9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಎರಡನೇ ದಿನದಂದು ಹಿಂದೂಗಳ ಮೇಲಿನ ಆಘಾತಗಳ ಬಗ್ಗೆ ವಿಚಾರ ಮಂಥನ !

ಸೆಕ್ಯುಲರ್’ ಭಾರತದಲ್ಲಿ ಇರುವ ‘ಹಲಾಲ್ ಸರ್ಟಿಫಿಕೇಶನ್’ ವ್ಯವಸ್ಥೆಯು ಹಿಂದೂಗಳ ಮೇಲೆ ಹೇರಿದ ‘ಜಿಝಿಯಾ ತೆರಿಗೆ’ ಆಗಿದೆ ! – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

‘ಝೊಮೆಟೊ’ನ ಮುಸಲ್ಮಾನ ಡೆಲಿವರಿ ಬಾಯ್‌ನಿಂದ ಪಾರ್ಸಲ್ ಪಡೆಯಲು ನಿರಾಕರಿಸಿದ್ದ ಹಿಂದೂ ಗ್ರಾಹಕನ ಮೇಲೆ ‘ಅನ್ನಕ್ಕೆ ಧರ್ಮ ಇರುವುದಿಲ್ಲ’, ಎಂದು ಹೇಳುತ್ತಾ ಸೆಕ್ಯುಲರ್‌ವಾದಿಗಳು ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು; ಆದರೆ ಇಂದು ಭಾರತದಲ್ಲಿ ಮಾಂಸಾಹಾರವಷ್ಟೇ ಅಲ್ಲದೇ, ಅನೇಕ ಶಾಖಾಹಾರಿ ಪದಾರ್ಥ, ಸೌಂದರ್ಯವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ವಸತಿಸಮುಚ್ಚಯ, ಡೇಟಿಂಗ್ ಸೈಟ್ ಇತ್ಯಾದಿಗಳಿಗೆ ಇಸ್ಲಾಮೀ ಕಾನೂನಿಗನುಸಾರ ‘ಹಲಾಲ್ ಸರ್ಟಿಫಿಕೇಶನ್’ನ ವ್ಯವಸ್ಥೆಯನ್ನು ಜಾರಿ ಮಾಡಿದೆ. ಇದರಿಂದ ಇಸ್ಲಾಮಿ ಸಂಸ್ಥೆಗಳಿಗೆ ಸಾವಿರಾರು ಕೋಟಿ ರೂಪಾಯಿ ಸಿಗುತ್ತದೆ. ವಾಸ್ತವದಲ್ಲಿ ‘ಸೆಕ್ಯುಲರ್’ ಭಾರತದಲ್ಲಿ ಇಸ್ಲಾಮೀ ಅರ್ಥವ್ಯವಸ್ಥೆಗೆ ಚಾಲನೆ ನೀಡುವ ‘ಹಲಾಲ್ ಸರ್ಟಿಫಿಕೇಶನ್’ ವ್ಯವಸ್ಥೆಯು ಶೇ.80 ರಷ್ಟು ಹಿಂದೂಗಳ ಮೇಲೆ ಹೇರಿದ ‘ಜಿಝಿಯಾ ತೆರಿಗೆ’ಯೇ ಆಗಿದೆ ಹಾಗೂ ಅದನ್ನು ರದ್ದು ಪಡಿಸಲು ಹಿಂದೂಗಳು ಸಂಘಟಿತರಾಗುವುದು ಅಗತ್ಯವಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಪ್ರತಿಪಾದಿಸಿದರು. ಅವರು ‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಎರಡನೇ ದಿನದಂದು ‘ಹಲಾಲ್ ಸರ್ಟಿಫೀಕೆಟ್’ನ ಮಾಧ್ಯಮದಿಂದ ಭಾರತದಲ್ಲಿ ಆರ್ಥಿಕ ಜಿಹಾದ್ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದರು.
ಈ ಅಧಿವೇಶನವು ಜುಲೈ 30 ರಿಂದ ಆಗಸ್ಟ್ 2 ಹಾಗೂ 6 ರಿಂದ 9 ಆಗಸ್ಟ್ 2020 ಈ ಕಾಲಾವಧಿಯಲ್ಲಿ ಸಾಯಂಕಾಲ 6.30 ರಿಂದ 8.30 ಈ ಸಮಯದಲ್ಲಿ ‘ಆನ್‌ಲೈನ್’ನಲ್ಲಿ ನಡೆಯುತ್ತಿದೆ. ಸಮಿತಿಯ ‘ಯೂ-ಟ್ಯೂಬ್’ ಚಾನೆಲ್ ಹಾಗೂ ಫೇಸ್‌ಬುಕ್ ಮೂಲಕ ಈ ಅಧಿವೇಶನವನ್ನು 68 ಸಾವಿರಕ್ಕಿಂತಲೂ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರೆ, 3 ಲಕ್ಷ 45 ಸಾವಿರಕ್ಕಿಂತ ಹೆಚ್ಚು ಜನರ ತನಕ ವಿಷಯ ತಲುಪಿದೆ.


ಈ ಅಧಿವೇಶನದಲ್ಲಿ ತಮಿಳುನಾಡಿನ ಹಿಂದೂ ಮಕ್ಕಲ ಕಛ್ಚಿಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಅರ್ಜುನ ಸಂಪಥ ಇವರು ಮಾತನಾಡುತ್ತಾ, ‘ಕೊರೋನಾ ವಾಹಕ’ರಂತೆ ವರ್ತಿಸಿದ ತಬಲಿಗೀ ಜಮಾತ್‌ನ ದೆಹಲಿಯ ಕಾರ್ಯಕ್ರಮಕ್ಕೆ ತಮಿಳುನಾಡಿನಿಂದ 2,500 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಅವರು ರಾಜ್ಯಕ್ಕೆ ಮರಳಿದಾಗ ಅವರ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ ಅವರಿಗೆ ಹೆಚ್ಚು ವೈದ್ಯಕೀಯ ಸೌಲಭ್ಯವನ್ನು ನೀಡಲಾಯಿತು ಗುಣಮುಖರಾದ ನಂತರ ಆಡಳಿತಾಧಿಕಾರಿಗಳು ಅವರನ್ನು ಸ್ವಾಗತಿಸಿದರು. ಅವರಿಗೆ ಕುರಾನ್ ಹಂಚಿದರು. ತದ್ವಿರುದ್ಧ ಈ ಕಾಲಾವಧಿಯಲ್ಲಿ ಹಿಂದೂಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ನೀಡುವಾಗ ತಾರತಮ್ಯ ಮಾಡಲಾಗುತ್ತಿತ್ತು’ ಎಂದು ಹೇಳಿದರು.

ತಮಿಳುನಾಡಿನ ಶಿವಸೇನೆಯ ಅಧ್ಯಕ್ಷ ಜಿ. ರಾಧಾಕೃಷ್ಣನ್ ಇವರು ಈ ಸಮಯದಲ್ಲಿ ಮಾತನಾಡುತ್ತಾ, ‘ಪೆರಿಯಾರ, ಅದೇರೀತಿ ದ್ರಮುಕನ ಕಾರ್ಯಕರ್ತರು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮ, ಪರಂಪರೆ, ಸಂಸ್ಕೃತಿ, ಸ್ತೋತ್ರ, ಅದೇರೀತಿ ಬ್ರಾಹ್ಮಣ ಸಮಾಜವನ್ನು ಅವಮಾನಿಸಿ ಹಿಂದೂದ್ವೇಷವನ್ನು ಮಾಡುತ್ತಿದ್ದಾರೆ. ಪೆರಿಯಾರನ ಪ್ರತಿಮೆಗೆ ಮಸಿ ಬಳಿಯುವ ಹಿಂದೂಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ; ಆದರೆ ಹಿಂದೂ ವಿರೋಧಕರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲಿ ಧರ್ಮಕ್ಕೆ ಆಘಾತವಾಗುತ್ತದೆಯೋ ಅಲ್ಲಿ ನಾವು ರಸ್ತೆಗಿಳಿಯುವೆವು, ಕಾನೂನಿನ ಮೂಲಕ ಹೋರಾಡುವೆವು’ ಎಂದು ಹೇಳಿದರು.


ಪಾಕಿಸ್ತಾನದಲ್ಲಿ 2 ಸಾವಿರಕ್ಕಿಂತಲೂ ಹೆಚ್ಚು ಹಿಂದೂಗಳಿಗೆ ಭಾರತೀಯ ಪೌರತ್ವ ಕೊಡಿಸುವ ‘ನಿಮಿತ್ತೆಕಮ’ ಸಂಸ್ಥೆಯ ಅಧ್ಯಕ್ಷ ಶ್ರೀ. ಜಯ ಅಹುಜಾ ಇವರು ಮಾತನಾಡುತ್ತಾ, ‘ಇಮ್ರಾನ್ ಖಾನ್ ಸರಕಾರವು ‘ರಿಯಾಸತ-ಎ-ಮದಿನಾ’ ಅಂದರೆ ‘ಕಾಫಿರಮುಕ್ತ ಭೂಮಿ’ ಈ ಸಂಕಲ್ಪನೆಯ ಅಡಿಯಲ್ಲಿ ಇಂದು ಪಾಕಿಸ್ತಾನದಲ್ಲಿ ಅಳಿದುಳಿದ 70 ಲಕ್ಷ ಹಿಂದೂಗಳ ವಂಶನಾಶ ಮಾಡುವ ಕೃತ್ಯವನ್ನು ಮಾಡುತ್ತಿದೆ. ಪ್ರತಿದಿನ ಹಿಂದೂ ಹುಡುಗಿಯರನ್ನು ಬಲವಂತವಾಗಿ ಅಪಹರಣ, ವಿವಾಹ, ನಂತರ ವೇಶ್ಯಾವಾಟಿಕೆಗೆ ನೂಕಿ ಅವರ ಶೋಷಣೆಯನ್ನು ಮಾಡಲಾಗುತ್ತಿದೆ. ಕೊರೋನಾ ಮಾಹಾಮಾರಿಯ ಕಾಲಾವಧಿಯಲ್ಲಿ ಹಸಿದಿರುವ 1600 ಹಿಂದೂಗಳಿಗೆ ಆಹಾರದ ‘ಕಿಟ್’ಗಳನ್ನು ನೀಡುವ ಬದಲಿಗೆ ಅವರನ್ನು ಮತಾಂತರಿಸಲಾಯಿತು’ ಎಂದು ಹೇಳಿದರು.

ಪಾಕಿಸ್ತಾನಿ ಹಿಂದೂಗಳಿಗಾಗಿ ಕಾರ್ಯ ಮಾಡುವ ಸೌ. ಮಿನಾಕ್ಷೀ ಶರಣ ಇವರು ಮಾತನಾಡುತ್ತಾ, ‘ಪಾಕಿಸ್ತಾನದಲ್ಲಿನ ಸಂತ್ರಸ್ತ ಹಿಂದೂಗಳು ಭಾರತದಲ್ಲಿ ಆಶ್ರಯ ಪಡೆಯುತ್ತಿದ್ದಾರೆ; ಅವರು ದೌರ್ಜನ್ಯವನ್ನು ಸಹಿಸಿದರೂ ಧರ್ಮವನ್ನು ಬದಲಾಯಿಸಲಿಲ್ಲ. ಇವರು ನಿಜವಾದ ಪ್ರಾಮಾಣಿಕ ಹಿಂದೂಗಳಾಗಿದ್ದಾರೆ, ಆದರೆ ಅವರು ಭಾರತದಲ್ಲಿ ಮುಖ್ಯ ಪ್ರವಾಹದಲ್ಲಿ ಇನ್ನೂ ಸೇರಿಕೊಂಡಿಲ್ಲ. ಅವರ ಸೆಳೆತ ಹಾಗೂ ಕೌಶಲ್ಯವನ್ನು ನೋಡಿ ಅವರಿಗೆ ಕೆಲಸವನ್ನು ಕೊಡಿಸಬೇಕು’ ಎಂದು ಹೇಳಿದರು.

‘ಪ್ರಜ್ಞತಾ’ ಸಂಸ್ಥೆಯ ಸಹಸಂಸ್ಥಾಪಕರಾದ ಶ್ರೀ. ಆಶಿಷ ಧರ ಇವರು ಮಾತನಾಡುತ್ತಾ, ನಾವು ರಾಷ್ಟ್ರ-ಧರ್ಮ ಇವುಗಳ ಮೇಲಿನ ಆಘಾತಗಳ ಬಗೆಗಿನ ಮಾಹಿತಿಯನ್ನು ತಲುಪಿಸುವ ಉದ್ದೇಶದಿಂದ ವಿಡಿಯೋವನ್ನು ನಿರ್ಮಿಸಿ ಪ್ರಸಾರ ಮಾಡುತ್ತೇವೆ. ನಿರಾಶ್ರಿತ ಕಾಶ್ಮೀರಿ ಪಂಡಿತರು, ರಾಮ ಮಂದಿರ ನಿರ್ಮಾಣ, ಬಾಂಗ್ಲಾದೇಶಿ ಹಿಂದೂಗಳ ವ್ಯಥೆ ಇತ್ಯಾದಿಗಳ ಬಗೆಗಿನ ಅನೇಕ ವಿಡಿಯೋಗಳಿಂದ ದೊಡ್ಡ ಪ್ರಮಾಣದಲ್ಲಿ ಜಾಗೃತಿಯಾಗಿದೆ ಎಂದು ಹೇಳಿದರು.

Spread the love
  • Related Posts

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ 2026ರಲ್ಲಿ ವಿವಿಧ ಗಣಪನ ಅಲಂಕಾರ ನೋಡೋಣ ಬನ್ನಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುಂಡಾಜೆ ಇದರ ವತಿಯಿಂದ ಮುಂಡಾಜೆ ದೇವಸ್ಥಾನದಲ್ಲಿ ಆರಾಧಿಸಲ್ಪಟ್ಟ ಸುವರ್ಣ ಸಂಭ್ರಮದ ಗಣಪತಿ. ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಆರಾಧಿಸಲ್ಪಟ್ಟ…

    Spread the love

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    ಕಾನರ್ಪ ನೂಜಿ ರಸ್ತೆಯಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಬಾಕಿ; ಸ್ಥಳೀಯರಿಂದ ಪ್ರತಿಭಟನೆ ಕಡಿರುದ್ಯಾವರ: ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ನಿರಂತರವಾಗಿ ಮರ ಸಾಗಾಟದ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾನರ್ಪದಲ್ಲಿ ತಡರಾತ್ರಿ ಮರ ಸಾಗಾಟ ಮಾಡುತ್ತಿದ್ದ…

    Spread the love

    You Missed

    ಆಟಿಡೊಂಜಿದಿನ ಧರ್ಮಸ್ಥಳ ಕನ್ಯಾಡಿ 2

    • By admin
    • September 15, 2026
    • 7 views

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    • By admin
    • September 15, 2026
    • 19 views
    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    • By admin
    • September 13, 2026
    • 9 views
    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

    • By admin
    • September 13, 2026
    • 14 views
    ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

    ಕೊಕ್ಕಡ ಸಮೀಪ ಭೀಕರ ಅಪಘಾತ: ಸರ್ಕಾರಿ ಬಸ್–ಕಾರು ಡಿಕ್ಕಿ

    • By admin
    • September 12, 2026
    • 11 views
    ಕೊಕ್ಕಡ ಸಮೀಪ ಭೀಕರ ಅಪಘಾತ: ಸರ್ಕಾರಿ ಬಸ್–ಕಾರು ಡಿಕ್ಕಿ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    • By admin
    • September 8, 2026
    • 15 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ