TRENDING
Next
Prev

ABVP ಬಂಟ್ವಾಳ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಸಿದ್ದಕಟ್ಟೆಯ ಅಶ್ವಿನಿ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಅನಂತ ಪದ್ಮ ಹೆಲ್ತ್ ಸೆಂಟರ್ ನ ವೈದ್ಯೆಯಾದ ಡಾ.ಸೀಮಾ ಸುದೀಪ್ ಉದ್ಘಾಟಿಸಿದರು


ಎಬಿವಿಪಿ ಹಿರಿಯ ಕಾರ್ಯಕರ್ತರಾದ ಅಕ್ಷತಾ ಬಜ್ಪೆ ಮಾತಾನಾಡಿ, ಗಡಿಯಲ್ಲಿ ನಿಂತುಕೊಂಡು ದೇಶವನ್ನು ರಕ್ಷಿಸುವ ಹೆಣ್ಣಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿ ಖಂಡಿತವಾಗಿಯೂ ಇದೆ ಎಂದರು.

READ ALSO

ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟು ಕು.ರಮ್ಯಶ್ರೀ ಜೈನ್ ಇವರನ್ನು ಸನ್ಮಾನಿಸಲಾಯಿತು.

ಬಂಟ್ವಾಳ ನಗರ ವಿದ್ಯಾರ್ಥಿನಿ ಪ್ರಮುಖ್ ರೇಶ್ಮಾ, ಹಾಗೂ ಸಿದ್ದಕಟ್ಟೆ ನಗರ ವಿದ್ಯಾರ್ಥಿನಿ ಪ್ರಮುಖ್ ನಿಶಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.