ಬೆಳ್ತಂಗಡಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ಸೈಂಟ್ ಮೆರೀಸ್ ಸ್ಕೂಲ್ ವಿದ್ಯಾರ್ಥಿನಿ ಶ್ರೇಯಾ ಡೊಂಗ್ರೆ 622 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದ ಇವರು ಮರುಮೌಲ್ಯಮಾಪನಕ್ಕೆ ಹಾಕಿದಾಗ 625 ಅಂಕ ಪಡೆದು ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾಳೆ.
ವೈದ್ಯರಾದ ಶಶಿಕಾಂತ್ ಡೊಂಗ್ರೆ ಹಾಗೂ ದೀಪಾಲಿ ಡೊಂಗ್ರೆಯವರ ಪುತ್ರಿ ಶ್ರೇಯಾ ಡೊಂಗ್ರೆ ಈ ಬಾರಿಯ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ತಾಲೂಕಿನ ಜನ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದು, ಇದೀಗ ಎಸ್ಎಸ್ಎಲ್ಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ ಶ್ರೇಯಾ ಡೊಂಗ್ರೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ನನಗೆ 622 ಅಂಕ ಬಂದಾಗ ಸ್ವಲ್ಪ ಸಂಶಯ ಉಂಟಾಯಿತು. ಅದರೂ 625 ಅಂಕ ಬರುವ ನಿರೀಕ್ಷೆಯಲ್ಲಿದ್ದೆ. ಇಂಗ್ಲೀಷ್ನಲ್ಲಿ 3 ಅಂಕ ಕಡಿಮೆ ಬಂದ ಬಗ್ಗೆ ಯೋಚಿಸಿ ತಂದೆ ತಾಯಿ ಹಾಗೂ ಶಾಲಾ ಶಿಕ್ಷಕರಲ್ಲಿ ಮಾತನಾಡಿ ಮರುಮೌಲ್ಯಮಾಪನಕ್ಕೆ ಹಾಕಿದೆ. ಅದರ ಫಲಿತಾಂಶ 625 ಅಂಕ ಬಂದಿದೆ. ತುಂಬಾ ಖುಷಿಯಾಗಿದೆ ಎಂದು ಶ್ರೇಯಾ ಸಂತೋಷ ಹಂಚಿಕೊಂಡರು.
ಈ ಬಾರಿಯ ಪರೀಕ್ಷೆ ಮಕ್ಕಳಿಗೆ ತುಂಬಾ ಸವಾಲಿನದ್ದಾಗಿತ್ತು. ಅದರೂ ಪ್ರಯತ್ನ ಪಟ್ಟರೆ ಫಲ ಸಿಗುತ್ತದೆ ಎಂಬುವುದಕ್ಕೆ ಇವಳೇ ಸಾಕ್ಷಿ. ನಮ್ಮ ಮಗಳ ಯಶಸ್ಸಿಗೆ ಶ್ರಮ ಪಟ್ಟ ಶಿಕ್ಷಕರಿಗೆ ಹಾಗೂ ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪೋಷಕರು ಸಂತಸ ಹಂಚಿಕೊಂಡಿದ್ದಾರೆ