ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಬದ್ಯಾರು ಇದರ ನೂತನ ಪದಾಧಿಕಾರಿಗಳ ಆಯ್ಕೆ

ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಬದ್ಯಾರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಯನ್ನು 17/04/2022ರಂದು ನಡೆಸಲಾಯಿತು.

ಮಂಡಳಿಯ ಅಧ್ಯಕ್ಷರಾಗಿ ರಾಜೇಶ್ ಕುಲಾಲ್ ಬೈರೊಟ್ಟು ಹಾಗೂ ಕಾರ್ಯದರ್ಶಿಯಾಗಿ ಧರ್ಣಪ್ಪ ಪೂಜಾರಿಯವರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಓಬಯ್ಯ ನಾಯ್ಕ, ಜೊತೆ ಕಾರ್ಯದರ್ಶಿ ನಾಗೇಶ್ ಕುಲಾಲ್, ಕೋಶಾಧಿಕಾರಿ ಶೇಖರ್ ಶ್ರೀ ದುರ್ಗಾ, ಸಂಘಟನಾ ಕಾರ್ಯದರ್ಶಿಯಾಗಿ ಜಗನ್ನಾಥ, ಅಶೋಕ ಬುಡೆಂಗೊಟ್ಟು ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

READ ALSO

ಈ ಸಂದರ್ಭದಲ್ಲಿ ಅರ್ಚಕರಾದ ಪ್ರಹ್ಲಾದ್ ಮಯ್ಯ, ಸೂರ್ಯನಾರಾಯಣ ರಾವ್, ಸಹ ಮೋಕ್ತೆಸರಾದ ಪ್ರಭಾಕರ ಮುಡ್ಜಾಲು, ಶೈಲೇಶ್ R J, ಭಜನಾ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರಾದ ಪ್ರಶಾಂತ್, ಅರುಣ, ಶೇಕರ್ ಪೂಜಾರಿ, ಸುರೇಂದ್ರ, ಪ್ರಸಾದ್ ಕುಲಾಲ್ ಉಪಸ್ಥಿತರಿದ್ದರು.