
ಮಂಗಳೂರು: “ಕಾತ್ಯಾಯನಿ ಕ್ರಿಯೇಷನ್ಸ್” ಅವರ ನಿರ್ಮಾಣದ “ತೀರ್ಪು” ಟೆಲಿ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ನಡೆಯಿತು. ದೈಜಿ ವರ್ಲ್ಡ್ ಇದರ ‘ವಾಲ್ಟರ್ ನಂದಳಿಕೆ’ ಯವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು, ಖ್ಯಾತ ನಿರ್ಮಾಪಕ – ನಿರ್ದೇಶಕರಾದ ‘ವಿಜಯಕುಮಾರ್ ಕೊಡಿಯಾಲಬೈಲ್’ ಅವರು ಕ್ಯಾಮರಾ ಚಾಲನೆ ಮಾಡಿ, ಶುಭ ಹಾರೈಸಿದರು. ಖ್ಯಾತ ಯೂಟ್ಯೂಬ್ ಚಾನೆಲ್ “ಬೊಂಬಾಟ್ ಸಿನೆಮಾ” ಇದರ ಸೂರಜ್ ಮಂಗಳೂರು ಉಪಸ್ಥಿತರಿದ್ದರು.

“ತೀರ್ಪು” ಟೆಲಿ ಚಿತ್ರವನ್ನು ಮನು ಉಜಿರೆ ನಿರ್ದೇಶನ ಮಾಡುತ್ತಿದ್ದು, ಬೆಳ್ತಂಗಡಿಯ ಪ್ರಣೀತ್ ಕುಲಾಲ್ ಛಾಯಾಗ್ರಾಹಣ ಮಾಡುತ್ತಿದ್ದಾರೆ. ಕೃಷ್ಣ ಬೆಳ್ತಂಗಡಿ ಅವರ ಸಂಭಾಷಣೆ ಸಹಕಾರ ಈ ಚಿತ್ರಕ್ಕಿದೆ. ಖ್ಯಾತ ಕಾರ್ ರೇಸರ್ ಆಗಿರುವ ಉಮೇಶ್ ಪ್ರಭು ಧರ್ಮಸ್ಥಳ ಅವರು ಮೊದಲ ಬಾರಿ ನಾಯಕರಾಗಿ ಸಿನಿಲೋಕಕ್ಕೆ ಕಾಲಿಟ್ಟಿದ್ದಾರೆ. ಮುಖ್ಯ ಪಾತ್ರದಲ್ಲಿ ನಾಟ್ಯ ವಿದುಷಿ ಶಾಂಭವಿ ಆಚಾರ್ಯ ಉಡುಪಿ, ಶಿವಪ್ಪ ಬಿರ್ವ, ಶಶಿ, ಸುಮಂತ್ ಶೆಟ್ಟಿ, ಪ್ರೀತಮ್ ಶೆಟ್ಟಿ, ದೀಕ್ಷಿತಾ ಪೂಜಾರಿ ಹಾಗೂ ಧರ್ಮಸ್ಥಳದ ಯುವಕರ ತಂಡ ಈ ತೀರ್ಪು ಟೆಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.