
ತಿರುಪತಿ: ತಿರುಪತಿಯ ವಿಷ್ಣು ನಿವಾಸದಲ್ಲಿ ವೈಕುಂಠದ್ವಾರದ ಸರ್ವದರ್ಶನದ ಟೋಕನ್ ವಿತರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಐವರು ಮಹಿಳೆಯರು ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ.
ಅವಧಿಗೂ ಮುನ್ನವೇ ಟೋಕನ್ ನೀಡಲು ಮುಂದಾದ ಪರಿಣಾಮವಾಗಿ ಭಕ್ತರು ಮುಗಿಬಿದ್ದದ್ದೆ ಅವಘಡಕ್ಕೆ ಕಾರಣವಾಗಿದೆ ನಾಳೆ ಬೆಳಿಗ್ಗೆ 5ಗಂಟೆಗೆ ನೀಡಬೇಕಾದ ಟೋಕನ್ ಟಿಕೆಟ್ ಅವಧಿಗೆ ಮುನ್ನವೇ ನೀಡುತ್ತಿರುವ ವಿಚಾರ ತಿಳಿದು ಭಕ್ತರು ಏಕಾಏಕಿ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಇದಲ್ಲದೇ ಈ ಸಮಯದಲ್ಲಿ ಟಿಟಿಡಿ ಹಾಗೂ ಪೋಲೀಸರ ನಡುವೆ ಹೊಂದಾಣಿಕೆ ಇಲ್ಲದೆ ಇರುವುದು ಕೂಡ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ
ಭಾರೀ ಸಂಖ್ಯೆಯಲ್ಲಿ ಭಕ್ತರು ಟೋಕನ್ ಪಡೆಯಲು ಯತ್ನಿಸಿದ ಪರಿಣಾಮ ನೂಕುನುಗ್ಗಲು ಉಂಟಾಯಿತು. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ರುಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಂಭೀರ ಸ್ಥಿತಿಯಲ್ಲಿ ಇರುವ ಗಾಯಾಳುಗಳನ್ನು ಹಾಗೂ ಅಸ್ವಸ್ಥರನ್ನು ಏರ್ ಲಿಫ್ಟ್ ಮಾಡಲು ಸಿಎಂ ಸೂಚನೆ ನೀಡಿದ್ದಾರೆ.