ಕಡಲ ಬರಿತ ಉಡಲ್ ಡೊಂಜಿ ರಾಜ್ಯೋದ ಕನ “ತುಳುವೆರೆ ಪಕ್ಷ” ತುಳುವೆರೆ ಪಕ್ಷಕ್ಕೆ ಅಧಿಕೃತ ಮನ್ನಣೆ! ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್!

ಕುಡ್ಲ: ಉಡುಪಿ ಜಿಲ್ಲೆಯ ಬಾರ್ಕೂರಿನಿಂದ ಹಿಡಿದು ಕೇರಳ ರಾಜ್ಯದ ಕಾಸರಗೋಡಿನ ಚಂದ್ರಗಿರಿವರೆಗಿನ ಪ್ರದೇಶ ತುಳುನಾಡು ಎನ್ನುವುದು ತುಳು ಸಂಸ್ಕೃತಿಗೆ ಸಂಬಂಧಪಟ್ಟ ಗ್ರಂಥಗಳಲ್ಲಿ ಕಂಡು ಬರುತ್ತದೆ. ಈ ತುಳುನಾಡನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಎನ್ನುವ ಕೂಗು ಇಂದು ನಿನ್ನೆಯದಲ್ಲ. ತುಳುವಿನ ಬಗ್ಗೆ ಹೋರಾಟ ನಡೆಸುತ್ತಿರುವ ಸಂಘಟನೆಗಳಿಗೆ ವಿಶೇಷವಾಗಿ ರಾಜಕೀಯ ಬಲದ ಬೆಂಬಲವಿಲ್ಲದ ಕಾರಣ ಈ ಕೂಗು ಎದ್ದಷ್ಟೇ ವೇಗದಲ್ಲಿ ಕುಂಠಿತಗೊಂಡಿದೆ. ಆದರೆ ಇದೀಗ ತುಳುವರಿಗಾಗಿಯೇ ತುಳುವರ ಪಕ್ಷವೆನ್ನುವ ರಾಜಕೀಯ ಪಕ್ಷ ಸಿದ್ಧಗೊಂಡಿದೆ. ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ಈ ಪಕ್ಷ ನೊಂದಾಯಿತಗೊಂಡಿದ್ದು, ತುಳು ಸಂಘಟನೆಗಳ ಬೇಡಿಕೆಗೆ ರಾಜಕೀಯ ಬಲ ನೀಡುವ ಕೆಲಸದಲ್ಲಿ ಈ ಪಕ್ಷ ತೊಡಗಿಕೊಳ್ಳಲಿದೆ.

ತುಳುವೇರೆ ಪಕ್ಷೋಗು ಮಾನ್ಯತೆ ತಿಕ್ಕಿನೆರ್ದಾವರ ಮಸ್ತ್ ಜನ ಪಕ್ಷ ಸೆರ್ಯಾರಾ ತಯಾರಾದುಲ್ಲೆರ್ ಪಕ್ಷೋಗು ಎಡ್ಡೆ ಪ್ರತಿಕ್ರಿಯೆ ಬರೊಂದುಂಡು ಮಾತ ತುಳುವೆರೇನ್ ಒಟ್ಟು ಮಲ್ಪುನೇ ಸದಸ್ಯತ್ವೋಗು ಅಭಿಯಾನ ಮಲ್ಪುನಾ ಆಲೋಚನೆ ಉಂಡು.  ಶೈಲೇಶ್ ಆರ್.ಜೆ. ಕೇಂದ್ರಾದ್ಯಕ್ಷೇರ್ ತುಳುವೆರೇ ಪಕ್ಷ

READ ALSO

ಪಂಚ ದ್ರಾವೀಡ ಭಾಷೆಗಳಲ್ಲೊಂದಾದ ತುಳು ಭಾಷೆಯು ಶೈಕ್ಷಣಿಕ, ಸಂಶೋಧನಾತ್ಮಕ ರೀತಿಯಲ್ಲಿ ಈಗಾಗಲೇ ಅಭಿವೃದ್ದಿ ಹೊಂದುತ್ತಿದೆ. ಉಳಿದ ಭಾಷೆಗಳಾದ ತಮಿಳು, ಕನ್ನಡ, ಮಲಯಾಳ ಹಾಗೂ ತೆಲುಗು ಭಾಷೆಗಳಿಗೆ ಈಗಾಗಲೇ ಸಂವಿಧಾನಾತ್ಮಕ ಮಾನ್ಯತೆ ದೊರೆತಿದ್ದರೆ, ತುಳುವಿಗೆ ಮಾತ್ರ ಈವರೆಗೆ ಈ ಸ್ಥಾನಮಾನಗಳು ದೊರೆತಿಲ್ಲ. ಈ ಕಾರಣಕ್ಕಾಗಿ ತುಳು ಭಾಷೆಯನ್ನು ಎಲ್ಲಾ ಸರಕಾರಗಳೂ, ರಾಜಕೀಯ ಪಕ್ಷಗಳೂ ನಗಣ್ಯ ರೀತಿಯಲ್ಲಿ ಕಾಣುತ್ತಿವೆ ಎನ್ನುವ ಆರೋಪವನ್ನು ತುಳು ಸಂಘಟನೆಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಸಮರ್ಪಕ ರಾಜಕೀಯ ಬೆಂಬಲವಿಲ್ಲದ ಕಾರಣ ತುಳುನಾಡು ಎಲ್ಲಾ ರೀತಿಯಲ್ಲೂ ಕಡೆಗಣಿಸಲ್ಪಟ್ಟಿದೆ ಎನ್ನುವ ಆರೋಪ ತುಳು ಸಂಘಟನೆಗಳದ್ದಾಗಿದೆ. ಇದೀಗ ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿದ್ದು, ತುಳುವರಿಗಾಗಿಯೇ ತುಳುವರ ಪಕ್ಷ ಎನ್ನುವ ರಾಜಕೀಯ ವೇದಿಕೆ ಸಿದ್ಧಗೊಂಡಿದೆ. ಈಗಾಗಲೇ ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ತುಳುವರ ಪಕ್ಷ ಎಂದೇ ನೊಂದಾಯಿತಗೊಂಡಿರುವ ಈ ಪಕ್ಷ ಮುಂದಿನ ದಿನಗಳಲ್ಲಿ ರಾಜಕೀಯ ಅಖಾಡಕ್ಕೆ ಇಳಿಯಲಿದೆ.