ಕೊಳಲಗಿರಿ: ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸೇವಾಧಾಮ ಪುನಶ್ಚೇತನ ಕೇಂದ್ರದ ಮೂಲಕ ಪುನಶ್ಚೇತನವನ್ನು ನೀಡುತ್ತಾ ಹಾಗೆ ಆರೋಗ್ಯ ತಪಾಸಣಾ, ರಕ್ತದಾನ ಶಿಬಿರ, ಮಹಿಳಾ ಸಬಲೀಕರಣ ಹೀಗೆ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ಕನ್ಯಾಡಿ ಸೇವಾಭಾರತಿ ಖಜಾಂಚಿ ಮತ್ತು ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರನ್ನು ಹೋಂ ಡಾಕ್ಟರ್ ಫೌಂಡೇಶನ್(ರಿ.), ವತಿಯಿಂದ ಉಡುಪಿ ಜಿಲ್ಲೆಯ ಕೊಳಲಗಿರಿ ಸ್ವರ್ಗ ಆಶ್ರಮದಲ್ಲಿ ನಡೆಸಿದಂತಹ ದೀಪಾವಳಿ ಆಚರಣೆ 2025 ಕಾರ್ಯಕ್ರಮದಲ್ಲಿ ಗುರುತಿಸಿ ಡಾ. ಶಶಿಕಿರಣ್ ಶೆಟ್ಟಿರವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.





