ಉಪ್ಪಿನಂಗಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯ ಸಮೀಪದ ಕಾಂಚನ ಎಂಬಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು ಬೈಕ್ ಸವಾರರಿಬ್ಬರು ತಮ್ಮ ಕಾಲುಕಳೆದುಕೊಂಡಿದ್ದಾರೆ.
ನೆಲ್ಯಾಡಿಯಿಂ ಉಪಿನಂಗಡಿ ಕಡೆಗೆ ಬರುತಿದ್ದ ಐ20 ಕಾರು ಬೈಕಿಗೆ ಕಾಂಚನ ಕ್ರಾಸ್ ಬಳಿಯ ಸಣ್ಣಂಪಾಡಿ ಎಂಬಲ್ಲಿ ಢಿಕ್ಕಿ ಹೊಡೆದಿದ್ದು ಬೈಕಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ ಬೈಕ್ ಸವಾರರಿಬ್ಬರ ಕಾಲು ತುಂಡು ತುಂಡಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದು, ಸಾರ್ವಜನಿಕರು ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳುಗಳನ್ನು ಮಡಂತ್ಯಾರ್ ಮೂಲದ ಲೋಕಯ್ಯ, ರವಿ ಮತ್ತು ಸುಧಾಕರ್ ಎಂದು ಗುರುತಿಸಲಾಗಿದೆ.