ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಮುಚ್ಚಿರಡ್ಕದಲ್ಲಿ ದಾರುಣ ಘಟನೆ

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಮೃತರನ್ನು ಇಡ್ಯಾಲು ನಿವಾಸಿ ಬಾಲಕೃಷ್ಣ ಗೌಡ (55) ಎಂದು ಗುರುತಿಸಲಾಗಿದೆ.

ಬಾಲಕೃಷ್ಣ ಗೌಡ ಅವರು ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಸಂಜೆ ಕಳೆದರೂ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ಆರಂಭಿಸಿದ್ದರು.

ಹುಡುಕಾಟದ ವೇಳೆ ಅವರು ಧರಿಸಿದ್ದ ಪ್ಲಾಸ್ಟಿಕ್ ರೈನ್‌ಕೋಟ್ ದಾರಿಯ ಮಧ್ಯೆ ಬಿದ್ದಿರುವುದು ಪತ್ತೆಯಾಗಿದ್ದು, ಅದರ ಸಮೀಪದಲ್ಲೇ ಕಾಡಾನೆಯ ಹೆಜ್ಜೆ ಗುರುತುಗಳು ಕಂಡುಬಂದಿದ್ದವು. ಇದರಿಂದ ಕಾಡಾನೆ ದಾಳಿ ನಡೆಸಿರುವ ಶಂಕೆ ಮತ್ತಷ್ಟು ಬಲಗೊಂಡಿತ್ತು. ನಂತರ ಸ್ಥಳೀಯರು ಸುತ್ತಮುತ್ತ ಹುಡುಕಾಟ ನಡೆಸಿದಾಗ ಸಮೀಪದ ಕಣಿಯೊಂದರಲ್ಲಿ ಬಾಲಕೃಷ್ಣ ಗೌಡ ಅವರ ಮೃತದೇಹ ಪತ್ತೆಯಾಗಿದೆ.

ಕಾಡಾನೆ ದಾಳಿಯಿಂದಲೇ ಬಾಲಕೃಷ್ಣ ಗೌಡ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Spread the love
  • Related Posts

    ಬೆಳ್ತಂಗಡಿಯಲ್ಲಿ ಭಾರಿ ಮಾದಕವಸ್ತು ಬೇಟೆ: ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಜಪ್ತಿ – ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು

    ಬೆಳ್ತಂಗಡಿ, ಜು.30: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಬೆಳ್ತಂಗಡಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ (MDMA), ಕಾರು, ಆಟೋ ರಿಕ್ಷಾ ಹಾಗೂ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ…

    Spread the love

    ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಸಂತ ಗೌಡರ ತುರ್ತು ಚಿಕಿತ್ಸೆಗೆ ನೆರವಿಗಾಗಿ ಮನವಿ

    “ಜೀವ ಉಳಿಸಲು ನಿಮ್ಮ ನೆರವು ಅಗತ್ಯ“ ಬೆಳ್ತಂಗಡಿ, ಜು.30: ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟು ನಿವಾಸಿ ವಸಂತ ಗೌಡರವರು 21/07/2026ರಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ಪಡಂಗಡಿ ಸಮೀಪ ಹಾಲು ಹಿಡಿದು ಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಜಾರಿ ಬಿದ್ದು ತಲೆಗೆ…

    Spread the love

    You Missed

    ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಮುಚ್ಚಿರಡ್ಕದಲ್ಲಿ ದಾರುಣ ಘಟನೆ

    • By admin
    • August 1, 2026
    • 2 views
    ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಮುಚ್ಚಿರಡ್ಕದಲ್ಲಿ ದಾರುಣ ಘಟನೆ

    ಬೆಳ್ತಂಗಡಿಯಲ್ಲಿ ಭಾರಿ ಮಾದಕವಸ್ತು ಬೇಟೆ: ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಜಪ್ತಿ – ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು

    • By admin
    • July 30, 2026
    • 5 views
    ಬೆಳ್ತಂಗಡಿಯಲ್ಲಿ ಭಾರಿ ಮಾದಕವಸ್ತು ಬೇಟೆ: ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಜಪ್ತಿ – ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು

    ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಸಂತ ಗೌಡರ ತುರ್ತು ಚಿಕಿತ್ಸೆಗೆ ನೆರವಿಗಾಗಿ ಮನವಿ

    • By admin
    • July 30, 2026
    • 12 views
    ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಸಂತ ಗೌಡರ ತುರ್ತು ಚಿಕಿತ್ಸೆಗೆ  ನೆರವಿಗಾಗಿ ಮನವಿ

    ಬೆಳ್ತಂಗಡಿ ಕ್ಷೇತ್ರದ ಧಾರ್ಮಿಕ-ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಉಪಮುಖ್ಯಮಂತ್ರಿಗೆ ಶಾಸಕ ಹರೀಶ್ ಪೂಂಜಾರವರಿಂದ ಮನವಿ

    • By admin
    • July 30, 2026
    • 10 views
    ಬೆಳ್ತಂಗಡಿ ಕ್ಷೇತ್ರದ ಧಾರ್ಮಿಕ-ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಉಪಮುಖ್ಯಮಂತ್ರಿಗೆ ಶಾಸಕ ಹರೀಶ್ ಪೂಂಜಾರವರಿಂದ ಮನವಿ

    ಬೆಳ್ತಂಗಡಿ: ಗುರುವಾಯನಕೆರೆ-ವೇಣೂರಿನ ಹದಗೆಟ್ಟ ರಸ್ತೆಯ ತುರ್ತು ದುರಸ್ತಿ ಕಾರ್ಯ, ಶಾಸಕರ ತುರ್ತು ಸ್ಪಂದನೆ

    • By admin
    • July 29, 2026
    • 11 views
    ಬೆಳ್ತಂಗಡಿ: ಗುರುವಾಯನಕೆರೆ-ವೇಣೂರಿನ  ಹದಗೆಟ್ಟ ರಸ್ತೆಯ ತುರ್ತು ದುರಸ್ತಿ ಕಾರ್ಯ, ಶಾಸಕರ ತುರ್ತು ಸ್ಪಂದನೆ

    30 ವರ್ಷಗಳಿಂದ ಶಾಪಗ್ರಸ್ತವಾಗಿರುವ ಮುಂಡಾಜೆ ಗ್ರಾಮದ ಸೀಟು–ಕಾಯರ್ತೋಡಿ–ಕೊಡಂಗೆ–ಮೂಲಾರು ಕುಡೆಂಚಿ ರಸ್ತೆ: ಚುನಾವಣೆ ಬಂದಾಗ ಶಿಲಾನ್ಯಾಸ, ಬಳಿಕ ಮರೆತುಬಿಡುವ ಆರೋಪ

    • By admin
    • July 29, 2026
    • 11 views
    30 ವರ್ಷಗಳಿಂದ ಶಾಪಗ್ರಸ್ತವಾಗಿರುವ ಮುಂಡಾಜೆ ಗ್ರಾಮದ ಸೀಟು–ಕಾಯರ್ತೋಡಿ–ಕೊಡಂಗೆ–ಮೂಲಾರು ಕುಡೆಂಚಿ ರಸ್ತೆ: ಚುನಾವಣೆ ಬಂದಾಗ ಶಿಲಾನ್ಯಾಸ, ಬಳಿಕ ಮರೆತುಬಿಡುವ ಆರೋಪ