![](https://kalanirnayanews.com/wp-content/uploads/2021/01/IMG-20210128-WA0091-1.jpg)
ಬೆಳ್ತಂಗಡಿ: ಬೆನಕ ಹೆಲ್ತ್ ಸೆಂಟರ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ ಸೇವಾ ಭಾರತಿ ಕನ್ಯಾಡಿ ,ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ಬೆಳ್ತಂಗಡಿ ಘಟಕ ಇವುಗಳ ಆಶ್ರಯದಲ್ಲಿ ಇಂದು ಬೆನಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ರೋಟರಿ ಜಿಲ್ಲೆಯ ಆಸಿಸ್ಟೆಂಟ್ ಗವರ್ನರ್ ಹಾಗೂ ವಿಧಾನ ಪರಿಷತ್ ಸದಸ್ಯರೂ ಆಗಿರುವ ರೊ.ಪ್ರತಾಪಸಿಂಹ ನಾಯಕ್ ಅವರು ಶಿಬಿರವನ್ನು ಉದ್ಗಾಟಿಸಿದರು.
ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ರೊ ಧನಂಜಯರಾವ್ ,ಬೆನಕಾ ಹೆಲ್ತ್ ಸೆಂಟರ್ ನ ಆಡಳಿತ ನಿರ್ದೇಶಕರಾದ ರೊ.ಡಾ.ಗೋಪಾಲಕೃಷ್ಣ, ಸೇವಾಭಾರತಿ ಕನ್ಯಾಡಿ ಯ ಅಧ್ಯಕ್ಷರಾದ ಶ್ರೀ ವಿನಾಯಕ ರಾವ್ ಕನ್ಯಾಡಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್ ಮ್ಯಾನೇಜರ್ ಶ್ರೀ ಪ್ರವೀಣ್ ಹಾಗೂ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ರೊ.ಯಶವಂತ ಪಟವರ್ಧನ್ ಅವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಯಾದ ರೊ ಶ್ರೀಧರ ಕೆ.ವಿ , ರೊ.ಡಾ.ಜಯಕುಮಾರ ಶೆಟ್ಟಿ ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ದೀಪಾಲಿ ಡೋಂಗ್ರೆ, ಸದಸ್ಯರಾದ ಡಾ.ಭಾರತೀ, ರೊ.ವೈಕುಂಠ ಪ್ರಭು, ರೊ.ರವಿ ಚೆಕ್ಕಿತ್ತಾಯ ಅವರುಗಳು ಉಪಸ್ಥಿತರಿದ್ದರು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಎಸ್.ಜಿ.ಭಟ್ ಅವರು ಅತಿಥಿಗಳನ್ನು ಸ್ವಾಗತಿಸಿ,ಕೊನೆಯಲ್ಲಿ ವಂದಿಸಿದರು.