ನವದೆಹಲಿ: ಕೊರೋನಾ ಸಂಕಷ್ಟದಿಂದ ತತ್ತರಿಸಿರುವ ದೇಶವಾಸಿಗಳ ನೆರವಿಗೆ ಧಾವಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೀಪಾವಳಿವರೆಗೂ ಉಚಿತ ರೇಷನ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದೆ.
ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಘೋಷಣೆ ಮಾಡಿದ್ದು, “ಪ್ರಧಾನಿ ಗರೀಬ್ ಅನ್ನ ಕಲ್ಯಾಣ ಯೋಜನೆ” ಯನ್ನು ವಿಸ್ತರಣೆ ಮಾಡಲಾಗಿದ್ದು, ದೀಪಾವಳಿವರೆಗೂ ಅಂದರೆ ನವೆಂಬರ್’ವರೆಗೂ ಉಚಿತ ರೇಷನ್ ವಿತರಣೆ ಮಾಡಲಿದ್ದು, ಇದರಿಂದ ದೇಶದ 80 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದರು.
ಒಂದು ದೇಶ,ಒಂದು ರೇಷನ್ ಕಾರ್ಡ್ ಆಗುತ್ತಾ?
ಕೇಂದ್ರ ಸರ್ಕಾರ ಒಂದು ಬಹುದೊಡ್ಡ ಕನಸು ಕಂಡಿದೆ. ಒಂದು ರಾಷ್ಟ್ರಕ್ಕೆ ಒಂದೇ ರೇಷನ್ ಕಾರ್ಡ್ ಯೋಜನೆ ಜಾರಿಗೊಳಿಸುವ ಕುರಿತು ಹೇಳಿದ್ದಾರೆ. ಇದರಿಂದ ಜನರಿಗೆ ತುಂಬಾನೇ ಪ್ರಯೋಜನವಾಗಲಿದೆ. ರೇಷನ್ ಕಾರ್ಡ್ ಇದ್ದರೆ ಎಲ್ಲಿ ಬೇಕಾದ್ರೂ ಕೂಡ ಪಡಿತರವನ್ನು ಪಡೆಯಬಹುದು ಅಂತ ಮೋದಿ ಹೇಳಿದರು.
ಸರ್ಕಾರ ಬಡವರ ಜೊತೆ ಸದಾ ಇರುತ್ತೆ
ನಮ್ಮ ಸರ್ಕಾರ ಬಡವರ ಜೊತೆ ಸದಾ ಇರುತ್ತೆ ಅಂತ ಮೋದಿ ಸಾರಿದ್ರು. ಬಡವರು, ಶ್ರಮಿಕರ ಸಬಲೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸಾರಿದ್ರು. ಆರ್ಥಿಕ ಪರಿಸ್ಥಿತಿ ಬಲಪಡಿಸುವುದಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತೆ ಅಂತನೂ ಪ್ರಧಾನಿ ಸಾರಿದ್ದಾರೆ.
ಮೋದಿ ಮಾಡಿದ ಪ್ರಾರ್ಥನೆ ಏನು ಗೊತ್ತಾ
ಕೊರೋನಾ ವಿರುದ್ಧ ಹೋರಾಡುತ್ತಾ ಅನ್ ಲಾಕ್ 2ನ್ನು ಪ್ರವೇಶ ಮಾಡಿದ್ದೇವೆ ದೇಶದ ಜನರಲ್ಲಿ ಪ್ರಾರ್ಥನೆ ಮಾಡುವುದು ಒಂದೇ, ಮಾಸ್ಕ್ ಧರಿಸಿ, ಅಂತರವನ್ನು ಕಾಪಾಡಿಕೊಳ್ಳಿ. ಬೇರೇ ದೇಶಗಳಿಗೆ ಹೋಲಿಸಿದ್ರೆ ನಮ್ಮ ದೇಶದ ಸ್ಥಿತಿ ಉತ್ತಮವಾಗಿದೆ, ಮೊದಲ ಲಾಕ್ ಡೌನ್ ಲಕ್ಷಾಂತರ ಜನರ ಪ್ರಾಣ ಉಳಿದಿದೆ.
ಪದೇ ಪದೆ ಕೈ ತೊಳೆಯುವುದನ್ನು ಬಿಡಬೇಡಿ, ಲಾಕ್ ಡೌನ್ ಸಮಯದಲ್ಲಿ ನಿಯಮ ಪಾಲಿಸಿದಂತೆ ನಿಯಮವನ್ನು ಪಾಲನೆ ಮಾಡಿ ಎಂದರು.
ಜನ ಸಾಮಾನ್ಯನಿಗೂ ಪ್ರಧಾನಿಗೂ ಒಂದೇ ನಿಯಮ:
ಮಾಸ್ಕ್ ಧರಿಸುವ ವಿಚಾರದಲ್ಲಿ ಯಾವುದೇ ತಾರತಮ್ಯವಿಲ್ಲ, ಪ್ರಧಾನಿಯಾದರೂ ಒಂದೇ ಸಾಮಾನ್ಯನಾದರೂ ಒಂದೇ, ಮಾಸ್ಕ್ ಧರಿಸದ ದೇಶದ ಪ್ರಧಾನಿಗೆ 13 ಸಾವಿರ ರೂಪಾಯಿ ದಂಡ ವಿಧಿಸಿದ್ದು ನಿಮಗೆಲ್ಲ ಗೊತ್ತಿದೆ. ಭಾರತದಲ್ಲಿ ಸ್ಥಳೀಯ ಆಡಳಿತಗಳು ಕೂಡ ಈ ರೀತಿಯ ಕೆಲಸ ಮಾಡಬೇಕು ಎಂದರು.ಎಂದರು
9ಸಾವಿರ ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ನಿಧಿ ತಲುಪಿದೆ ಅಂತ ಪ್ರಧಾನಿ ಇದೇ ವೇಳೆ ಘೋಷಣೆ ಮಾಡಿದ್ರು. ರೈತರ ಖಾತೆಗಳಿಗೆ 18 ಸಾವಿರ ಕೋಟಿ ರೂಪಾಯಿ ಹಣ ಜಮೆಯಾಗಿದೆ ಎಂದರು.