“ದರ್ಪಣ ಇದು ಅರಿವಿನ ದೀವಿಗೆ” ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಚಿತ್ರ-ಕವನ ಸ್ಪರ್ಧೆಗೆ ಆಹ್ವಾನ

ದರ್ಪಣ ಇದು ಅರಿವಿನ ದೀವಿಗೆ ತಂಡ ರೇಡಿಯೋ ನಿನಾದ, ಮಡಿಲು ಸಾಂಸ್ಕೃತಿಕ ಟ್ರಸ್ಟ್(ರಿ), ಮಂಗಳೂರು ಮತ್ತು ಕುತೂಹಲ ಕಲರವ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಚಿತ್ರ-ಕವನ ಸ್ಪರ್ಧೆಯನ್ನು ಏರ್ಪಡಿಸಿದೆ.

READ ALSO

ಭಾಗವಹಿಸಲಿಚ್ಚಿಸುವ ಸ್ಪರ್ಧಾರ್ಥಿಗಳು ಯಾವುದಾದರೂ ವಸ್ತು-ವಿಷಯವನ್ನಿಟ್ಟುಕೊಂಡು ಕವನವನ್ನು ರಚಿಸಬೇಕು. ಕವನಕ್ಕೆ ಪೂರಕವಾದ ಫೋಟೋ ಜೊತೆಗಿರಬೇಕು. ಫೋಟೋಗೆ ಪೂರಕವಾಗಿ ಕವನ ನಿರೂಪಿಸಲ್ಪಟ್ಟಿರಬೇಕು.

ಸ್ಪರ್ಧೆ ಎರಡು ಹಂತಗಳಲ್ಲಿ ನಡೆಯಲಿದ್ದು ಒಂದರಿಂದ ಹತ್ತನೇ ತರಗತಿಯವರೆಗೆ ಪ್ರಾಥಮಿಕ ವಿಭಾಗ ಮತ್ತು ಪಿಯುಸಿ ಮೇಲ್ಪಟ್ಟವರು ಪ್ರೌಢ ವಿಭಾಗದಲ್ಲಿ ಭಾಗವಹಿಸಬಹುದಾಗಿದೆ.

ಜುಲೈ15 ಭಾಗವಹಿಸಲು ಕೊನೆಯ ದಿನಾಂಕವಾಗಿದ್ದು ಯಾವುದೇ ಕೃತಿಚೌರ್ಯಕ್ಕೆ ಅವಕಾಶವಿಲ್ಲ. ನಿಮ್ಮ ಚಿತ್ರ+ಕವನಗಳನ್ನು 7022824146 ಸಂಖ್ಯೆಗೆ ವಾಟ್ಸಾಪ್ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ‘ದರ್ಪಣ ಇದು ಅರಿವಿನ ದೀವಿಗೆ’ ಫೇಸ್‍ಬುಕ್ ಪುಟಕ್ಕೆ ಭೇಟಿ ನೀಡಿ