ದೇವಸ್ಥಾನದ ಮೂವರು ಸಿಬ್ಬಂದಿಗಳನ್ನು ಹತ್ಯೆಗೈದು ಹುಂಡಿಹಣ ದೋಚಿದ ಖದೀಮರು!

ಮಂಡ್ಯ: ದೇವಸ್ಥಾನದಲ್ಲೇ ಮೂವರನ್ನು ಬರ್ಬರವಾಗಿ ಕೊಲೆ ನಡೆದಿರುವ ಘಟನೆ ಮಂಡ್ಯದ ಗುತ್ತಲಿನಲ್ಲಿ ನಡೆದಿದೆ. ಗುತ್ತಲು ಪ್ರದೇಶದಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಈ ಭೀಕರ ಘಟನೆ ನಡೆದಿದ್ದು ಸಕ್ಕರೆ ನಾಡು ಮಂಡ್ಯದ ಜನತೆ ಅಕ್ಷರಶಃ ಬೆಚ್ಚಿ ಬೀಳುವಂತೆ ಮಾಡಿದೆ.

ದೇವಾಲಯದ ಅವರಣದಲ್ಲೇ ಕೊಲೆ ನಡೆದಿದ್ದು, ಕೊಲೆಯಾದ ಮೂವರನ್ನು ಗಣೇಶ, ಪ್ರಕಾಶ ಮತ್ತು ಆನಂದ ಎಂದು ಗುರುತಿಸಲಾಗಿದೆ. ಈ ಮೂವರು ದೇವಸ್ಥಾನದಲ್ಲಿ ಅರ್ಚಕರಾಗಿಯೂ ಮತ್ತು ಸೆಕ್ಯೂರಿಟಿಯಾಗಿಯೂ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

READ ALSO

ಮಲಗಿದ್ದ ಮೂವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜೊತೆಗೆ ಹುಂಡಿ ಹೊತ್ತೊಯ್ದು ದೇವಾಲಯದ ಹೊರಗೆ ಬೀಸಾಡಿದ್ದಾರೆ. ಹೀಗಾಗಿ ಯಾರೋ ದುಷ್ಕರ್ಮಿಗಳು ಹುಂಡಿ ಹಣಕ್ಕಾಗಿ ಮೂವರನ್ನು ಹತ್ಯೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.