ವೈಚಾರಿಕ ಧ್ರುವೀಕರಣದ ಕಾಲದಲ್ಲಿ ಧರ್ಮದ ಪರವಾಗಿ ನಿಂತು ಹಿಂದೂ ರಾಷ್ಟ್ರದ ದಿಕ್ಕಿನತ್ತ ಮಾರ್ಗಕ್ರಮಣ ಮಾಡಿ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ
ಕೊರೋನಾದ ಮಹಾಮಾರಿಯಾಗಿರಲಿ ಅಥವಾ ಭವಿಷ್ಯದಲ್ಲಿ ಎದುರಾಗುವ ಮೂರನೇ ವಿಶ್ವಯುದ್ಧವಾಗಿರಲಿ, ಕಾಲಮಹಾತ್ಮೆಗನುಸಾರ ಮುಂಬರುವ ಕಾಲವು ಹಿಂದುತ್ವನಿಷ್ಠರಿಗೆ ಅನುಕೂಲಕರ ಕಾಲವಾಗಿರಲಿದೆ. ಅದಕ್ಕಾಗಿ ನಾವು ನಿರಂತರವಾಗಿ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುತ್ತಿರಬೇಕು. ಕೊರೋನಾ ಮಹಾಮಾರಿಯ ಕಾಲದಲ್ಲಿ ತಬ್ಲಿಗೀ ಜಮಾತವು ‘ಕೊರೋನಾ ವಾಹಕ’ದ ಪಾತ್ರ ನಿರ್ವಹಿಸಿದರೆ, ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ‘ಕೊರೋನಾ ಯೋಧ’ರ ಪಾತ್ರವನ್ನು ನಿರ್ವಹಿಸಿದವು. ಪ್ರಸಕ್ತ ಕಾಲದಲ್ಲಿ ರಾಜಕಾರಣ, ಶಿಕ್ಷಣಕ್ಷೇತ್ರ, ಪ್ರಸಾರ ಮಾಧ್ಯಮಗಳು, ಕಲಾಕ್ಷೇತ್ರ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ ‘ದೇಶಭಕ್ತ ಹಾಗೂ ಧರ್ಮಪ್ರೇಮಿ’ಗಳ ವಿರುದ್ಧ ‘ದೇಶದ್ರೋಹಿ ಹಾಗೂ ಧರ್ಮವಿರೋಧಿ’ ಹೀಗೆ ಧ್ರುವೀಕರಣ ಆಗುತ್ತಿದೆ. ಈ ವೈಚಾರಿಕ ಧ್ರುವೀಕರಣದ ಕಾಲದಲ್ಲಿ ಧರ್ಮದ ಪರವಾಗಿ ಹಿಂದೂ ರಾಷ್ಟ್ರದ ದಿಕ್ಕಿನತ್ತ ಮಾರ್ಗಕ್ರಮಣ ಮಾಡಿರಿ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಕರೆ ನೀಡಿದ್ದಾರೆ. ಅವರು ‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಉದ್ಘಾಟನೆಯ ಸಮಯದಲ್ಲಿ ಮಾತನಾಡುತ್ತಿದ್ದರು.
ಈ ಅಧಿವೇಶನವು ಜುಲೈ ೩೦ ರಿಂದ ಆಗಸ್ಟ್ ೨ ಹಾಗೂ ೬ ರಿಂದ ೯ ಆಗಸ್ಟ್ ೨೦೨೦ ಈ ಕಾಲಾವಧಿಯಲ್ಲಿ ಸಾಯಂಕಾಲ ೬.೩೦ ರಿಂದ ೮.೩೦ ಈ ಸಮಯದಲ್ಲಿ
‘ಆನ್‌ಲೈನ್’ನಲ್ಲಿ ನಡೆಯುತ್ತಿದೆ. ಈ ಅಧಿವೇಶನಕ್ಕೆ ದೇಶ-ವಿದೇಶಗಳಿಂದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು, ನ್ಯಾಯವಾದಿಗಳು, ವಿಚಾರವಂತರು, ಸಂಪಾದಕರು, ಉದ್ಯಮಿಗಳು ಮುಂತಾದವರು ದೊಡ್ಡ ಸಂಖ್ಯೆಯಲ್ಲಿ ‘ಆನ್‌ಲೈನ್’ನಲ್ಲಿ ಉಪಸ್ಥಿತರಿದ್ದರು. ಸಮಿತಿಯ ‘ಯೂ ಟ್ಯೂಬ್’ ಚಾನಲ್ ಹಾಗೂ ಫೇಸ್‌ಬುಕ್ ಮೂಲಕ ಈ ಅಧಿವೇಶನವನ್ನು 67 ಸಾವಿರಕ್ಕೂ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರೆ, ‘3 ಲಕ್ಷದ 17 ಸಾವಿರಕ್ಕೂ ಹೆಚ್ಚು ಜನರ ತನಕ ಈ ವಿಷಯ ತಲುಪಿದೆ. ಹಿಂದೂ ಅಧಿವೇಶನಕ್ಕೆ ಬೆಂಬಲ ಸೂಚಿಸಲು ಅನೇಕರು ಟ್ವೀಟ್‌ಗಳನ್ನು ಮಾಡಲಾಯಿತು. #We_Want_Hindu_Rashtra ಈ ಹ್ಯಾಶಟ್ಯಾಗ್ ಭಾರತದಲ್ಲಿ ಮೊದಲ ಐದು ಟ್ರೆಂಡಿಂಗ್‌ದಲ್ಲಿತ್ತು. ಈ ಅಧಿವೇಶನವು HinduJagruti ಈ ಯೂಟ್ಯೂಬ್ ಚಾನೆಲ್ ಮೂಲಕ, ಅದೇರೀತಿ HinduAdhiveshan ಈ ಫೇಸ್‌ಬುಕ್ ಪೇಜ್‌ನಿಂದ ಲೈವ್ ಪ್ರಸಾರ ಮಾಡಲಾಗುತ್ತಿದೆ.
ಅಧಿವೇಶನದ ಆರಂಭದಲ್ಲಿ ಶಂಖನಾದ, ವೇದಮಂತ್ರಗಳ ಪಠಣ ಹಾಗೂ ಸದ್ಗುರು (ಡಾ) ಚಾರುದತ್ತ ಪಿಂಗಳೆ ಇವರ ಶುಭಹಸ್ತದಿಂದ ದೀಪ ಪ್ರಜ್ವಲನೆಯನ್ನು ಮಾಡಿ ಮಾಡಲಾಯಿತು. ಈ ಸಂದರ್ಭದಲ್ಲಿ ಸನಾತನದ ಧರ್ಮಪ್ರಚಾರಕರಾದ ಸದ್ಗುರು ಸತ್ಯವಾನ ಕದಮ ಇವರು ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಆಶೀರ್ವಾದ ರೂಪಿ ಸಂದೇಶವನ್ನು ಓದಿದರು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಅಧಿವೇಶನದ ಉದ್ದೇಶವನ್ನು ಹೇಳಿದರೆ, ಅದರ ನಿರೂಪಣೆಯನ್ನು ಶ್ರೀ. ಸುಮಿತ ಸಾಗವೇಕರ ಇವರು ಮಾಡಿದರು.
‘ಜಾತ್ಯತೀತ ಹಾಗೂ ವಿದೇಶಿ ಜನರ ಕುದೃಷ್ಟಿಯಿಂದಾಗಿ ನೇಪಾಳವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲು ಅಡಚಣೆಗಳು ನಿರ್ಮಾಣವಾಗುತ್ತಿವೆ. ನೇಪಾಳದ ಈಗಿನ ಸರಕಾರವು ಹಿಂದೂದ್ರೋಹಿಯಾಗಿದೆ. ನೇಪಾಳ ಹಾಗೂ ಭಾರತ ಇವರೆಡು ರಾಷ್ಟ್ರಗಳನ್ನು ‘ಹಿಂದೂ ರಾಷ್ಟ್ರ’ವನ್ನಾಗಿಸಲು ಜಗತ್ತಿನಾದ್ಯಂತ ಹಿಂದೂಗಳು ಸಂಘಟಿತರಾಗಿ ತಮ್ಮ ಯೋಗದಾನವನ್ನು ನೀಡಬೇಕು. ಸಣ್ಣ, ಸಾಂಪ್ರದಾಯಿಕ ಸ್ವಾರ್ಥವನ್ನು ಬಿಟ್ಟು ವ್ಯಾಪಕ ಹಿಂದುತ್ವದ ಆಗ್ರಹವನ್ನು ಹಿಡಿಯಬೇಕು’, ಎಂದು ರಾಷ್ಟ್ರೀಯ ಧರ್ಮಸಭಾ, ನೇಪಾಳದ ಅಧ್ಯಕ್ಷ ಡಾ. ಮಾಧವ ಭಟ್ಟರಾಯಿ ಇವರು ಹೇಳಿದರು.
ಬಾಲಿ (ಇಂಡೋನೇಷಿಯಾ)ದಿಂದ ಆನ್‌ಲೈನ್ ಮೂಲಕ ಜೋಡಿಸಲ್ಪಟ್ಟಿದ್ದ ಹಾಗೂ ‘ಇಂಟರನ್ಯಾಶನಲ್ ಡಿವೈನ್ ಲವ್ ಸೊಸೈಟಿ’ಯ ಅಧ್ಯಕ್ಷ ಅದೇರೀತಿ ‘ವರ್ಲ್ಡ್ ಹಿಂದೂ ಫೆಡರೇಶನ್’ ಇದರ ಉಪಾಧ್ಯಕ್ಷರಾದ ಶ್ರೀ ಧರ್ಮಯೆಶಾಜಿ ಇವರು, ‘ನಾವು ನಮ್ಮ ಕುಟುಂಬದವರನ್ನು ರಕ್ಷಿಸುವಂತೆಯೇ ನಮ್ಮ ಧರ್ಮದ ರಕ್ಷಣೆಯನ್ನು ಮಾಡಬೇಕು. ಧರ್ಮ ಇದು ಮೋಕ್ಷದಾಯಕವಾಗಿದೆ, ಆದ್ದರಿಂದ ಓರ್ವ ಸೇವಕನಂತೆ ಧರ್ಮದ ರಕ್ಷಣೆಯನ್ನು ಮಾಡಿದರೆ ಧರ್ಮ ನಮ್ಮ ರಕ್ಷಣೆಯನ್ನು ಮಾಡುವುದು’ ಎಂದು ಹೇಳಿದರು.
ಕರ್ನಾಟಕದ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಇವರು ಮಾತನಾಡುತ್ತಾ, ‘ಕೊರೋನಾದಂತಹ ಇನ್ನು ಕೆಲವು ವಿಷಾಣುಗಳ ಸಂಕಟ ನಮ್ಮ ಮುಂದಿದೆ, ಅದೆಂದರೆ ಹಿಂದೂವಿರೋಧಿ ಹಾಗೂ ಹಿಂದೂದ್ರೋಹಿ ! ಎಲ್ಲ ರಾಷ್ಟ್ರಘಾತಕ ಶಕ್ತಿಗಳಿಗೆ ಉತ್ತರವೆಂದರೆ ‘ಹಿಂದೂ ರಾಷ್ಟ್ರ’ವೇ ಆಗಿದೆ’ ಎಂದು ಹೇಳಿದರು.