ನವದೆಹಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗೆ ಸ್ಕಾಚ್ ಗ್ರೂಪ್‌ನ BFSI ವಿಭಾಗದಡಿ ಹಣಕಾಸು ಒಳಗೊಳ್ಳಿಕೆಗಾಗಿ ಸ್ಕಾಚ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು 2026ರ ಜನವರಿ 10ರಂದು ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಪ್ರದಾನ ಮಾಡಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ CEO ಅನಿಲ್ ಕುಮಾರ್ ಎಸ್.ಎಸ್, ಹಾಗೂ ಹಣಕಾಸು ಪ್ರಾದೇಶಿಕ ನಿರ್ದೇಶಕರಾದ ಶಾಂತಾರಾಮ್ ಪೈ ಯವರಿಗೆ ಸ್ಕಾಚ್ ಗ್ರೂಫ್ ಚೇರ್ಮನ್ ಸಮೀರ್ ಕೋರ್ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ಸ್ವಸಹಾಯ ಸಂಘ ಸಂಪರ್ಕ ಕಾರ್ಯಕ್ರಮವು (Self Help Group Linkage Programme) ತಳಮಟ್ಟದ ಸ್ವಸಹಾಯ ಸಂಘಗಳನ್ನು ಅಧಿಕೃತ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಮೂಲಕ ಹಣಕಾಸು ಒಳಗೊಳ್ಳಿಕೆಯನ್ನು ಉತ್ತೇಜಿಸುತ್ತದೆ. ಈ ಕಾರ್ಯಕ್ರಮವು ಗ್ರಾಮೀಣ ಹಾಗೂ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ, ವಿಶೇಷವಾಗಿ ಮಹಿಳೆಯರಿಗೆ, ಉಳಿತಾಯ, ಸಾಲ, ವಿಮೆ ಮತ್ತು ಪಿಂಚಣಿ ಸೇವೆಗಳನ್ನು ಜವಾಬ್ದಾರಿಯಿಂದ ಪಡೆಯಲು ಅವಕಾಶ ಕಲ್ಪಿಸಿ, ಹಣಕಾಸು ಶಿಸ್ತು, ಜೀವನೋಪಾಯ ಮತ್ತು ಸಮುದಾಯ ಮಟ್ಟದ ದೀರ್ಘಕಾಲಿಕ ಆರ್ಥಿಕ ಸ್ವಾವಲಂಬನೆಯನ್ನು ಬೆಳೆಸುತ್ತದೆ.






