವಾಗ ಗುಡ್ಡದ ಮಣ್ಣು ಕುಸಿದು ನಾಲ್ವರು ಮಣ್ಣಿನ ರಾಶಿಯಡಿ ಸಿಲುಕಿದ್ದಾರೆ. ನಾಲ್ವರ ಶವಗಳನ್ನೂ ಪತ್ತೆ ಮಾಡಿ ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.