ಕೊರೋನಾ ಹೆಮ್ಮಾರಿಗೆ ಸ್ವಾಮೀಜಿ ಬಲಿ

ಶಿವಮೊಗ್ಗ : ಕೊರೋನಾ ಮಹಾಮಾರಿ ಮಠಾಧೀಶರೋರ್ವರನ್ನು ಬಲಿ ಪಡೆದ ಘಟನೆ ವರದಿಯಾಾಗಿದೆ. ದಾವಣಗೆರೆಯ ಹೊನ್ನಾಳಿ ತಾಲೂಕು ರಾಂಪುರದ ಮಠಾಧೀಶ ಶಿವಯೋಗಿ ಶಿವಾಚಾರ್ಯ ಹಾಲಸ್ವಾಮಿ (55) ರವರು ಕೊರೋನಾ ಸೋಂಕಿನಿಂದ‌ ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮುಳ್ಳುಗದ್ದಿಗೆಗೆ ಪ್ರಸಿದ್ದಿ ಹೊಂದಿದ್ದ 55 ವರ್ಷದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಪರಂಪರೆಯ ಪ್ರಮುಖ ಶ್ರೀಗಳಾಗಿದ್ದರು.

READ ALSO


ಹಲವು ದಿನಗಳಿಂದ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜುಲೈ 11 ರಂದು ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು.

ಮುಖ್ಯಮಂತ್ರಿ ಬಿ.ಎಸ್.ವೈ ಸಂತಾಪ ಸೂಚಿಸಿದ್ದಾರೆ.