ಜಿಹಾದ್ ಅನ್ನೋದು ಮುಸ್ಲಿಮರ ಧರ್ಮ ಯುದ್ಧ, ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿಸಲು ಜಗತ್ತಿನ ಮುಸ್ಲಿಂ ದೇಶಗಳು ಪಣ ತೊಟ್ಟಿವೆ: ಜಗದೀಶ ಕಾರಂತ

ಉಡುಪಿ: ಜಿಹಾದ್ ಅನ್ನೋದು ಮುಸ್ಲಿಮರ ಧರ್ಮ ಯುದ್ಧ. ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿಸಲು ಜಗತ್ತಿನ ಮುಸ್ಲಿಂ ದೇಶಗಳು ಪಣ ತೊಟ್ಟಿವೆ. ಇದಕ್ಕಾಗಿ ಜಿಹಾದ್ ಹೆಸರಲ್ಲಿ ಭಾರತ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಧರ್ಮ ಯುದ್ಧವನ್ನು ಸಾರಿವೆ ಎಂದು ಹಿಂದು ಜಾಗರಣ ವೇದಿಕೆ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಹೇಳಿದ್ದಾರೆ.

ವಿಜಯದಶಮಿ ಪ್ರಯುಕ್ತ ಉಡುಪಿಯಲ್ಲಿ ಹಮ್ಮಿಕೊಂಡಿದ್ದ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಜಗದೀಶ ಕಾರಂತ ಭಾಷಣ ಮಾಡಿದರು. ಸಿರಿಯಾದ ಐಸಿಸ್ ಅನ್ನೋದು ತಾಲಿಬಾನಿಗಳ ಸೋದರ ಸಂಘಟನೆ ಈ ಐಸಿಸ್ ಉಗ್ರವಾದಿ ಸಂಘಟನೆಗಳಿಗೆ ನಮ್ಮ ಏರಿಯಾದಲ್ಲಿಯೂ ಬೆಂಬಲ ಸಿಗುತ್ತಿದೆ. ನಮ್ಮ ನಡುವಿನಿಂದಲೇ ಐಸಿಸ್ ಕಾರ್ಯಕರ್ತರನ್ನಾಗಿ ಸೇರ್ಪಡೆಯೂ ಮಾಡಲಾಗುತ್ತಿದೆ. ಈ ರೀತಿಯ ಚಟುವಟಿಕೆ ಬಗ್ಗೆ ಹಿಂದುಗಳು ನಿಗಾ ಇಡಬೇಕು ಮತ್ತು ಇಂಥವನ್ನು ಹತ್ತಿಕ್ಕುವ ಕೆಲಸ ಮಾಡಬೇಕು. ಮಂಗಳೂರಿನಲ್ಲಿ ಸಿಎಎ ನೆಪದಲ್ಲಿ ನಡೆದ ಹಿಂಸಾಚಾರ ಅತ್ಯಂತ ವ್ಯವಸ್ಥಿತವಾಗಿ ನಡೆದಿತ್ತು. ಸಿಎಎ ಕಾಯ್ದೆಯು ಒಂದು ಕಾಲದಲ್ಲಿ ಭಾರತದ ಭಾಗವೇ ಆಗಿದ್ದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಅಲ್ಪಸಂಖ್ಯಾತರಿಗೆ ನಾಗರಿಕ ಹಕ್ಕುಗಳನ್ನು ನೀಡುವ ಕಾಯ್ದೆ. ಅದರಿಂದ ಮಂಗಳೂರಿನ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಆಗೋದಿಲ್ಲ.

READ ALSO

ಆದರೆ, ಮಂಗಳೂರಿನಲ್ಲಿ ನಡೆದ ಸಿಎಎ ಪ್ರತಿಭಟನೆಯ ನೆಪದಲ್ಲಿ ಹಿಂಸಾಚಾರ ನಡೆಸಲಾಯ್ತು. ಆಟೋ, ಟೆಂಪೋ, ಗೂಡ್ಸ್ ವಾಹನಗಳಲ್ಲಿ ಕಲ್ಲುಗಳನ್ನು ತಂದು, ಪೊಲೀಸರ ಮೇಲೆ ಪ್ರಯೋಗ ಮಾಡಲಾಯ್ತು, ಸಾವಿರಾರು ಮುಸ್ಲಿಮರು ಸೇರಿ ಹಿಂಸಾಚಾರ ನಡೆಸಿದರು. ಇದನ್ನು ಅವರು ಸತ್ತರ್ ಫಂಕೋ ಚಳವಳಿ’ ಎಂದು ಕರೆದರು. ಅಂದಿನ ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ, ಶೂಟ್ ಆಂಡ್ ಸೈಟ್ ಆದೇಶ ಮಾಡದೇ ಇರುತ್ತಿದ್ದರೆ ಆವತ್ತಿನ ಸ್ಥಿತಿ ಬೇರೆಯದೇ ಆಗಿರುತ್ತಿತ್ತು ಎಂದು ಜಗದೀಶ ಕಾರಂತ ವಿಶ್ಲೇಷಣೆ ಮಾಡಿದ್ದಾರೆ.

ದುರ್ಗಾ ದೌಡ್ ಅನ್ನೋದು ಕರಾವಳಿಯ ದುಷ್ಟ ಶಕ್ತಿಗಳ ವಿರುದ್ಧದ ಒಗ್ಗಟ್ಟಿನ ಮಂತ್ರ ಅಷ್ಟೇ, ಬೆಂಗಳೂರಿನ ಕೆಜಿ ಹಳ್ಳಿ ಡಿಜೆ ಹಳ್ಳಿಯಲ್ಲಿ ಗಲಭೆ ಆಗಿದ್ದರೆ, ಅದಕ್ಕೆ ನಿಶ್ಚಿತ ಕಾರಣ ಇಲ್ಲದೇ ಆಗಿದ್ದಲ್ಲ. ಸಂಜೆ 4.30ರ ವೇಳೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದುಬಂದ ಸಂದೇಶಕ್ಕೆ ಪ್ರತಿಯಾಗಿ ಅದೇ ಸಂಜೆ 7.30ರ ವೇಳೆಗೆ ಸಾವಿರಾರು ಜನರು ಪೊಲೀಸ್ ಠಾಣೆಗಳಲ್ಲಿ ಸೇರಿದ್ದರು. ಆನಂತರ, ರಾತ್ರಿ 10 ಗಂಟೆ ಆಗುವಾಗ ಆ ಠಾಣೆ ವ್ಯಾಪ್ತಿಯ ಹಿಂದುಗಳ ಮನೆಗಳಿಗೆ ನುಗ್ಗಿದ್ದಲ್ಲದೆ, ಬೆಂಕಿ ಇಕ್ಕುವ ಕೆಲಸ ವ್ಯವಸ್ಥಿತವಾಗಿ ನಡೆದಿತ್ತು. ಆಗಸ್ಟ್ 15ರಂದು ಕಬಕದಲ್ಲಿ ಅದೇ ರೀತಿಯ ದುಷ್ಕೃತ್ಯ ನಡೆದಿತ್ತು. ಸರಕಾರಿ ಕಾರ್ಯಕ್ರಮ ನಡೆಸುತ್ತಿದ್ದ ಸ್ವಾತಂತ್ರ್ಯ ರಥವನ್ನು ತಡೆದು, ಧಿಕ್ಕಾರ ಕೂಗಿದರು. ಆನಂತರ, ರಥದಲ್ಲಿದ್ದ ಸಾವರ್ಕರ್ ಫೋಟೋ ತೆಗೆದು ಟಿಪ್ಪು ಸುಲ್ತಾನ್ ಫೋಟೋ ಹಾಕಲು ಒತ್ತಾಯಿಸಿದರು. ಜ.25ರಂದು ದೆಹಲಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗ, ರೈತರ ಹೆಸರಲ್ಲಿ ತಾಲಿಬಾನಿ ಮನಸ್ಥಿತಿಯ ಗೂಂಡಾಗಳು ಹಿಂಸಾಚಾರ ನಡೆಸಿದರು.