ಬೆಳ್ತಂಗಡಿಯಲ್ಲಿ ಭಾರಿ ಮಾದಕವಸ್ತು ಬೇಟೆ: ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಜಪ್ತಿ – ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು

ಬೆಳ್ತಂಗಡಿ, ಜು.30: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಬೆಳ್ತಂಗಡಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ (MDMA), ಕಾರು, ಆಟೋ ರಿಕ್ಷಾ ಹಾಗೂ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

ಜುಲೈ 29ರಂದು ರಾತ್ರಿ ಸುಮಾರು 8 ಗಂಟೆಗೆ ಪೊಲೀಸ್ ಉಪನಿರೀಕ್ಷಕ ಆನಂದ್ ಎಂ ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಖಾಸಗಿ ಕಟ್ಟಡದ ಮುಂಭಾಗದಲ್ಲಿ ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸ್ ವಾಹನವನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಕುವೆಟ್ಟು ಗ್ರಾಮದ ಸುಣ್ಣತ್ ಕೆರೆ ನಿವಾಸಿ ಇಸ್ಮಾಯಿಲ್ ಅವರ ಪುತ್ರ ತ್ವಲಹ್ @ ಅನ್ವರ್ @ ಅನ್ಸಾರ್ (21) ಎಂದು ತಿಳಿದುಬಂದಿದೆ.ವಿಚಾರಣೆಯಲ್ಲಿ, ಕುವೆಟ್ಟು ಗ್ರಾಮದ ಆಲಾದಿಕೊಟ್ಟಿಗೆ ನಿವಾಸಿ ಹಮ್ಜತ್ ಕರಾರ್ (31) ಅವರಿಗೆ ₹20,000 ಮುಂಗಡ ಹಣ ನೀಡಿ ಗಾಂಜಾ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಉದ್ದೇಶಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಹಮ್ಜತ್ ಕರಾರ್ KA-21-MA-4990 ಕಾರಿನಲ್ಲಿ ಬಂದು 500 ಗ್ರಾಂ ಗಾಂಜಾವನ್ನು ನೀಡಿದ್ದು, ಪೊಲೀಸರು ಬರುತ್ತಿರುವುದನ್ನು ಕಂಡು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದಾನೆ.

ಪೊಲೀಸರು ಕಾರನ್ನು ಪರಿಶೀಲಿಸಿದಾಗ, ಅದರೊಳಗೆ ಸುಮಾರು ₹7.60 ಲಕ್ಷ ಮೌಲ್ಯದ 76 ಗ್ರಾಂ ಎಂಡಿಎಂಎ (MDMA) ಪತ್ತೆಯಾಗಿದೆ. ಬಂಧಿತ ಆರೋಪಿಯ ಬಳಿಯಿಂದ 20 ಗ್ರಾಂ ಗಾಂಜಾ, ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಒಟ್ಟಾರೆ 20 ಗ್ರಾಂ ಗಾಂಜಾ, 76 ಗ್ರಾಂ ಎಂಡಿಎಂಎ, ಒಂದು ಕಾರು, ಒಂದು ಆಟೋ ರಿಕ್ಷಾ, ಮೊಬೈಲ್ ಫೋನ್ ಸೇರಿದಂತೆ ₹15,41,698 ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 20(b)(ii)(A) ಹಾಗೂ 27A ಅಡಿಯಲ್ಲಿ ಹಮ್ಜತ್ ಕರಾರ್ ಹಾಗೂ ತ್ವಲಹ್ @ ಅನ್ವರ್ @ ಅನ್ಸಾರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಬಂಧಿತ ಆರೋಪಿ ತ್ವಲಹ್‌ನನ್ನು ಜುಲೈ 30ರಂದು ಮಂಗಳೂರಿನ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು:

ಬಂಧಿತ ಆರೋಪಿ ತ್ವಲಹ್ @ ಅನ್ವರ್ @ ಅನ್ಸಾರ್ ಜುಲೈ 30ರಂದು ಉದ್ಯೋಗ ನಿಮಿತ್ತ ದುಬೈಗೆ ತೆರಳಲು ಸಿದ್ಧತೆ ನಡೆಸಿದ್ದ. ಆದರೆ ಮಾದಕವಸ್ತು ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ವಿದೇಶ ಪ್ರಯಾಣದ ಬದಲು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾನೆ.

ಈ ಕಾರ್ಯಾಚರಣೆ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಹಾಗೂ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ, ಸಬ್ ಇನ್ಸ್‌ಪೆಕ್ಟರ್ ಆನಂದ್ ಎಂ. ಮತ್ತು ಸಿಕಂದರ್ ಪಾಷಾ ನೇತೃತ್ವದಲ್ಲಿ ಸಿಬ್ಬಂದಿ ಸತೀಶ್ ನಾಯ್ಕ್,ಪ್ರಕಾಶ್ ಪೂಜಾರಿ,ಶ್ರೀನಿವಾಸ್ ,ಹನುಮಂತ, ನಂದ, ಜಗದೀಶ್ ಅತ್ತಾಜೆ, ಪ್ರಮೋದ್,ದುಂಡಪ್ಪ ಪೂಜಾರಿ,ಶ್ರೀನಿವಾಸ್, ಚಾಲಕ ಸತೀಶ್ ಹಾಗೂ ಸೋಕೋ ತಂಡದ ಕಾವ್ಯಶ್ರೀ, ಅರ್ಪಿತಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Spread the love
  • Related Posts

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    ಕಾನರ್ಪ ನೂಜಿ ರಸ್ತೆಯಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಬಾಕಿ; ಸ್ಥಳೀಯರಿಂದ ಪ್ರತಿಭಟನೆ ಕಡಿರುದ್ಯಾವರ: ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ನಿರಂತರವಾಗಿ ಮರ ಸಾಗಾಟದ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾನರ್ಪದಲ್ಲಿ ತಡರಾತ್ರಿ ಮರ ಸಾಗಾಟ ಮಾಡುತ್ತಿದ್ದ…

    Spread the love

    ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

    ಪದ್ಮುಂಜ: ಸೆ 12 ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ, ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ವಿಜೃಂಭಣೆಯಿಂದ ನೆರವೇರಿತು.ಬೆಳಗ್ಗೆ ಉಮಾಮಹೇಶ್ವರ ಮಹಿಳಾ ಭಜನಾ ತಂಡ,…

    Spread the love

    You Missed

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    • By admin
    • September 13, 2026
    • 5 views
    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

    • By admin
    • September 13, 2026
    • 11 views
    ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

    ಕೊಕ್ಕಡ ಸಮೀಪ ಭೀಕರ ಅಪಘಾತ: ಸರ್ಕಾರಿ ಬಸ್–ಕಾರು ಡಿಕ್ಕಿ

    • By admin
    • September 12, 2026
    • 6 views
    ಕೊಕ್ಕಡ ಸಮೀಪ ಭೀಕರ ಅಪಘಾತ: ಸರ್ಕಾರಿ ಬಸ್–ಕಾರು ಡಿಕ್ಕಿ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    • By admin
    • September 8, 2026
    • 12 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    • By admin
    • September 8, 2026
    • 18 views
    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    • By admin
    • September 3, 2026
    • 14 views
    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು