“ಸಸ್ಯಸಂಪತ್ತು ಬೆಳೆಸಿ ಸದೃಢ ಆರೋಗ್ಯ ವೃದ್ಧಿಸಿ” ಮರ-ಗಿಡಗಳನ್ನು ಬೆಳೆಸಿ ಪೋಷಿಸುವ ಕಾರ್ಯಕ್ಕೆ ಮುಂದಾಗಿ: ಪ್ರಶಾಂತ್ ಕುಮಾರ್

ಶಿಡ್ಲಘಟ್ಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ವ್ಯಾಪ್ತಿಯ ಕನ್ನಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪರಿಸರ ಮಾಹಿತಿ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು.

READ ALSO

ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ರವರು ಮಾತನಾಡುತ್ತಾ ಕಾಡು ಬೆಳೆದರೆ ನಾಡು ಉಳಿದಂತೆ ಎಂಬ ನಾಣ್ಣುಡಿಯಂತೆ ಮನುಷ್ಯನಿಗೆ ಅತ್ಯಂತ ಅವಶ್ಯಕವಾಗಿರುವ ಆಮ್ಲಜನಕವನ್ನು ಬಿಡುಗಡೆ ಮಾಡುವ ಗಿಡ-ಮರಗಳನ್ನು ಬೆಳಸಿ ಪೋಷಿಸಬೇಕು ಆದರೆ ಇತ್ತೀಚಿನ ದಿನಗಳಲ್ಲಿ ನಾವು ಶುದ್ಧ ಗಾಳಿಗಾಗಿ ಹಣ ಕೊಡುವ ದುಸ್ಥಿತಿ ನಿರ್ಮಾಣವಾಗಿದೆ. ಗಿಡ ಮರಗಳಿದ್ದಲ್ಲಿ ಉತ್ತಮ ಮಳೆ ಬೆಳೆಯಾಗುತ್ತದೆ. ಮನುಷ್ಯ ಆಧುನಿಕತೆಯ ಮೊರೆ ಹೋಗಿ ಗಿಡ ಮರಗಳನ್ನು ಕಡಿದು ನಾಶ ಮಾಡಿ ಪ್ರಕೃತಿಯ ಮುನಿಸಿಗೆ ಕಾರಣನಾಗಿದ್ದಾನೆ. ಈ ಕಾರಣದಿಂದಾಗಿಯೇ ಹೊಸ ಹೊಸ ಕಾಯಿಲೆಗಳು ವಕ್ಕರಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಈ ಕರೋನ ಮಹಾಮಾರಿಗೆ ಅದೆಷ್ಟೋ ಜನ ಆಮ್ಲಜನಕ ಸಿಗದೇ ಪ್ರಾಣ ತೆತ್ತಿದ್ದಾರೆ ಇನ್ನು ಮುಂದೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಗಂಡಾಂತರ ಖಚಿತ ಎಂದು ತಿಳಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರತಿ ವರ್ಷ ರಾಜ್ಯಾದಾದ್ಯಂತ ಪರಿಸರ ಉಳಿಸಿ ಬೆಳೆಸುವ ಬಗ್ಗೆ ಜಾಗೃತಿ ಹಾಗೂ ಸಸಿ ನೆಟ್ಟು ಅದನ್ನು ಘೋಷಣೆ ಮಾಡುವ ಮೂಲಕ ಪರಿಸರದ ಬಗ್ಗೆ ಕಾಳಜಿ ವಹಿಸಿ ಸುಮಾರು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್. ಮೇಲ್ವಿಚಾರಕರಾದ ಆಶಾ. ಊರಿನ ಗಣ್ಯರಾದ ವೆಂಕಟೇಶ್. ಶಾಲಾ ಶಿಕ್ಷಕರಾದ ಚೌಡರೆಡ್ಡಿ. ಶ್ರೀನಿವಾಸ್. ಸೇವಾಪ್ರತಿನಿಧಿ ಭಾಗ್ಯಲಕ್ಷ್ಮಿ ಡೈರಿ ಕಾರ್ಯದರ್ಶಿ ರವಿ. ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.