TRENDING
Next
Prev

ಯಂಗ್ ಸ್ಕ್ವಾಡ್ ಪೆರಾಜೆ ನೇತೃತ್ವದಲ್ಲಿ 3ನೇ ವರ್ಷದ ಬಾಲಕರ ಕಬ್ಬಡ್ಡಿ ಪಂದ್ಯಾಟ

READ ALSO

ಬಂಟ್ವಾಳ/ಮಾಣಿ: ಯಂಗ್ ಸ್ಕ್ವಾಡ್ ಪೆರಾಜೆ ಇದರ ನೇತೃತ್ವದಲ್ಲಿ 3‌ನೇ ವರ್ಷದ 17ವರ್ಷದೊಳಗಿನ ಬಾಲಕರ ಕಬಡ್ಡಿ ಪಂದ್ಯಾಟ ಪೆರಾಜೆ ಶಾಲಾ ವಠರದಲ್ಲಿ ನಡೆಯಿತು.. ಪೆರಾಜೆ ಗುತ್ತು ಡಾ.ಶ್ರೀನಾಥ್ ಆಳ್ವರು ದೀಪ ಬೆಳಗಿಸಿ ಪಂದ್ಯಾಟ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಾಬು ಪೂಜಾರಿ ಕೊಪ್ಪಳ, ಕೃಷ್ಣ ಗೌಡ ಮಂಜೊಟ್ಟಿ, ಕುಶಾಲ ಎಂ ಪೆರಾಜೆ, ಮೋನಪ್ಪ ಸಾಲಿಯಾನ್ ಮಂಜೊಟ್ಟಿ ಭಾಗವಹಿಸಿದ್ದರು. ಮತ್ತು ಯಂಗ್ ಸ್ಕ್ವಾಡ್ ಪೆರಾಜೆ ಹಾಗೂ ಯುವಕ ಮಂಡಲ ಪೆರಾಜೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಸಚಿನ್ ಮಂಜೊಟ್ಟಿ ಸ್ವಾಗತಿಸಿ,ಪ್ರಶಾಂತ್ ಮಂಜೊಟ್ಟಿ ಧನ್ಯವಾದವಿತ್ತರು. ಕಾರ್ಯಕ್ರಮದ ಸುಂದರ ನಿರೂಪಣೆಯನ್ನು ಲಕ್ಷ್ಮೀಶ್ ಪಿ. ಸಾದಿಕುಕ್ಕು ನಿರ್ವಹಿಸಿದರು.