ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಎತ್ತು ವಿದ್ಯುತ್ ಅವಘಡದಲ್ಲಿ ಮೃತ್ಯು! ಬಡ ಕುಟುಂಬಕ್ಕೆ ನೆರವು ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕು ರಾಜೀವ್ ಗಾಂಧಿ ಲೇಔಟ್ ನ ಹಾಜೀರಾ ರವರ ಎತ್ತು ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಅಸುನೀಗಿದ್ದು ಇದಕ್ಕಾಗಿ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 10000 ಸಹಾಯಧನವನ್ನು ನೀಡಲಾಯಿತು.

ಮನೆಮನೆಗೆ ಕುಡಿಯುವ ನೀರು ಸರಬರಾಜು ಮಾಡಲು ಎತ್ತಿನಗಾಡಿಯನ್ನು ಅವಲಂಬಿಸಿದ್ದು, ಇದಕ್ಕೆ ಎತ್ತುಗಳನ್ನು ಬಳಕೆ ಮಾಡಲಾಗುತಿತ್ತು. ಎಂದಿನಂತೆ ಎತ್ತನ್ನು ಹೊರಗಡೆ ಕಟ್ಟಿ ಹಾಕಿದ್ದು ಆಕಸ್ಮಿಕವಾಗಿ ಎತ್ತು ವಿದ್ಯುತ್ ಸ್ಪರ್ಶವಾಗಿ ಅಸುನೀಗಿದ್ದು ಕುಟುಂಬದ ಆದಾಯದ ಮೂಲವೇ ಕಳೆದು ಹೋದಂತಾಗಿದ್ದು, ಇದನ್ನೇ ನಂಬಿಕೊಂಡು ಬಂದ ಹಾಜೀರಾ ಕುಟುಂಬಕ್ಕೆ ಇದೀಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಸರೆಯಾಗಿದೆ.

READ ALSO

ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಸಹಾಯಧನ ರೂ 10000 ವನ್ನು ಸ್ಥಳೀಯ ಕೌನ್ಸಿಲರ್ ಬಾಬಾ ಫಕ್ರುದ್ದೀನ್ ರವರು ವಿತರಿಸಿದರು.
ಈ ಸಂದರ್ಭ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮೇಲ್ವಿಚಾರಕರಾದ ಚೇತನ್ ಸೇವಾಪ್ರತಿನಿಧಿ ಅರ್ಷಿಯಾ ಪದಾಧಿಕಾರಿ ಫರ್ಜಾನಾ ನೌಷಾದ್ ಉಪಸ್ಥಿತರಿದ್ದರು.