ತುಳುನಾಡ ದೈವಸ್ಥಾನಗಳ ಸನ್ನಿಧಾನವನ್ನು ಅಪವಿತ್ರಗೊಳಿಸಿದವರಿಗೆ ತಕ್ಕ ಶಾಸ್ತ್ರೀ ಮಾಡಿ ಕಾರಣಿಕ ಮೆರೆದ “ಕೊರಗಜ್ಜ”

ಮಂಗಳೂರು: ಮಂಗಳೂರಿನ ಎಮ್ಮೆಕೆರೆಯಲ್ಲಿರುವ ಕೊರಗಜ್ಜನ ಸನ್ನಿಧಾನವನ್ನು ಮೂತ್ರ ಮಾಡಿ ಗಲೀಜು ಮಾಡಿದ್ದಲ್ಲದ್ದೆ ಲಕ್ಷಾಂತರ ಕೊರಗಜ್ಜನ ಭಕ್ತರಿಗೆ ನೋವುಂಟು ಮಾಡಿದ ಆರೋಪಿಗಳಿಗೆ ಕಾರಣಿಕ ಶಕ್ತಿ ಕೊರಗಜ್ಜನ ಮಹಿಮೆ ಅರಿವಾಗಿದ್ದು ,ಅಪರಾಧಿಗಳಲ್ಲಿ ಓರ್ವ ಹುಚ್ಚು ಹಿಡಿದು ಸಾವನ್ನಪ್ಪಿದ್ದರೆ,ಉಳಿದಿಬ್ಬರು ಪ್ರಾಣ ಭೀತಿಯಿಂದ ನಿನ್ನೆ ಕ್ಷೇತ್ರದಲ್ಲಿ ಕೋಲ ನಡೆಯುವ ಸಂದರ್ಭ ಆಗಮಿಸಿ ಕೊರಗಜ್ಜನ ಮುಂದೆ ತಪ್ಪು ಕೇಳಿದ್ದಾರೆ.ಇನ್ನೋರ್ವ ಅನಾರೋಗ್ಯದಿಂದಾಗಿ ಬಂದಿರಲಿಲ್ಲ.

ಕಳೆದ ತಿಂಗಳು ದುಷ್ಕರ್ಮಿಗಳು ಕೊರಗಜ್ಜನ ಕ್ಷೇತ್ರವನ್ನು ಮೂತ್ರ ಮಾಡಿ ಮಲಿನಗೊಳಿಸಿದ್ದರು. ಇದು ಕೊರಗಜ್ಜನ ಅಸಂಖ್ಯಾತ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಹಿಂದೂ ಸಂಘಟನೆಗಳು ಕಾಲ್ನಡಿಗೆ ಜಾಥಾ ಸಹಿತ ಹಲವು ಕಾರ್ಯಕ್ರಮ ಹಮ್ಮಿಕೊಂಡು ಕ್ಷೇತ್ರಕ್ಕೆ ಅಪಚಾರ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿ ಎಂದು ಹರಕೆ ,ದೂರು ಸಲ್ಲಿದ್ದರು. ಕಾಕತಾಳೀಯ ಎಂಬಂತೆ ಓರ್ವ ಅಪರಾಧಿ ಮೂರ್ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ತಲೆಯನ್ನು ಗೋಡೆಗೆ ಬಡಿದುಕೊಂಡು ಮೃತಪಟ್ಟಿದ್ದಾನೆ.

READ ALSO

ಇದೀಗ ಕ್ಷೇತ್ರದ ಕಾರಣಿಕ ಗೋಚರಿಸಿದ್ದು ಅಪರಾಧಿಗಳು ದೈವದ ಮುಂದೆ ಕ್ಷಮಾಪಣೆ ಕೇಳಿಕೊಂಡಿದ್ದಾರೆ. ಅಂದಾಜು 25-35ರ ಹರೆಯದ ಯುವಕರೇ ಗಲಭೆ ಸೃಷ್ಟಿಸುವ ಉದ್ದೇಶ ಇಲ್ಲವೇ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಬೇರೆ ಕೋಮಿನ ಒಟ್ಟು ಹದಿಮೂರು ಜನರ ತಂಡ ಕೊರಗಜ್ಜ ಕ್ಷೇತ್ರ ಅಪವಿತ್ರಗೊಳಿಸುವ ಈ ಕೃತ್ಯ ಎಸಗಿರುವುದು ಕಂಡು ಬಂದಿದ್ದು,ಕ್ಷಮಾಪಣೆ ಆದ ಕೂಡಲೇ ಪೊಲೀಸರ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಇನ್ನು ಪ್ರಕರಣದ ಒಬ್ಬ ಆರೋಪಿ ಸಾವನ್ನಪ್ಪಿರೋದು ಉಳಿದ ಆರೋಪಿಗಳಲ್ಲಿ ಭಯ ಉಂಟು ಮಾಡಿದ್ದು, ಉಳಿದ ಆರೋಪಿಗಳಿಗೆ ನಡುಕ ಶುರುವಾಗಿದೆ.