ಉಡುಪಿಯ ಮಣಿಪಾಲದಲ್ಲಿ 4.63 ಲಕ್ಷ ಮೌಲ್ಯದ 54 MDMA ಮಾತ್ರೆ, 30ಗ್ರಾಂ ಬ್ರೌನ್ ಶುಗರ್ ಪತ್ತೆ! ಉಡುಪಿ ಮೂಲದ ಫಝಲ್ ಬಂಧನ!

ಮಣಿಪಾಲ : ಮತ್ತೆ ಮತ್ತೆ ಕರಾವಳಿಯಲ್ಲಿ ಡ್ರಗ್ಸ್ ಜಾಲ ಬಯಲಾಗುತ್ತಲೇ ಇದೆ. ಇದೀಗ ಮಣಿಪಾಲದಲ್ಲಿ ಪೊಲೀಸರು ಖಚಿತ ಮಾಹಿತಿಯ ಮೇಲೆ ದಾಳಿಯನ್ನು ನಡೆಸಿ 4.63 ಮೌಲ್ಯದ ಬ್ರೌನ್ ಶುಗರ್ ಸೇರಿದಂತೆ ಮಾಧಕ ವಸ್ತುಗಳ ಜೊತೆ ಓರ್ವ ಪೆಡ್ಲರ್ ನನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ಬಂಧಿತ ಉಡುಪಿ ಜಿಲ್ಲೆಯ ಬ್ರಹ್ಮಾವರ ಮೂಲದ ಫಝಲ್ ಎಂಬವನಾಗಿದ್ದು ಈತ ನಿಂದ 2 ಮೊಬೈಲ್, ಎಂಡಿಎಂಎ ಮಾತ್ರೆಗಳು, ಬ್ರೌನ್ ಶುಗರ್ ಸೇರಿದಂತೆ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

READ ALSO

ಫಝಲ್ ವಿಚಾರಣೆಯ ವೇಳೆಯಲ್ಲಿ ಮಹತ್ವದ ಮಾಹಿತಿಯನ್ನು ಬಾಯ್ಬಿಟ್ಟಿದ್ದು, ತನ್ನ ಸ್ನೇಹಿತರಾದ ಉಡುಪಿಯ ಫರ್ಹಾನ್ ಮತ್ತು ಸಫಾ ಸೇರಿಕೊಂಡು ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್ ಶುಗರ್ ಗಳನ್ನು ಆನ್ ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಸ್ಕೆಚ್ ಹಾಕಿರುವುದಾಗಿ ಬಂಧಿತ ಫಝಲ್ ಬಾಯ್ಬಿಟ್ಟಿದ್ದಾನೆ.

ಫಝಲ್ ಬಂಧನದ ಬೆನ್ನಲ್ಲೇ ಮಣಿಪಾಲ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದು, ಫಝಲ್ ಸ್ನೇಹಿತರಿಗಾಗಿ ಬಲೆ ಬೀಸಿದ್ದಾರೆ. ಅಲ್ಲದೇ ಡ್ರಗ್ಸ್ ಜಾಲವನ್ನು ಬೇಧಿಸುವ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.