ವಿದ್ಯುತ್ ಕಂಬ ಏರಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ನೌಕರ ದುರ್ಮರಣ! ಇಬ್ಬರಿಗೆ ಗಾಯ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ಕಳೆಂಜ ಇಲ್ಲಿಯ ಶಾಲೆತ್ತಡ್ಕ ಜಂಕ್ಷನ್‌ನಲ್ಲಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.

ಮೂಡಬಿದ್ರೆಯ ವಿದ್ಯುತ್ ಗುತ್ತಿಗೆದಾರರಾದ ಕುಮಾರ್ ಎಲೆಕ್ಟ್ರಿಕಲ್ ನ ಸಿಬ್ಬಂದಿ ಪ್ರತಾಪ್ ಮೂಡಬಿದ್ರೆ ಇವರು ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದು, ನಾಗಪ್ಪ ಮೂಡಬಿದ್ರೆ ಹಾಗೂ ಕಿಶೋರ್ ಮೂಡಬಿದ್ರೆ ಇವರುಗಳಿಗೆ ಗಾಯಗಳಾಗಿವೆ.

READ ALSO

ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ್ದ ಪ್ರತಾಪ್ ರವರಿಗೆ ವಿದ್ಯುತ್ ಕಂಬದಲ್ಲಿ ಕೆಲಸ ನಿರ್ವಹಿಸುತ್ತಿರುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ.