🚩 “ಧರ್ಮ‌ನಿಂದನಾ ವಿರೋಧಿ ಕಾಯಿದೆ” ಯನ್ನು ಜಾರಿಗೆ ತನ್ನಿ: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಗ್ರಹ

ಬೆಳ್ತಂಗಡಿ : ಕಳೆದ ಹಲವಾರು ವರ್ಷಗಳಿಂದ ನಾಟಕಗಳು, ಚಲನಚಿತ್ರಗಳಲ್ಲಿ, ಜಾಹಿರಾತು ಇತ್ಯಾದಿ ವಿವಿಧ ಮಾಧ್ಯಮಗಳಿಂದ ಹಿಂದೂ ಧರ್ಮ, ಹಿಂದೂ ದೇವತೆಗಳು, ಹಿಂದೂ ಸಮಾಜ ‌ಹಾಗೂ ಹಿಂದೂ ಸಂತರ ಅಪಮಾನ ಮಾಡಲಾಗುತ್ತಿದೆ. ಇವುಗಳನೆಲ್ಲಾ ಹಿಂದೂ ಸಮಾಜವು ವಿರೋಧ ಮಾಡುತ್ತಿದೆಯಾದರೂ ಇಂತಹ ಅಪಮಾನ ವಿರುದ್ಧ ಸೂಕ್ತ ಕಾನೂನು ಜಾರಿಗೊಳಿಸದ ಕಾರಣ ಅಪಮಾನ ಮಾಡುವವರು ನಿರಂತರ ಮಾಡುತ್ತಾ ಇರುತ್ತಾರೆ. ಹಿಂದೂ ಧರ್ಮ, ದೇವತೆ, ಸಾಧು-ಸಂತರ ಅಪಮಾನವನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೆಗೊಳಿಸಬೇಕು ಮತ್ತು ತಕ್ಷಣವೇ ಅದರ ಅನುಸಾರ ಕಾರ್ಯಾಚರಣೆ ಪ್ರಾರಂಭಿಸಬೇಕೆಂದು ಬೇಡಿಕೆಯನ್ನು ನೀಡುತ್ತಾ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ತಹಶಿಲ್ದಾರರಾದ ಶ್ರೀ.ಶಂಕರ್ ಇವರ ಮೂಲಕ ಕೇಂದ್ರ ಗೃಹಸಚಿವರು ಮತ್ತು ಕಾನೂನು ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ.ಮೋಹನ್ ಬೆಳ್ತಂಗಡಿ, ವಿಶ್ವಹಿಂದೂ ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ, ಶ್ರೀ.ಕೇಶವ ಅಚ್ಚಿನಡ್ಕ, ಬೆಳ್ತಂಗಡಿ ನಗರ ಬಿಜೆಪಿ ಕಾರ್ಯದರ್ಶಿ, ಶ್ರೀ.ಉದಯ್ ಕುಮಾರ್ ವಕೀಲರು ಬಂದಾರು, ಮತ್ತು ಶ್ರೀ. ಮುರುಳಿಧರ ಕೆಲ್ಲಗುತ್ತು, ಪ್ರಗತಿಪರ ಕೃಷಿಕರು ಮತ್ತು ಸಮಿತಿಯ ಕಾರ್ಯಕರ್ತರು ಉಪಸ್ಥಿತಿತರಿದ್ದರು.

READ ALSO