ಉಜಿರೆ: ಉಜಿರೆಯ ಮಾಡ ಕಾಂಪ್ಲೆಕ್ಸ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾದ ಮತ್ತು ಸದಾ ನಗುಮುಖದ ಸೇವೆ ನೀಡುತ್ತಿರುವ ಸುಧಾಕರ ಆಚಾರ್ಯ ಅವರ ಮಾಲಕತ್ವದ ಶುಭ ಜ್ಯುವೆಲ್ಲರ್ಸ್ & ವರ್ಕ್ಸ್ ವತಿಯಿಂದ ಗ್ರಾಹಕರಿಗಾಗಿ “ಶುಭ-ಗೋಲ್ಡ್” ಯೋಜನೆ ಆರಂಭಗೊಂಡಿದೆ.
ಸಂಸ್ಥೆಯ ನೂತನ ರಾಯಭಾರಿಯಾಗಿ ಚಲನಚಿತ್ರ ನಟಿ ಉಜಿರೆಯ ಸಿಂಚನ ಪಿ. ರಾವ್ ಅವರು ಆಯ್ಕೆಯಾಗಿದ್ದು, ಇತ್ತೀಚೆಗೆ ಗೋಲ್ಡ್ ಯೋಜನೆಯ ಪೋಸ್ಟರ್‌ನ್ನು ಅನಾವರಣಗೊಳಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಸುಧಾಕರ ಆಚಾರ್ಯ, ಸಾಂಘವಿ ಡಿಸೈನ್ಸ್ ಮಾಲಕ ರಾಜೇಂದ್ರ ಗೌಡ, ಸತ್ಯನಾರಾಯಣ ಫ್ಯಾನ್ಸಿ ಮಾಲಕ ಆನಂದ ಪೂಜಾರಿ ಹಾಗೂ ಅನೇಕ ಗ್ರಾಹಕರು ಉಪಸ್ಥಿತರಿದ್ದರು.
✨ ಶುಭ-ಗೋಲ್ಡ್ ಯೋಜನೆಯ ಲಾಭಗಳು:
1. ಚಿನ್ನದ ಬೆಲೆ ಏರಿಕೆಯಿಂದ ಸುರಕ್ಷತೆ
2. ಕಂತು ಪಾವತಿ ದಿನದ ಚಿನ್ನದ ದರದಲ್ಲಿ ನಿವ್ವಳ ತೂಕದ ಚಿನ್ನ
3.ಖಾತೆಗೆ ಜಮಾ ಕಂತು ಪಾವತಿಗೆ ಮಿತಿಯಿಲ್ಲ
ಅವಧಿ ಪೂರ್ಣಗೊಳಿಸಿದವರಿಗೆ ವಿಶೇಷ ಬೋನಸ್
📌 ಷರತ್ತುಗಳು:
1. ಚಿನ್ನ/ಬೆಳ್ಳಿ ಆಭರಣ ರೂಪದಲ್ಲಿ ಮಾತ್ರ ನೀಡಲಾಗುವುದು
2. ತಿಂಗಳ ಕಂತನ್ನು ಪ್ರತೀ ತಿಂಗಳ 15ರೊಳಗೆ ಪಾವತಿಸಬೇಕು
3 .NEFT/UPI ಮೂಲಕ ಪಾವತಿಸಿದರೆ Screenshot ಅನ್ನು WhatsApp ಮೂಲಕ ಕಳುಹಿಸಬೇಕು
4. ಯೋಜನೆ ಪೂರ್ಣಗೊಳ್ಳುವ ಮೊದಲು ಆಭರಣ ಪಡೆದರೆ ಬೋನಸ್ ದೊರೆಯುವುದಿಲ್ಲ
5. ಯೋಜನೆ ಅಂತ್ಯ ಅಥವಾ 30 ದಿನಗಳೊಳಗೆ ಆಭರಣ ನೀಡಲಾಗುವುದು
6. ಯೋಜನೆ ಕೊನೆಯಲ್ಲಿ ಕಾರ್ಡ್ ಕಡ್ಡಾಯ





