ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ

ಧರ್ಮಸ್ಥಳ: ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮದಂತೆ ‘ಬ್ಯಾಂಕ್‌ಗಳ ವ್ಯವಹಾರ ಪ್ರತಿನಿಧಿ’ (Business Correspondence) ಆಗಿ ಸೇವೆಗೈಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ದೇಶದ ಬ್ಯಾಂಕಿಂಗ್ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಭಾರತೀಯ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ‘ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ’ ಲಭಿಸಿದೆ.

ದೇಶದಲ್ಲಿ ಬಿ.ಸಿ.ಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಪೈಕಿ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಾತ್ರ ಈ ಪ್ರಶಸ್ತಿಗೆ ಭಾಜನವಾಗಿದೆ. ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್‌ರವರು ಪ್ರಶಸ್ತಿ ಪ್ರಧಾನ ಮಾಡಿದರು.

ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ ಈ ಬಿ.ಸಿ. ಕಾರ್ಯಚಟುವಟಿಕೆ ಕೊಡುಗೆಗಳನ್ನು ಮಾನ್ಯ ಸಚಿವರು ಶ್ಲಾಘಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಿ. ಸುರೇಂದ್ರ ಕುಮಾರ್‌ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಆ‌ರ್. ಪೈಯವರು ಉಪಸ್ಥಿತರಿದ್ದರು.

ಇದೊಂದು ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು ತೀರ್ಪುಗಾರರಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ದೀಪಕ್ ವರ್ಮ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮಾಜಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಸ್. ಕೊಯ್ಲಿ, ಇಂಡಿಯನ್ ಓವರ್ಸಿಸ್‌ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ. ನರೇಂದ್ರ, ಕೆನರಾ ಬ್ಯಾಂಕಿನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರೊ. ರಾಜೀವ್ ದುಬೆ, ಸಿಡ್ಡಿಯ ಉಪವ್ಯವಸ್ಥಾಪಕ ನಿರ್ದೇಶಕ ಎನ್.ಕೆ. ಮೈನಿ, ಭಾರತೀಯ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆಯ ಅಧ್ಯಕ್ಷ ಮುಖೇಶ್‌ ಮೋಹನ್ ಗುಪ್ತಾ ಇನ್ನಿತರರು ತೀರ್ಪುಗಾರರಾಗಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ, ಸ್ಟಾಂಡರ್ಡ್ ಚಾರ್ಟಡ್್ರ ಬ್ಯಾಂಕ್ ಮುಂತಾದ ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳು ಈ ಪ್ರಶಸ್ತಿಗೆ ಬ್ಯಾಂಕಿಂಗ್‌ ವಿಭಾಗದಿಂದ ಆಯ್ಕೆಯಾಗಿರುತ್ತವೆ.

ದೇಶದ ಎಲ್ಲಾ ಗ್ರಾಮ ಗ್ರಾಮಗಳಲ್ಲಿ ಬ್ಯಾಂಕ್‌ಗಳು ತಮ್ಮ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆ ನೀಡುವುದು ಅಸಾಧ್ಯವೆಂಬುದನ್ನು ಪರಿಗಣಿಸಿದ ವಿತ್ತ ಸಚಿವಾಲಯ ಹಾಗೂ ದೇಶದ ಆರ್ಥಿಕ ನಿಯಂತ್ರಕ ಸಂಸ್ಥೆಗಳು ಆರ್ಥಿಕ ಸೇರ್ಪಡೆ (Financial Inclusion) ಕಾರ್ಯಕ್ರಮದಡಿ ಬಿ.ಸಿ. (Business Correspondence -ಪ್ರತಿನಿಧಿ) ಸೇವೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದರನ್ವಯ ‘ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್’ ಅನ್ನು ಬ್ಯಾಂಕ್‌ಗಳು ‘ಎಸ್‌.ಹೆಚ್.ಜಿ. ಬ್ಯಾಂಕ್ ಕ್ರೆಡಿಟ್ ಲಿಂಕೆಜ್ ಪ್ರೋಗ್ರಾಂ (ಸ್ವ ಸಹಾಯ ಸಂಘಗಳ ಬ್ಯಾಂಕ್ ಸಾಲ ಸೌಲಭ್ಯ ಒದಗಣೆ)’ ಸೇವೆಗಳನ್ನು ಒದಗಿಸಲು ತನ್ನ ಬ್ಯಾಂಕ್‌ನ ವ್ಯವಹಾರ ಪ್ರತಿನಿಧಿ ಅಂದರೆ ‘ಬಿ.ಸಿ.’ಯಾಗಿ ನಿಯೋಜಿಸಿಕೊಂಡಿವೆ. ತನ್ಮೂಲಕ ಗ್ರಾಮ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ಗಳಿಂದ ನೇರವಾಗಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿವೆ.

ಈ ಮೂಲಕ ಬ್ಯಾಂಕ್‌ನ ಸಾಲ ಸೌಲಭ್ಯಗಳನ್ನು ಗ್ರಾಮ ಗ್ರಾಮಗಳಿಗೆ ತಲುಪಿಸುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ಗಳಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಇಂದು ಲಕ್ಷಾಂತರ ಕೃಷಿ, ಸ್ವ ಉದ್ಯೋಗ ಚಟುವಟಿಕೆಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ರೈತರು, ಬಡವರು, ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಬ್ಯಾಂಕ್‌ನಿಂದ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಶೇ.14ರ (ಬ್ಯಾಂಕ್ ಬಡ್ಡಿದರ ಹಾಗೂ ಬ್ಯಾಂಕ್ ನೀಡುವ ಬಿ.ಸಿ. ಸೇವಾ ಶುಲ್ಕ ಸೇರಿ) ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು, ತರಬೇತಿಗಳನ್ನು ಒದಗಿಸುವ ಮೂಲಕ ಲಕ್ಷಾಂತರ ಮಂದಿಗೆ ಗುಡಿ ಕೈಗಾರಿಕೆಗಳು, ಕಿರು ಉದ್ಯಮ, ವ್ಯಾಪಾರ, ಆರ್ಥಿಕ ಚಟುವಟಿಕೆಗಳನ್ನು ನಡೆಸಲು ನೆರವಾಗಿದೆ.

ಸ್ವಉದ್ಯೋಗವನ್ನು ಸೃಷ್ಟಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈವರೆಗೆ ಬ್ಯಾಂಕಿನ ಮೂಲಕ ರೂ. 33,678 ಕೋಟಿ ಮೊತ್ತದ ಆರ್ಥಿಕ ಸೌಲಭ್ಯವನ್ನು ಒದಗಿಸಲಾಗಿದೆ. ತನ್ಮೂಲಕ ಲಕ್ಷಾಂತರ ಯುವಕ-ಯುವತಿಯರು ಸ್ವಉದ್ಯೋಗಿಯಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣೀಭೂತವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 4,41,000 ಮಂದಿಗೆ ಸ್ವಉದ್ಯೋಗ, ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕಿನಿಂದ ಸಾಲ ಸೌಲಭ್ಯಗಳನ್ನು ಒದಗಿಸಿ ಎಂ.ಎಸ್.ಎಂ.ಇ. ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆಯನ್ನು ನೀಡಿದೆ.

ಗ್ರಾಮಾಭಿವೃದ್ಧಿ ಯೋಜನೆಯು ದೇಶದ ಅತ್ಯಂತ ಪ್ರಮುಖ ಬ್ಯಾಂಕ್‌ ಆದ ‘ಸಿಡ್ಬಿ (SIDBI) ಬ್ಯಾಂಕ್‌ನ ‘ಪ್ರಯಾಸ್’ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿದ್ದು ಪ್ರಸ್ತುತ ಶೇ. 13.50 ಬಡ್ಡಿದರದಲ್ಲಿ ಕಿರು ಉದ್ಯಮವನ್ನು ಆರಂಭಿಸಲು ಗರಿಷ್ಠ ರೂ. 5 ಲಕ್ಷ ಮೊತ್ತದ ಸಾಲವನ್ನು ಸಿಡ್ಬಿಯಿಂದ ನೇರವಾಗಿ ಸ್ವ ಉದ್ಯೋಗ ಘಟಕ ಪ್ರಾರಂಭಿಸುವ ಸದಸ್ಯರಿಗೆ ದೊರಕಿಸಿಕೊಡುತ್ತಿದೆ. ಸಿಡ್ನಿ ಪ್ರಯಾಸ್ ಕಾರ್ಯಕ್ರಮದ ಮೂಲಕ 68,457 ಸದಸ್ಯರಿಗೆ ರೂ. 2,460 ಕೋಟಿ ಮೊತ್ತದ ಸಾಲ ಸೌಲಭ್ಯಗಳನ್ನು ಒದಗಿಸಿ ಎಂ.ಎಸ್.ಎಂ.ಇ. ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಕೊಡುಗೆಯನ್ನು ನೀಡಿರುತ್ತದೆ. ಆ ಮೂಲಕ ಸಾವಿರಾರು ಮಂದಿ ಗ್ರಾಮೀಣ ಪ್ರದೇಶದ ಯುವಕ-ಯುವತಿಯರು ವ್ಯಾಪಾರ, ಕಿರು ಉದ್ಯಮಗಳನ್ನು ಆರಂಭಿಸುವ ಮೂಲಕ ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದಾರೆ

Spread the love
  • Related Posts

    ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಬಂದಾರು ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗೆ ಭೇಟಿ ನೀಡಿ ಶುಭ ಹಾರೈಸಿದ ಶಾಸಕ ಹರೀಶ್ ಪೂಂಜ

    ಬಂದಾರು: (ಡಿ. 04) ಬಂದಾರು ಗ್ರಾಮ ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ಡಿ. 4 ರಂದು ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್…

    Spread the love

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 418 ಶಾಲೆಗಳಿಗೆ 2.50ಕೋಟಿ ವೆಚ್ಚದಲ್ಲಿ ಪಿಠೋಪಕರಣಗಳ ಒದಗಣೆ

    Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು 418 ಶಾಲೆಗಳಿಗೆ ಪಿಠೋಪಕರಣಗಳ ವಿತರಣೆಗೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿ ರೂ. 2.50 ಕೋಟಿ ವೆಚ್ಚದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ,…

    Spread the love

    You Missed

    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

    • By admin
    • January 8, 2026
    • 32 views
    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

    ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಬಂದಾರು ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗೆ ಭೇಟಿ ನೀಡಿ ಶುಭ ಹಾರೈಸಿದ ಶಾಸಕ ಹರೀಶ್ ಪೂಂಜ

    • By admin
    • January 5, 2026
    • 18 views
    ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಬಂದಾರು ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗೆ ಭೇಟಿ ನೀಡಿ ಶುಭ ಹಾರೈಸಿದ ಶಾಸಕ ಹರೀಶ್ ಪೂಂಜ

    “ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಪೋಷಕ- ವಿದ್ಯಾರ್ಥಿ ಸಂವಾದ” ಕಾರ್ಯಕ್ರಮ

    • By admin
    • January 3, 2026
    • 31 views
    “ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಪೋಷಕ- ವಿದ್ಯಾರ್ಥಿ ಸಂವಾದ” ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 418 ಶಾಲೆಗಳಿಗೆ 2.50ಕೋಟಿ ವೆಚ್ಚದಲ್ಲಿ ಪಿಠೋಪಕರಣಗಳ ಒದಗಣೆ

    • By admin
    • January 1, 2026
    • 86 views
    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 418 ಶಾಲೆಗಳಿಗೆ 2.50ಕೋಟಿ ವೆಚ್ಚದಲ್ಲಿ ಪಿಠೋಪಕರಣಗಳ ಒದಗಣೆ

    ಅರ್ಪಣಂ2025

    • By admin
    • December 29, 2025
    • 42 views

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ

    • By admin
    • December 24, 2025
    • 61 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ