ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕಕ ಭೂಕುಸಿತ ಸಂಭವಿಸಿದ ಘಟನೆ ಮಂಗಳವಾರ ಮಧ್ಯರಾತ್ರಿ ಹಾಗೂ ಬೆಳ್ಳಂಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಈವರೆಗೆ ಏಳು ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮಲಯಾಳಂ ಮಾಧ್ಯಮಗಳು ವರದಿ ಮಾಡಿದೆ.
ವಯನಾಡ್ ಜಿಲ್ಲೆಯ ಮೇಪ್ಪಾಡಿ, ಮುಂಡಕ್ಕೆ ಪಟ್ಟಣ ಮತ್ತು ಚೂರಲ್ ಮಲ ಎಂಬ ಮೂರು ಪ್ರದೇಶದಲ್ಲಿ ರಾತ್ರಿಯ ವೇಳೆ ಭಾರೀ ಭೂಕುಸಿತ ಸಂಭವಿಸಿದೆ.
ಮಧ್ಯರಾತ್ರಿಯ ವೇಳೆ ಮೊದಲ ಭೂಕುಸಿತ ಸಂಭವಿಸಿದ್ದು ಮುಂಡಕ್ಕೆ ಪೇಟೆಯಲ್ಲಿ ಬೆಳಗಿನ ಜಾವ ಸರಿಸುಮಾರು 4 ಗಂಟೆಗೆ ಮತ್ತೆ ಭೂ ಕುಸಿತ ಸಂಭವಿಸಿದೆ. ಹಲವು ಸೇತುವೆಗಳು ಕೊಚ್ಚಿ ಹೋಗಿರುವುದಾಗಿ ತಿಳಿದು ಬಂದಿದ್ದು ಕೆಲವು ಪ್ರದೇಶಗಳಿಗೆ ಇನ್ನೂ ರಕ್ಷಣಾ ಕಾರ್ಯಕರ್ತರಿಗೆ ತಲುಪಲು ಸಾಧ್ಯವಾಗಿಲ್ಲ. ಒಂದೆಡೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಚೂರಲ್ ಮಲ ಶಾಲೆಯ ಬಳಿ ಎರಡನೇಯ ಭೂಕುಸಿತ ಸಂಭವಿಸಿದೆ.
ಹಲವರು ಮಣ್ಣಿನ ಅಡಿ ಸಿಲುಕಿರುವುದಾಗಿ ಅನುಮಾನ ವ್ಯಕ್ತವಾಗುತ್ತಿದೆ ಎಂದು ಸರಕಾರ ಮಾಹಿತಿ ನೀಡುತ್ತಿದ್ದು ಮರಣದ ಸಂಖ್ಯೆ ಇನ್ನಷ್ಟು ಏರುವ ಅಪಾಯವಿದೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿದೆ.