ಬೆಂಗಳೂರು: ನಿಮ್ಮ ಮೊಬೈಲ್ ಫೋನ್ʼನಲ್ಲಿ ವಾಟ್ಸಾಪ್ʼನ್ನ ಬಳಸುತ್ತಿದ್ರೆ ಈ ಸುದ್ದಿಯನ್ನ ಓದಲೇಬೇಕು. ಯಾಕಂದ್ರೆ, ಕೆಲವು ಹಳೆಯ ಆಪರೇಟಿಂಗ್ ಸಿಸ್ಟಮ್ ಹೊಂದಿರೊ ಫೋನ್ʼಗಳಲ್ಲಿ ವಾಟ್ಸಾಪ್ ಶೀಘ್ರವೇ ತನ್ನ ಸೇವೆಯನ್ನ ಸ್ಥಗಿತಗೊಳಿಲಿದೆ. ಹಾಗಾದ್ರೆ, ಆಪರೇಟಿಂಗ್ ಸಿಸ್ಟಂ ಯಾವ್ಯಾವು ಅನ್ನೋ ಮಾಹಿತಿ ಇಲ್ಲಿದೆ.
1) ಆಂಡ್ರಾಯ್ಡ್ ಮತ್ತು iOS ಆಪರೇಟಿಂಗ್ ಸಿಸ್ಟಂಗಳಿಗೆ ಪ್ರಮುಖ ಸುದ್ದಿ
ವರದಿಗಳ ಪ್ರಕಾರ, ಕೆಲವು ಹಳೆಯ ಆಪರೇಟಿಂಗ್ ಸಿಸ್ಟಮ್ʼಗಳಿರುವ ಸ್ಮಾರ್ಟ್ ಫೋನ್ʼಗಳಲ್ಲಿ ವಾಟ್ಸಾಪ್ ಸೇವೆ ನಿಲ್ಲಿಸಬಹುದು.
2) ಕೆಲವು ಆಪಲ್ ಐಫೋನ್ʼಗಳ ಮೇಲೆ ಪರಿಣಾಮ ಬೀರುತ್ತೆ..!
ವರದಿಗಳ ಪ್ರಕಾರ, ಆಪಲ್ʼನ ಹಳೆಯ ಆಪರೇಟಿಂಗ್ ಸಿಸ್ಟಮ್ʼನಲ್ಲಿ ವಾಟ್ಸಾಪ್ ಕೆಲಸ ಮಾಡುವುದನ್ನ ಸದ್ಯದಲ್ಲೇ ನಿಲ್ಲಿಸಲಿದೆ. ಐಓಎಸ್ 9 ಮತ್ತು ಹಳೆಯ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಐಫೋನ್ʼಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ.
3) ಆಂಡ್ರಾಯ್ಡ್ ಫೋನ್ʼಗಳ ಮೇಲೂ ಪರಿಣಾಮ ಬೀರುತ್ತೆ..!
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ʼನಲ್ಲೂ ಬದಲಾವಣೆ ಮಾಡಲಾಗಿದೆ ಎಂದು ವರದಿ ಹೇಳಿದ್ದು, ಆಂಡ್ರಾಯ್ಡ್ 4.0.3 ಗಿಂತ ಹಳೆಯ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್ ಫೋನ್ʼಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ.
4) ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ʼನಿಂದ ಹೊಸ ನಿರ್ಧಾರ..!
ವಾಟ್ಸಾಪ್ʼನ ಹೊಸ ನಿರ್ಧಾರದಿಂದ ಲಿನಕ್ಸ್ʼನ ಹಳೆಯ ಆಪರೇಟಿಂಗ್ ಸಿಸ್ಟಮ್ʼಗಳ ಮೇಲೂ ಪರಿಣಾಮ ಬೀರಲಿದೆ. ವಾಟ್ಸಾಪ್ ಕಂಪನಿಯಿಂದ ಬಂದ ಮಾಹಿತಿ ಪ್ರಕಾರ, KaiOS 2.5.1 ಅಥವಾ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಕೇವಲ ವಾಟ್ಸಾಪ್ʼನ್ನ ಬೆಂಬಲಿಸುತ್ತದೆ.
5) ವಾಟ್ಸಾಪ್ ಬಳಸುವುದು ಹೇಗೆ..?
ತಜ್ಞರ ಪ್ರಕಾರ, ಯಾವುದೇ ಸಮಸ್ಯೆಯಿಲ್ಲದೆ ವಾಟ್ಸಾಪ್ ಬಳಸಲು ನೀವು ನಿಮ್ಮ ಆಪರೇಟಿಂಗ್ ಸಿಸ್ಟಮ್ʼನ್ನ ಅಪ್ಡೇಟ್ ಮಾಡಬೇಕಾಗುತ್ತದೆ. ಆಪಲ್ ಐಫೋನ್ʼನಲ್ಲಿ, ನೀವು ಇತ್ತೀಚಿನ ಆಪರೇಟಿಂಗ್ ಸಿಸ್ಟಂʼನ್ನ ಅಪ್ ಡೇಟ್ ಮಾಡಬೇಕು. ಆಂಡ್ರಾಯ್ಡ್ ಫೋನ್ ಬಳಕೆದಾರರು ಸೆಟ್ಟಿಂಗ್ಸ್ʼಗೆ ಹೋಗಿ ಇತ್ತೀಚಿನ ಆಪರೇಟಿಂಗ್ ಸಿಸ್ಟಂ ಡೌನ್ ಲೋಡ್ ಮಾಡಿಕೊಳ್ಳಬೋದು.