ಬೆಂಗಳೂರು : ಬಿಜೆಪಿ ರಾಜ್ಯ ವಕ್ತಾರರಾಗಿ ಕ್ಯಾ.ಗಣೇಶ್ ಕಾರ್ಣಿಕ್ ರವರನ್ನು ಹಾಗೂ ಬಿಜೆಪಿ ಯುವ ಮೋರ್ಚಾ ಗಾದಿಗೆ ಡಾ.ಸಂದೀಪ್ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಭಾರತೀಯ ಜನತಾ ಪಾರ್ಟಿಯಿಂದ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿ ವೈ ವಿಜಯೇಂದ್ರ, ಅರವಿಂದ್ ಲಿಂಬಾವಳಿ, ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರಿಗೆ ಸ್ಥಾನವನ್ನು ನೀಡಲಾಗಿದೆ.
ಈ ಕುರಿತಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷರ ಪಟ್ಟಿ ಬಿಡುಗಡೆ
- ಅರವಿಂದ ಲಿಂಬಾವಳಿ.
- ನಿರ್ಮಲ್‌ಕುಮಾರ್ ಸುರಾನಾ.
- ಶೋಭಾ ಕರಂದ್ಲಾಜೆ.
- ತೇಜಸ್ವಿನಿ ಅನಂತ್‌ಕುಮಾರ್.
- ಪ್ರತಾಪ್ ಸಿಂಹ.
- ಎಂ.ಬಿ.ನಂದೀಶ್.
- ಮಾಲೀಕಯ್ಯ ಗುತ್ತೇದಾರ್.
- ಎಂ.ಶಂಕರಪ್ಪ.
- ಎಂ.ರಾಜೇಂದ್ರ.
- ವೈ.ವಿಜಯೇಂದ್ರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು.
- ಎನ್.ರವಿಕುಮಾರ್. – ದಾವಣಗೆರೆ.
- ಸಿದ್ದರಾಜು- ಮೈಸೂರು ಗ್ರಾಮಾಂತರ.
- ಅಶ್ವತ್‌ನಾರಾಯಣ್- ಬೆಂಗಳೂರು ಕೇಂದ್ರ.
- ಮಹೇಶ್ ಟೆಂಗಿನಕಾಯಿ – ಹುಬ್ಬಳ್ಳಿ-ಧಾರವಾಡ ಮಹಾನಗರ
ಮೋರ್ಚಾ ರಾಜ್ಯ ಅಧ್ಯಕ್ಷರು:
- ಬಿಜೆಪಿ ಯುವ ಮೋರ್ಚಾ- ಡಾ.ಸಂದೀಪ್
- ಮಹಿಳಾ ಮೋರ್ಚಾ -ಗೀತಾ ವಿವೇಕಾನಂದ
- ರೈತ ಮೋರ್ಚಾ -ಈರಣ್ಣ ಕಡಾಡಿ
- ಹಿಂದುಳಿದ ವರ್ಗಗಳ ಮೋರ್ಚಾ -ಅಶೋಕ್ ಗಸ್ತಿ
- ಎಸ್.ಸಿ.ಮೋರ್ಚಾ- ಚಲುವಾದಿ ನಾರಾಯಣಸ್ವಾಮಿ
- ಎಸ್.ಟಿ.ಮೋರ್ಚಾ -ತಿಪ್ಪರಾಜು ಹವಾಲ್ದಾರ್
- ಅಲ್ಪಸಂಖ್ಯಾತ ಮೋರ್ಚಾ -ಮುಜಾಮಿಲ್ ಬಾಬು