ವಾತ್ಸಲ್ಯ ಮನೆ ನಿರ್ಮಾಣದಿಂದ ವೃದ್ಧರ ಮುಖದಲ್ಲಿ ಕಾಣುವ ನಗು, ಯೋಜನೆಯ ಸಿಬ್ಬಂದಿ ಶ್ರಮ ಸಾರ್ಥಕವಾಗಿರುವುದಕ್ಕೆ ಸಾಕ್ಷಿಯಾಗಿದೆ: ಶ್ರದ್ಧಾ ಅಮಿತ್

ಸಕಲೇಶಪುರ: ನಿರ್ಗತಿಕ ವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅಭಿವೃದ್ಧಿಯೊಂದಿಗೆ ಸೂರು ಇಲ್ಲದೇ ಇರುವ ನಿರ್ಗತಿಕರಿಗೆ ಆಸರೆಗಾಗಿ ಸ್ವಂತ ಸೂರು ಒದಗಿಸುವುದೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜಯೆ ಉದ್ದೇಶ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಹಾಗೂ ಕ್ಷೇಮವನದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಶ್ರದ್ಧಾ ಅಮಿತ್ ಹೇಳಿದರು.

ಅವರು ತಾಲೂಕಿನ ಬಾಳುಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ಗ್ರಾಮದ ವೃದ್ಧೆ ಲಕ್ಷ್ಮಮ್ಮ ರವರಿಗೆ ಶುಕ್ರವಾರ ವಾತ್ಸಲ್ಯ ಯೋಜನೆಯಡಿ ನೂತನ ವಾತ್ಸಲ್ಯ ಸೂರನ್ನು ಹಸ್ತಾಂತರಿಸಿ ಶುಭಹಾರೈಸಿದರು.

ಸೂರಿಲ್ಲದೆ ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ಬದುಕುತ್ತಿರುವ ನಿರ್ಗತಿಕರನ್ನು ಗುರುತಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮನೆಗಳನ್ನು ನಿರ್ಮಿಸಿ ವಸತಿ ಕಲ್ಪಿಸಲಾಗುತ್ತಿದೆ. ಇದರೊಂದಿಗೆ ಪ್ರತಿ ತಿಂಗಳು 1,000ದಿಂದ 3000ದವರೆಗೆ ಮಾಸಾಶನ ಹಾಗೂ ದಿನನಿತ್ಯದ ಬಳಕೆ ವಸ್ತುಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆ ವಸ್ತುಗಳನ್ನು ಒಳಗೊಂಡ ವಾತ್ಸಲ್ಯ ಕಿಟ್ ಬಡವರಿಗೆ ಆಶಾಕಿರಣವಾಗಿದೆ ಎಂದು ಹೇಳಿದರು.

ಇಲ್ಲಿವರೆಗೆ 684 ಮನೆಗಳನ್ನು ಹಸ್ತಾಂತರಿಸಲಾಗಿದ್ದು, ಇನ್ನೂ ನೂರಾರು ಮನೆಗಳು ನಿರ್ಮಾಣ ಹಂತದಲ್ಲಿವೆ. 666ನೇ ವಾತ್ಸಲ್ಯ ಮನೆ ಹಸ್ತಾಂತರವನ್ನು ಶೃಂಗೇರಿ ಪೀಠದ ಶ್ರೀಗಳು ತಮ್ಮ ಅಮೃತ ಹಸ್ತದಿಂದ ನೆರವೇರಿಸಿರುವುದು ಯೋಜನೆಗೆ ವಿಶೇಷ ಗರಿಮೆಯಾಗಿದೆ ಎಂದು ತಿಳಿಸಿದರು.

ವಾತ್ಸಲ್ಯ ಮನೆ ನಿರ್ಮಾಣದಿಂದ ನಿರ್ಗತಿಕ ವೃದ್ಧರ ಮುಖದಲ್ಲಿ ಕಾಣುವ ನಗು, ಯೋಜನೆಯ ಸಿಬ್ಬಂದಿ ಶ್ರಮ ಸಾರ್ಥಕವಾಗಿರುವುದಕ್ಕೆ ಸಾಕ್ಷಿಯಾಗಿದೆ. ಅದಕ್ಕಿಂತ ದೊಡ್ಡ ಆತ್ಮತೃಪ್ತಿ ಮತ್ತೊಂದಿಲ್ಲ. ಕೊನೆಗಾಲದಲ್ಲಿ ಯಾರ ಮೇಲೂ ಅವಲಂಬಿತರಾಗದೇ ಸ್ವಾಭಿಮಾನದಿಂದ ಬದುಕುವ ಆಶಯವನ್ನು ಈ ಯೋಜನೆ ಸಾಕಾರಗೊಳಿಸುತ್ತಿದೆ ಎಂದು ಶ್ರದ್ದಾ ಅಮಿತ್ ಹೇಳಿದರು.

ಶಾಸಕ ಸಿಮೆಂಟ್ ಮಂಜು ಅವರ ಧರ್ಮಪತ್ನಿ ಪ್ರತಿಭಾ ಮಂಜುನಾಥ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಬಡ ಹಾಗೂ ನಿರ್ಗತಿಕ ಮಹಿಳೆಯರ ಬದುಕಿನಲ್ಲಿ ಆತ್ಮಸ್ಥೆರ್ಯ ತುಂಬುವ ಮಹತ್ವದ ಕೆಲಸ ಮಾಡುತ್ತಿದೆ. ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಬಗ್ಗೆ ಅಪಾರ ಕಾಳಜಿ ವಹಿಸುತ್ತಿರುವ ಸಂಸ್ಥೆಯ ಕಾರ್ಯಗಳು ಪ್ರೇರಣಾದಾಯಕ ಹಾಗೂ ಮಾದರಿಯಾಗಿದೆ. ಈ ಕಾರ್ಯಕ್ಕಾಗಿ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಪ್ರಾದೇಶಿಕ ನಿರ್ದೇಶಕರಾದ ಜಯಂತ್ ಪೂಜಾರಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ.ನವೀನ್ ಚಂದ್ರ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಗಿರೀಶ್ ಮಂಜುನಾಥ್, ಉಮಾನಾಥ ಸುವರ್ಣ, ಗ್ರಾ.ಪಂ.ಅಧ್ಯಕ್ಷೆ ಲತಾ, ನೇತ್ರಾವತಿ ಮಂಜುನಾಥ್, ಬಬಿತಾ ವಿಶ್ವನಾಥ್, ಗ್ರಾ.ಪಂ.ಸದಸ್ಯ ರಾಜೇಶ್, ತಾಲೂಕು ಯೋಜನಾಧಿಕಾರಿ ರಾಜೇಶ.ಎಂ, ಜ್ಞಾನ ವಿಕಾಸ ಯೋಜನಾಧಿಕಾರಿ ಮೂಕಾಂಬಿಕಾ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರುಗಳಾದ ಜ್ಯೋತಿ, ಮಂಜುಳಾ, ಚಿರಾಂತ್, ಶೌರ್ಯ ಘಟಕದ ಮಧುವರನ್, ಮಂಜುನಾಥ್, ಪ್ರಸನ್ನ, ಪ್ರಕಾಶ್, ರವಿ, ಸೇವಾ ಪ್ರತಿನಿಧಿಗಳಾದ ನಳಿನಿ,ಕೋಮಲ, ಪುನಿತ್, ರಮ್ಯ, ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಊರಿನ ಗಣ್ಯರು ಉಪಸ್ಥಿತರಿದ್ದರು.

Spread the love
  • Related Posts

    ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನಲ್ಲಿ ಪಲ್ಟಿಯಾದ ಟಿಟಿ ವಾಹನ: ಒರ್ವ ಸಾವು 9ಜನರಿಗೆ ಗಾಯ

    ಬೆಳ್ತಂಗಡಿ : ಬ್ರೇಕ್ ಫೈಲ್ ಆಗಿ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿ ಒಂಬತ್ತು ಮಂದಿ ಗಂಭೀರ ಗಾಯವಾಗಿದ್ದು. ಓರ್ವ ವೃದ್ಧ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನ ಒಂಬತ್ತನೇ ತಿರುವಿನಲ್ಲಿ ಬ್ರೇಕ್ ಫೈಲ್ ಆಗಿ ಟಿಟಿ ವಾಹನ ಪಲ್ಟಿಯಾಗಿದೆ.…

    Spread the love

    ಉಭಯ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿಯಲ್ಲಿ ನಾಳೆ ಸಾರ್ವತ್ರಿಕ ರಜೆ

    ಮಂಗಳೂರು: ಉಭಯ ಜಿಲ್ಲೆಗಳಲ್ಲಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ (ದ.ಕ ಉಡುಪಿ) ಈದುಲ್ ಫಿತ್ ಹಬ್ಬವನ್ನು ನಾಳೆ (ಮಾ.20, ಶುಕ್ರವಾರ) ಆಚರಿಸಲಾಗುವುದು ಎಂದು ಜಿಲ್ಲಾ ಖಾಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಂದ್ರ ದರ್ಶನ ಹಿನ್ನೆಲೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತರ್…

    Spread the love

    You Missed

    ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನಲ್ಲಿ ಪಲ್ಟಿಯಾದ ಟಿಟಿ ವಾಹನ: ಒರ್ವ ಸಾವು 9ಜನರಿಗೆ ಗಾಯ

    • By admin
    • March 21, 2026
    • 54 views
    ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನಲ್ಲಿ ಪಲ್ಟಿಯಾದ ಟಿಟಿ ವಾಹನ: ಒರ್ವ ಸಾವು 9ಜನರಿಗೆ ಗಾಯ

    ಉಭಯ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿಯಲ್ಲಿ ನಾಳೆ ಸಾರ್ವತ್ರಿಕ ರಜೆ

    • By admin
    • March 19, 2026
    • 79 views
    ಉಭಯ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿಯಲ್ಲಿ ನಾಳೆ ಸಾರ್ವತ್ರಿಕ ರಜೆ

    ಕನ್ಯಾಡಿ ಸೇವಾಭಾರತಿಯಿಂದ ಉಡುಪಿಯಲ್ಲಿ 4 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ :

    • By admin
    • March 18, 2026
    • 40 views
    ಕನ್ಯಾಡಿ ಸೇವಾಭಾರತಿಯಿಂದ ಉಡುಪಿಯಲ್ಲಿ 4 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ :

    ನದಿಯಲ್ಲಿ ಸ್ನಾನಕ್ಕೆ ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಸಾವು

    • By admin
    • March 18, 2026
    • 101 views
    ನದಿಯಲ್ಲಿ ಸ್ನಾನಕ್ಕೆ ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಸಾವು

    ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಅಬ್ಬರ – ಕಾಶ್ಮೀರದಂತಾದ ದೃಶ್ಯ, ಸಂಚಾರಕ್ಕೆ ಅಡಚಣೆ

    • By admin
    • March 18, 2026
    • 74 views
    ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಅಬ್ಬರ – ಕಾಶ್ಮೀರದಂತಾದ ದೃಶ್ಯ, ಸಂಚಾರಕ್ಕೆ ಅಡಚಣೆ

    ಕನ್ಯಾಡಿ ಸೇವಾಭಾರತಿಯಿಂದ ಶಿರಸಿಯಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

    • By admin
    • March 18, 2026
    • 45 views
    ಕನ್ಯಾಡಿ ಸೇವಾಭಾರತಿಯಿಂದ ಶಿರಸಿಯಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ