ವಾಟ್ಸಾಪ್ ಬಳಕೆದಾರರಿಗೆ ಗೌಪ್ಯತಾ ನೀತಿ ರಕ್ಷಿಸುವುದಾಗಿ “ಸ್ಟೇಟಸ್” ಮೂಲಕ ಸಂದೇಶ!

ಬೆಂಗಳೂರು: ತನ್ನ ಬಳಕೆದಾರರ ಗೌಪ್ಯತಾ ನೀತಿಯಲ್ಲಿ ಬದಲಾವಣೆ ಮಾಡುವುದಾಗಿ ಹೇಳಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ವಾಟ್ಸಪ್ ಈಗ ಬಳಕೆದಾರರಿಗೆ ಸ್ಟೇಟಸ್ ಕಳಿಸುವ ಮೂಲಕ ಬಳಕೆದಾರರ ಗೌಪ್ಯತಾ ನೀತಿಯನ್ನು ರಕ್ಷಿಸುವುದಾಗಿ ಹೇಳಿಕೊಂಡಿದೆ.

WhatsApp status

ವಾಟ್ಸಪ್​ನಿಂದ ಸ್ಟೇಟಸ್​

ಭಾನುವಾರ ತನ್ನ ವಾಟ್ಸಪ್​ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ನಾಲ್ಕು ಸ್ಟೇಟಸ್​ಗಳನ್ನು ಹಂಚಿಕೊಂಡಿದ್ದು, ಈ ಮೂಲಕ ವಾಟ್ಸಪ್ ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದಂತೆ ಇರುವ ಅನುಮಾನಗಳನ್ನು ನಿವಾರಿಸಲು ಪ್ರಯತ್ನಿಸಿದೆ.

ವಾಟ್ಸಪ್ ತನ್ನ ಬಳಕೆದಾರರ ಜೊತೆಗೆ ಹಂಚಿಕೊಂಡಿರುವ ನಾಲ್ಕು ಸ್ಟೇಟಸ್​ಗಳು ಇಂತಿವೆ.

  1. ನಾವು ನಿಮ್ಮ ಗೌಪ್ಯತೆ ರಕ್ಷಿಸಲು ಬದ್ಧರಾಗಿದ್ದೇವೆ.
  2. ನಿಮ್ಮ ವೈಯಕ್ತಿಕ ಸಂಭಾಷಣೆಯನ್ನು ವಾಟ್ಸಪ್ ಓದಲು ಸಾಧ್ಯವಿಲ್ಲ.
  3. ನೀವು ಹಂಚಿಕೊಂಡ ಸ್ಥಳವನ್ನು ವಾಟ್ಸಪ್ ನೋಡುವುದಿಲ್ಲ.
  4. ನಿಮ್ಮ ಸಂಪರ್ಕಗಳನ್ನು ಫೇಸ್​ಬುಕ್​ನೊಂದಿಗೆ ಹಂಚಿಕೊಳ್ಳುವುದಿಲ್ಲ.

ಈ ರೀತಿಯ ಸ್ಟೇಟಸ್​ಗಳನ್ನು ವಾಟ್ಸಪ್​ ತನ್ನ ಬಳಕೆದಾರರೊಂದಿಗೆ ಹಂಚಿಕೊಂಡಿದೆ. ಕಳೆದ ವಾರ ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಸೇವಾ ನಿಯಮಗಳು ಮತ್ತು ಸಾರ್ವಜನಿಕ ಗೌಪ್ಯತೆ ವಿಚಾರದಲ್ಲಿ ಬದಲಾವಣೆ ತರುವುದಾಗಿ ಹೇಳಿತ್ತು. ಈ ನೀತಿಯನ್ನು ಫೆಬ್ರವರಿ 8ರಿಂದ ಜಾರಿಗೆ ತರುವುದಾಗಿ ಹೇಳಿತ್ತು.

ವಾಟ್ಸಪ್ ಈ ರೀತಿ ಹೇಳಿಕೊಂಡ ನಂತರ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಬಳಕೆದಾರರೊಂದಿಗೆ ಸ್ಟೇಟಸ್ ಹಂಚಿಕೊಳ್ಳುವ ಮೂಲಕ ಟೆಲಿಗ್ರಾಮ್, ಸಿಗ್ನಲ್ ಮುಂತಾದ ಮೆಸೇಜಿಂಗ್ ಆ್ಯಪ್​ಗಳಿಗೆ ಪಲಾಯನವಾಗುತ್ತಿದ್ದ ಬಳಕೆದಾರರ ಮನವೊಲಿಸಲು ಮುಂದಾಗಿದೆ.

Spread the love
  • Related Posts

    ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ ಇದರ ವತಿಯಿಂದ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿದೆ

    ಉಜಿರೆ: ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ, ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸ್ವ ಉದ್ಯೋಗ ಅಥವಾ ಉದ್ಯೋಗ ಮಾಡುವುದಾದರೆ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಆಯೋಜಿಸಿದ್ದು ದಿನಾಂಕ 15.10.24 ರಿಂದ 24.10.24ರ ವರೆಗೆ (10ದಿನ) ಪ್ರತಿ…

    Spread the love

    ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಹಾಗೂ ಮಹತ್ವ

    ನವರಾತ್ರಿ 9ನೇ ದಿನ: ಸಿದ್ಧಿದಾತ್ರಿ ದೇವಿಯನ್ನು ಈ ಮಂತ್ರಗಳನ್ನು ಹೇಳುತ್ತಾ ಪೂಜಿಸಿದರೆ ಒಳ್ಳೆಯದು ನವರಾತ್ರಿಯ 9ನೇ ಹಾಗೂ ಕೊನೆಯ ದಿನದಂದು ತಾಯಿ ಸಿದ್ಧಿದಾತ್ರಿ ಯ ಪೂಜೆ ಮಾಡಲಾಗುವುದು. ಈ ದಿನವನ್ನು ತುಂಬಾ ಸಂಭ್ರಮ ಹಾಗೂ ಸಡಗರಿಂದ ಆಚರಣೆ ಮಾಡಲಾಗುತ್ತದೆ.ದುರ್ಗಾದೇವಿಯು ಈಶ್ವರ ದೇವರ…

    Spread the love

    You Missed

    ವಕೀಲರ ಸಂಘ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಶ್ರೀ ಮಂಜು ಇಂಡೇನ್ ಗ್ಯಾಸ್ ವತಿಯಿಂದ ಸೇಫ್ಟಿ ಕ್ಲಿನಿಕ್ ಕಾರ್ಯಾಗಾರ

    • By admin
    • October 16, 2024
    • 32 views
    ವಕೀಲರ ಸಂಘ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಶ್ರೀ ಮಂಜು ಇಂಡೇನ್ ಗ್ಯಾಸ್ ವತಿಯಿಂದ ಸೇಫ್ಟಿ ಕ್ಲಿನಿಕ್ ಕಾರ್ಯಾಗಾರ

    ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ ಇದರ ವತಿಯಿಂದ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿದೆ

    • By admin
    • October 11, 2024
    • 61 views
    ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ ಇದರ ವತಿಯಿಂದ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿದೆ

    ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಹಾಗೂ ಮಹತ್ವ

    • By admin
    • October 11, 2024
    • 25 views
    ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಹಾಗೂ ಮಹತ್ವ

    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    • By admin
    • October 7, 2024
    • 82 views
    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

    • By admin
    • October 2, 2024
    • 44 views
    ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್(ರಿ) ವತಿಯಿಂದ ನಿಡ್ಲೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಹಾನಿಯಾದ ಕುಟುಂಬಕ್ಕೆ ಆರ್ಥಿಕ ನೆರವು

    • By admin
    • October 1, 2024
    • 429 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್(ರಿ) ವತಿಯಿಂದ ನಿಡ್ಲೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಹಾನಿಯಾದ ಕುಟುಂಬಕ್ಕೆ ಆರ್ಥಿಕ ನೆರವು