ಜಾರ್ಖಂಡ್ ಮೂಲದ ಮಾನಸಿಕ ಅಸ್ವಸ್ಥ ಯುವಕನನ್ನು ತಾಯ್ನಾಡಿಗೆ ಕರೆದು ಕೊಂಡು ಹೋಗಿ ಕುಟುಂಬ ಸದಸ್ಯರಿಗೆ ಒಪ್ಪಿಸಿದ ಬೆಳ್ತಂಗಡಿಯ ಯುವಕರ ತಂಡ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸೋಮಂತ್ತಡ್ಕದಲ್ಲಿ ಕಳೆದ ಮೂರು ವರ್ಷದ ಹಿಂದೆ ಪ್ರತಿದಿನ ತಿರುಗಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಗಮನಿಸಿದ ಸರಕಾರಿ ಬಸ್ ಚಾಲಕ ನಾರಾಯಣ ಪೂಜಾರಿಯವರು ಸೋಮಂತ್ತಡ್ಕದಲ್ಲಿರುವ ಸಂಗಮ್ ಹೋಟೆಲ್‌ ಮಾಲೀಕ ಅಬ್ದುಲ್ ಲತೀಫ್ ಎಂಬವರಿಗೆ ಈ ಬಗ್ಗೆ ಮಾಹಿತಿ ನೀಡಿದಾಗ ಅವನನ್ನು ಹೊಟೇಲ್ ಕರೆದುಕೊಂಡು ಬಂದು ರೂಂ ವ್ಯವಸ್ಥೆ ಮಾಡಿ ಪ್ರತಿದಿನ ಊಟ,ತಿಂಡಿ ನೀಡಿ ನೋಡಿಕೊಳ್ಳುತ್ತಿದ್ದರು ಅದರಂತೆ ಅಬ್ದುಲ್‌ ಲತೀಫ್ ಆ ವ್ಯಕ್ತಿಯ ಬಳಿ ವಿಚಾರಿಸಿದಾಗ ಯಾವುದೇ ರೀತಿಯ ಸರಿಯಾದ ಮಾತುಗಳನ್ನು ಹೇಳುತ್ತಿರಲ್ಲಿಲ್ಲ ನಂತರ ಪ್ರತಿದಿನ ಹೊಟೇಲ್ ನಲ್ಲಿ ಕೆಲಸ ಮಾಡಲು ಆರಂಭಿಸಿದ್ದ ಇದಕ್ಕೆ ಅವರು ಆತ ದುಡಿದ ತಿಂಗಳ ಸಂಬಳವನ್ನು ಖಾತೆಯೊಂದನ್ನು ಮಾಡಿ ಪ್ರತಿ ತಿಂಗಳು ಹಣವನ್ನು ಹಾಕುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಆತನ ವರ್ತನೆಗಳಲ್ಲಿ ಬದಲಾವಣೆ ಬಂದಿರುವ ಕಾರಣ ಹೊಟೇಲ್ ಮಾಲೀಕ ಅಬ್ದುಲ್‌ ಲತೀಫ್ ಸ್ಥಳೀಯ ಸಮಾಜ ಸೇವಕ ಅಬ್ದುಲ್ ಅಜೀಜ್ ಅವರ ತಂಡದ ಸದಸ್ಯರಿಗೆ ಮಾಹಿತಿ ನೀಡಿದ್ದರು. ಆತನ ಊರಿನ ಬಗ್ಗೆ ವಿಚಾರಿಸಿದಾಗ ಅಲ್ವ ಸ್ವಲ್ಪ ಮಾತುಗಳನ್ನು ಮಾತಾನಾಡುತ್ತಿದ್ದ. ಬಳಿಕ ಮಂಗಳೂರಿನ ಮನೋವೈದ್ಯರಾದ ಡಾ.ಕಿರಣ್ ಕುಮಾರ್ ಅವರಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಬಳಿಕ ನುರ್ಥಾ ಎಂಬ ಹೆಸರನ್ನು ಹೇಳುತ್ತಿದ್ದ ಇದರ ಬಗ್ಗೆ ಗೂಗುಲ್ ಮೂಲಕ ಹುಡುಕಾಟ ನಡೆಸಲಾಗಿತ್ತು. ಕೊನೆಗೆ ವಿವಿಧ ರಾಜ್ಯದ ಕೆಲವು ವ್ಯಕ್ತಿಗಳನ್ನು ಸಂಪರ್ಕಿಸಿ ನುರ್ಥಾ ಎಂಬ ಹೆಸರು ಬರುವ ವಿಳಾಸ ಪತ್ತೆ ಹಚ್ಚಲು ಮುಂದಾಗಿತ್ತು. ಈ ವೇಳೆ ಜಾರ್ಖಂಡ್ ರಾಜ್ಯದಲ್ಲಿ ಈ ನುರ್ಥಾ ಪ್ರದೇಶದ ಬಗ್ಗೆ ಮಾಹಿತಿ ಸಿಕ್ಕಿದ್ದು ಅದರಂತೆ ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಗ್ಭೂಮ್ ನ ಹಟಗಮ್ಹರಿಯಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಾಲೇಶ್ವರ ಓರಾನ್ ಅಧಿಕಾರಿಯನ್ನು ಸಂಪರ್ಕಿಸಿ ಅವರ ಸಹಾಯ ಪಡೆದುಕೊಂಡು ವ್ಯಕ್ತಿಯ ಫೋಟೋ ಕಳುಹಿಸಲಾಗಿತ್ತು. ಅವರು ಒಂದೇ ದಿನದಲ್ಲಿ ಸ್ಥಳೀಯ ಕೆಲ ವ್ಯಕ್ತಿಗಳ ಮೂಲಕ ಆತನ ಮನೆಯ ಸದಸ್ಯರನ್ನು ಪತ್ತೆ ಮಾಡಿದ್ದಾರೆ. ನಂತರ ಮನೆಯವರ ಮೊಬೈಲ್ ನಂಬರ್ ಕಳುಹಿಸಿ ಅವರನ್ನು ವಾಟ್ಸಾಪ್ ವಿಡಿಯೋ ಕಾಲ್ ಮುಖಾಂತರ ಸಂಪರ್ಕಿಸಿ ವ್ಯಕ್ತಿಯನ್ನು ತೋರಿಸಿ ಮಾತಾನಾಡಿಸಿದಾಗ ಆತನ ಹೆಸರು ಸುಲ್ಬು ಸಿಂಖು (30) ಪ್ರಾಯ ಎಂಬುವುದು ಖಚಿತವಾಗಿಯಿತು. ಆತನಿಗೆ ಕಳೆದ ಆರು ವರ್ಷಗಳಿಂದ ಮಾನಸಿಕ ರೋಗ ಇದ್ದು ನಮ್ಮ ಮನೆಯಿಂದ ಐದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಆದ್ರೆ ಯಾವುದೇ ನಾಪತ್ತೆ ಪ್ರಕರಣ ದಾಖಲಿಸಲಾಗಿಲ್ಲ ಎಂದಿದ್ದಾರೆ‌. ನಂತರ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ಸಂಗಮ್ ಹೊಟೇಲ್ ಗೆ ಭೇಟಿ ಮಾಡಿ ಜಾರ್ಖಂಡ್ ಸಬ್ ಇನ್ಸ್ಪೆಕ್ಟರ್ ಜೊತೆ ಕರೆ ಮಾಡಿ ಮಾತಾನಾಡಿ ಮನೆಗೆ ತಲುಪಿಸುವ ಬಗ್ಗೆ ಚರ್ಚೆ ನಡೆಸಿದರು ಬಳಿಕ ನಾವು ಸಹಕರಿಸುವುದಾಗಿ ಜಾರ್ಖಂಡ್ ಸಬ್ ಇನ್ಸ್ಪೆಕ್ಟರ್ ಹೇಳಿದ್ದರು.





ಯುವಕನನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಿದ ಪ್ರತೀಕ್ ಕೋಟ್ಯಾನ್ ಬೆಳ್ತಂಗಡಿ ಮತ್ತು ಮಹಮ್ಮದ್ ಜಬೀರ್

ಮನೆ ಸದಸ್ಯರು ಆದಿವಾಸಿಗಳಾಗಿರುವ ಕಾರಣ ಹೊರ ರಾಜ್ಯಕ್ಕೆ ಬರುವ ಪ್ರಯತ್ನ ಮಾಡಿರಲ್ಲಿಲ್ಲ. ಅದರಂತೆ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಅವರ ನಿರ್ದೇಶನದಂತೆ ಮೇರೆಗೆ ಫೆ.3 ರಂದು ರಾತ್ರಿ ಪ್ರತೀಕ್ ಕೋಟ್ಯಾನ್ ಬೆಳ್ತಂಗಡಿ ಮತ್ತು ಮಹಮ್ಮದ್ ಜಬೀರ್ ಸೇರಿಕೊಂಡು ಮಾನಸಿಕ ಅಸ್ವಸ್ಥನಾಗಿರುವ ಸುಲ್ಬು ಸಿಂಝ(35) ನನ್ನು ಬೆಂಗಳೂರಿಗೆ ಬಾಡಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಫೆ.4 ರಂದು ಶನಿವಾರ ಬೆಳಗ್ಗೆ 5 ಗಂಟೆಗೆ ಬೆಂಗಳೂರು ವಿಮಾನದ ಮೂಲಕ ಜಾರ್ಖಂಡ್ ರಾಜ್ಯದ ರಾಂಚಿ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬಾಡಿಗೆ ಕಾರಿನಲ್ಲಿ 270 ಕಿ.ಮೀ.ನಲ್ಲಿರುವ ಪಶ್ಚಿಮ ಸಿಂಗ್ಭೂಮ್ ನ ಹಟಗಮ್ಹರಿಯಾ ಪೊಲೀಸ್ ಠಾಣೆಗೆ ಹೋಗಿ ಅಲ್ಲಿನ ಪೊಲೀಸರ ಮೂಲಕ ಸುಲ್ಬು ಸಿಂಝ ಕುಟುಂಬ ಸದಸ್ಯರನ್ನು ಠಾಣೆಗೆ ಕರೆಸಿ ಮಾತುಕತೆ ಮಾಡಿ ಮನೆಯವರೊಂದಿಗೆ ಕಳುಹಿಸಿಕೊಡಲಾಗಿದೆ.

ಕುಟುಂಬದ ಸದಸ್ಯರೊಂದಿಗೆ ಸುಲ್ಬು ಸಿಂಝ

ವಿಮಾನ ನಿಲ್ದಾಣದಲ್ಲಿ ಮಾನವೀಯತೆ ಮೆರೆದ ಸಿಬ್ಬಂದಿ: ಒಟ್ಟು ಮೂರು ಜನರಿಗೆ ವಿಮಾನ ಟಿಕೆಟ್ ಅಗಿತ್ತು ಅದರಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋದಾಗ ಸುಲ್ಬು ಸಿಂಝ ಆಧಾರ್ ಕಾರ್ಡ್ ಜೆರಾಕ್ಸ್ ಊರಿನಿಂದ ವಾಟ್ಸಾಪ್ ಮೂಲಕ ಕಳುಹಿಸಿದ್ದರು‌ ಒರಿಜಿನಲ್ ಇಲ್ಲದ ಕಾರಣ ಒಳಗಡೆ ಬಿಡಲು ಭದ್ರತಾ ಸಿಬ್ಬಂದಿಗಳು ನಿರಾಕರಿಸಿದ್ದರು ನಂತರ ಆತನ ಬಗ್ಗೆ ಎಲ್ಲವನ್ನೂ ವಿವರಿಸಿದ ಬಳಿಕ ಮಾನವೀಯತೆ ಮೇರೆಗೆ ಒಳಕಳುಹಿಸಿ ಸಹಕರಿಸಿದ ಸಿಎಫ್ಎಸ್ಎಫ್ ಭದ್ರತಾ ಸಿಬ್ಬಂದಿಗಳು.

ಜಾರ್ಖಂಡ್ ಗೆ ಕರೆದುಕೊಂಡು ಹೋಗಿ ವಾಪಸ್ ಇಬ್ಬರು ಯುವಕರು ಊರಿಗೆ ಬರುವ ಎಲ್ಲಾ ಖರ್ಚು ವೆಚ್ಚವನ್ನು ಸಂಗಮ್ ಹೊಟೇಲ್ ಮಾಲೀಕ ಲತೀಫ್ ಅವರು ಭರಿಸಿದ್ದಾರೆ‌.ಅದಲ್ಲದೆ ಹೊಟೇಲ್ ನಲ್ಲಿ ಮೂರು ವರ್ಷಗಳ ಕಾಲ ದುಡಿದ ಹಣವನ್ನು ಮನೆಮಂದಿಗೆ ನೀಡಲಾಗಿದೆ.

ಗಂಡ ಮಿಸ್ಸಿಂಗ್ ಪತ್ನಿ ಮತ್ತೊಂದು ಮದುವೆ! ಇನ್ನೊಂದು ವಿಪರ್ಯಾಸ ಅಂದರೆ ಸುಲ್ಲು ಸಿಂಝುಗೆ ಮದುವೆಯಾಗಿತ್ತು. ಐದು ವರ್ಷ ನಾಪತ್ತೆಯಾಗಿದ್ದಕ್ಕೆ ಆತನ ಪತ್ನಿ ಮತ್ತೊಂದು ವಿವಾಹವಾಗಿದ್ದಾಳೆ. ಅದೇನೆ ಇದ್ದರೂ ಐದು ವರ್ಷಗಳ ಬಳಿಕ ಸುಲ್ಲು ತನ್ನ ಕುಟುಂಬ ಜೊತೆ ಪುನರ್ಮಿಲನವಾಗಿತ್ತಿರೋದು ಖುಷಿಯ ವಿಚಾರವಾಗಿದೆ.

ಜಾರ್ಖಂಡ್ ಪೊಲೀಸರಿಂದ ಅಭಿನಂದನೆ:

ಮಾನಸಿಕ ಅಸ್ವಸ್ಥ ಸುಲ್ಬು ಸಿಂಝ ನನ್ನು ರಾಂಚಿ ವಿಮಾನ ನಿಲ್ದಾಣಕ್ಕೆ ಕರೆತರುವ ಬಗ್ಗೆ ಜರ್ಖಂಡ್ ರಾಜ್ಯದ ವಿಶೇಷ ಅಪರಾಧ ತಂಡದ ಪೊಲೀಸರು ಮಾಹಿತಿ ಸಿಕ್ಕಿದ ಮೇರೆಗೆ ವಿಮಾನ ನಿಲ್ದಾಣಕ್ಕೆ ಅಗಮಿಸಿ ಸ್ವಾಗತಿಸಿಕೊಂಡಿದ್ದು ಅದಲ್ಲದೆ ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಗ್ಭೂಮ್ ನ ಹಟಗಮ್ಹರಿಯಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಈ ಕಾಲದಲ್ಲಿ ಯಾರು ಕೂಡ ಇಂತಹ ಕೆಲಸ ಮಾಡುವುದಿಲ್ಲ ಆದ್ರೆ ನೀವು ಒಂದು ಈ ಉತ್ತಮ ಪುಣ್ಯದ ಮಾನವೀಯತೆ ಕೆಲಸ ಮಾಡಿದ್ದೀರಿ ಎಂದು ಹೇಳಿ ಅಭಿನಂದಿಸಿದರು.

ಪತ್ತೆ ಕಾರ್ಯಕ್ಕೆ ಸಹಕರಿಸಿದವರು: ಸಂಗಮ್ ಹೋಟೆಲ್ ಮಾಲೀಕ ಅಬ್ದುಲ್ ಲತೀಫ್ , ಸಮಾಜ ಸೇವಕ ಅಬ್ದುಲ್ ಅಜೀಜ್ , ಹಂಝ , ಜಬೀರ್ ,ಫಹಾಜ್ ಅಹಮ್ಮದ್, ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ , ಮಂಗಳೂರು ಸೆನ್ ಪೊಲೀಸ್ ಠಾಣೆಯ ಚಂದ್ರಶೇಖರ್, ಪ್ರತೀಕ್ ಬೆಳ್ತಂಗಡಿ , ನಾರಾಯಣ ಪೂಜಾರಿ , ದಾಸ್ಮಟ್ ಹನ್ಸಾ ಜಾರ್ಖಂಡ್, ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಗ್ಭೂಮ್ ನ ಹಟಗಮ್ಹರಿಯಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಾಲೇಶ್ವರ ಓರಾನ್ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದಾರೆ.

Spread the love
  • Related Posts

    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

    ಶಿಶಿಲ: ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆಯು 07/02/2026 ಶನಿವಾರದಿಂದ 10/02/2026ಮಂಗಳವಾರದವರೆಗೆ ನಡೆಯಲಿದೆ. Spread the love

    Spread the love

    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ, ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    ಗುರುವಾಯನಕೆರೆ: ರಾಷ್ಟ್ರಮಟ್ಟದಲ್ಲಿ ಇನ್ಸಿಟ್ಯೂಟ್ ಆಫ್‌ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ನಡೆಸುವ ಕಂಪನಿ ಸೆಕ್ರೆಟರಿ ಪರೀಕ್ಷೆಯ ಎರಡನೇ ಆವೃತ್ತಿಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. 200 ಅಂಕಗಳ ಪರೀಕ್ಷೆಯಲ್ಲಿ 183 ಅಂಕಗಳನ್ನು…

    Spread the love

    You Missed

    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

    • By admin
    • January 28, 2026
    • 57 views
    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ, ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    • By admin
    • January 20, 2026
    • 305 views
    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ,  ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    • By admin
    • January 20, 2026
    • 103 views
    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    • By admin
    • January 18, 2026
    • 97 views
    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    ಚಾರ್ಮಾಡಿ ಘಾಟಿಯಲ್ಲಿ ಹಬ್ಬಿದ ಕಾಡ್ಗಿಚ್ಚು ಅಪಾರ ಸಸ್ಯ ಪ್ರಬೇಧಗಳು, ಪ್ರಾಣಿ ಸಂಕುಲಕ್ಕೆ ಹಾನಿ ಸಾಧ್ಯತೆ!!! ನಿರಂತರ ಕಾಡ್ಗಿಚ್ಚಿಗೆ ಶಾಶ್ವತ ಪರಿಹಾರ ಯಾವಾಗ???

    • By admin
    • January 18, 2026
    • 89 views
    ಚಾರ್ಮಾಡಿ ಘಾಟಿಯಲ್ಲಿ ಹಬ್ಬಿದ ಕಾಡ್ಗಿಚ್ಚು ಅಪಾರ ಸಸ್ಯ ಪ್ರಬೇಧಗಳು, ಪ್ರಾಣಿ ಸಂಕುಲಕ್ಕೆ ಹಾನಿ ಸಾಧ್ಯತೆ!!! ನಿರಂತರ ಕಾಡ್ಗಿಚ್ಚಿಗೆ ಶಾಶ್ವತ ಪರಿಹಾರ ಯಾವಾಗ???

    ಚಾರ್ಮಾಡಿ ಘಾಟಿಯ ತುತ್ತ ತುದಿಯಲ್ಲಿ ಕಾಣಿಸಿಕೊಂಡ ಬೆಂಕಿ ಇದು ಆಕಸ್ಮಿಕವೋ‼️ ಅಥವಾ ದುಷ್ಟರ ಕೃತ್ಯವೋ⁉️

    • By admin
    • January 18, 2026
    • 69 views
    ಚಾರ್ಮಾಡಿ ಘಾಟಿಯ ತುತ್ತ ತುದಿಯಲ್ಲಿ ಕಾಣಿಸಿಕೊಂಡ ಬೆಂಕಿ ಇದು ಆಕಸ್ಮಿಕವೋ‼️ ಅಥವಾ ದುಷ್ಟರ ಕೃತ್ಯವೋ⁉️