ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆ ಎಂದು ಘೋಷಣೆ!

ಬೆಂಗಳೂರು: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ. ಸಚಿವ ಸಂಪುಟ ಸಭೆಯಲ್ಲಿಂದು ಅಧಿಕೃತವಾಗಿ ಅನುಮೋದನೆ ಪಡೆದುಕೊಂಡ ಬಳಿಕ ವಿಜಯನಗರ 31ನೇ ಜಿಲ್ಲೆ ಎಂದು ಸಚಿವ ಮಾಧುಸ್ವಾಮಿ ಅವರು ಘೋಷಣೆ ಮಾದಿದರು.

ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ರಚನೆ, ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿತ್ತು. ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದ್ದು, ಇದೀಗ ವಿಜಯನಗರ ನೂತನ ಜಿಲ್ಲೆ ಎಂದು ಅಧಿಕೃತಗೊಳಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರೆಲ್ಲರಿಗೂ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿತ್ತು.

ಸುಮಾರು 200 ಕಿ.ಮೀ ದೂರ ಕ್ರಮಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಬೇಡಿಕೆಗೆಯನ್ನು ಮನ್ನಿಸಿ ಹೊಸ ಜಿಲ್ಲೆ ಉದಯಕ್ಕೆ ನಾಂದಿ ಹಾಡಿದೆ.

ನೂತನ ಜಿಲ್ಲೆಯ ಗಡಿಗಳ ರೂಪುರೇಷೆಗೆ ಸಚಿವ ಸಂಪುಟದಲ್ಲಿ ಸಮ್ಮತಿ ಸಿಕ್ಕಿದೆ. ಬಳ್ಳಾರಿ ಜಿಲ್ಲೆಯಿಂದ ವಿಭಜಿಸಿ ಹೊಸ ಜಿಲ್ಲೆ ರೂಪುಗೊಂಡಿದೆ.

ನೂತನ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ಜಿಲ್ಲಾಕೇಂದ್ರವಾಗಿರಲಿದ್ದು, ಹೊಸಪೇಟೆ, ಹಗರಿಬೊಮ್ಮನಹಳ್ಳಿ,ಕೂಡ್ಲಿಗಿ, ಕೊಟ್ಟೂರು, ಹೂವಿನ ಹಡಗಲಿ ತಾಲೂಕುಗಳಿರಲಿವೆ.

ಬಳ್ಳಾರಿ 11 ಕಂದಾಯ ತಾಲೂಕು, 3 ಕಂದಾಯ ಉಪ ವಿಭಾಗಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿತ್ತು.ಈಗ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು ಹಾಗೂ ಕಂಪ್ಲಿ ತಾಲೂಕು ಉಳಿಸಿಕೊಳ್ಳಲಾಗುತ್ತದೆ.

ಆಡಳಿತ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆ ವಿಭಜನೆಗೆ ಬಿಜೆಪಿ ಸರ್ಕಾರ ಮುಂದಾಗಿದ್ದು, ಗಾಲಿ ರೆಡ್ಡಿ ಸೋದರರು ವಿರೋಧ ವ್ಯಕ್ತಪಡಿಸಿದ್ದರೆ, ಆನಂದ್ ಸಿಂಗ್ ಬಣ ಸಹಮತ ವ್ಯಕ್ತಪಡಿಸಿದ್ದರು. ಸಾರ್ವಜನಿಕರಲ್ಲೂ ಪರ-ವಿರೋಧ ಚರ್ಚೆ ಮುಂದುವರೆದಿತ್ತು.

Spread the love
  • Related Posts

    ದ.ಕ ಜಿಲ್ಲಾಧಿಕಾರಿ ಸಹಿತ 17ಜಿಲ್ಲಾಧಿಕಾರಿಯವರ ವರ್ಗಾವಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಡಿ.ಸಿ ಸಹಿತ 17ಜಿಲ್ಲಾಧಿಕಾರಿಯವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಂಗಳೂರಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಮಕ್ಕಳ ಅಚ್ಚುಮೆಚ್ಚಿನ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈಮುಹಿಲನ್ ರವರಿಗೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಸದ್ರಿಯವರ ತೆರವಾದ ಜಾಗಕ್ಕೆ ದರ್ಶನ HV ಯವರನ್ನು ವರ್ಗಾಯಿಸಿ…

    Spread the love

    ಕಾಜೂರು-ದಿಡುಪೆ ರಸ್ತೆಯಲ್ಲಿ ಬಿದ್ದ ಮರ ಕೆಲಕಾಲ ಸಂಚಾರ ಅಸ್ತವ್ಯಸ್ತ

    ಬೆಳ್ತಂಗಡಿ: ಕಾಜೂರಿನಿಂದ ದಿಡುಪೆಗೆ ಹೋಗುವ ರಸ್ತೆಗೆ ಭಾರೀ ಮಳೆಗೆ ಹೆಮ್ಮರವೊಂದು ಉರುಳಿ ಬಿದ್ದು ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.ಬಳಿಕ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಪ್ರತಿದಿನ ಹತ್ತಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಮರ…

    Spread the love

    You Missed

    ದ.ಕ ಜಿಲ್ಲಾಧಿಕಾರಿ ಸಹಿತ 17ಜಿಲ್ಲಾಧಿಕಾರಿಯವರ ವರ್ಗಾವಣೆ

    • By admin
    • June 17, 2025
    • 157 views
    ದ.ಕ ಜಿಲ್ಲಾಧಿಕಾರಿ ಸಹಿತ 17ಜಿಲ್ಲಾಧಿಕಾರಿಯವರ  ವರ್ಗಾವಣೆ

    ಕಾಜೂರು-ದಿಡುಪೆ ರಸ್ತೆಯಲ್ಲಿ ಬಿದ್ದ ಮರ ಕೆಲಕಾಲ ಸಂಚಾರ ಅಸ್ತವ್ಯಸ್ತ

    • By admin
    • June 16, 2025
    • 75 views
    ಕಾಜೂರು-ದಿಡುಪೆ ರಸ್ತೆಯಲ್ಲಿ ಬಿದ್ದ ಮರ ಕೆಲಕಾಲ ಸಂಚಾರ ಅಸ್ತವ್ಯಸ್ತ

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • June 16, 2025
    • 266 views
    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ  ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    • By admin
    • June 15, 2025
    • 184 views
    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    • By admin
    • June 12, 2025
    • 107 views
    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    • By admin
    • June 12, 2025
    • 65 views
    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ