ಪ್ರಧಾನಿ ನರೇಂದ್ರ ಮೋದಿ ಯೋಗಕ್ಕೆ ವಿಶ್ವಮಾನ್ಯತೆ ತಂದುಕೊಟ್ಟಿದ್ದಾರೆ : ಡಾ.ಡಿ.ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: 6ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜನತೆಗೆ ಶುಭ ಸಂದೇಶ ನೀಡಿ ಹಾರೈಸಿದ್ದಾರೆ.

ಆಧ್ಯಾತ್ಮ ಯೋಗ ಮತ್ತಿತರ ನಮ್ಮ ಧಾರ್ಮಿಕ ವಿಚಾರಗಳನ್ನು ಗೊಡ್ಡು ನಂಬಿಕೆಗಳು ಗೊಡ್ಡು ಸಂಪ್ರದಾಯಗಳು ಮತ್ತು ಅಸಂಪ್ರದಾಯಿಕ ವಿಚಾರಗಳು ಎಂದು ಮೂಲೆಗಟ್ಟಿದ್ದರು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗಕ್ಕೆ ವಿಶ್ವ ಮಾನ್ಯತೆ ತಂದು ಕೊಟ್ಟಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ಯೋಗ ಧರ್ಮಾತಿತ, ಜಾತ್ಯತೀತವಾದದ್ದು. ಎಲ್ಲಾ ಅಂತರಗಳನ್ನು ಮೀರಿ ನಿಂತದ್ದು. ನಾವೆಲ್ಲರೂ ಮಾಡಲೇಬೇಕಾದ ಸಾಧನೆ ಏನೆಂದರೆ ದೈಹಿಕವಾದ ಆರೋಗ್ಯ ಮಾನಸಿಕ ಆರೋಗ್ಯ. ನೆಮ್ಮದಿ ಮತ್ತು ದೀರ್ಘ ಆಯುಷ್ಯಕ್ಕೆ ಬೇಕಾದ ನೆಮ್ಮದಿ ಜೀವನ ಸೂತ್ರಗಳನ್ನು ಅಳವಡಿಸಿಕೊಳ್ಳುವುದು. ಶ್ರೀ ಮಂಜುನಾಥ ಸ್ವಾಮಿ ಎಲ್ಲರಿಗೂ ಆರೋಗ್ಯ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜನತೆಗೆ ಶುಭ ಹಾರೈಸಿದರು.

READ ALSO