ಬಾಳೆ, ಅನಾನಸು, ಪಪ್ಪಾಯ ಬೆಳೆದ ರೈತರಿಂದ ಪರಿಹಾರಕ್ಕಾಗಿ ಅರ್ಜಿ ಆಹ್ವಾನ

ಮಂಗಳೂರು: ಕೋವಿಡ್-19 ಕಾರಣದಿಂದಾಗಿ ದೇಶದಲ್ಲಿ ವಿಧಿಸಿದ ಲಾಕ್‍ಡೌನ್‍ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಳೆ, ಅನಾನಸು ಹಾಗೂ ಪಪ್ಪಾಯ ಬೆಳೆ ಬೆಳೆದ ರೈತರು ದಿನಾಂಕ 24-03-2020 ರಿಂದ 31-05-2020 ರವರೆಗೆ ಕಟಾವಿಗೆ ಬಂದಿರುವ ಫಸಲುಗಳನ್ನು ಮಾರಾಟ ಮಾಡಲು ಆಗದೆ ಸಂಕಷ್ಟಕ್ಕೀಡಾಗಿರುತ್ತಾರೆ ಅಥವಾ ಮಾರಾಟ ಮಾಡಿದ ಫಸಲಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿರುತ್ತಾರೆ.

ಈ ಕಾರಣಕ್ಕಾಗಿ ಕರ್ನಾಟಕ ಸರ್ಕಾರವು ಈ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿದ ರೈತರಿಗೆ ಹೆಕ್ಟೇರಿಗೆ ಗರಿಷ್ಠ ರೂ.15000 ಗಳಂತೆ (ಪ್ರತೀ ಸೆಂಟ್ಸ್‍ಗೆ ರೂ.60 ರಂತೆ) ಗರಿಷ್ಟ ಒಂದು ಹೆಕ್ಟೇರ್‍ವರೆಗೆ ಪರಿಹಾರ ನೀಡುವ ಕಾರ್ಯಕ್ರಮ ಜಾರಿಗೆ ತಂದಿರುತ್ತದೆ.

“ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆ 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರಬೇಕು. ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆ ದಿನಾಂಕ 24-03-2020 ರಿಂದ 31-05-2020ರಲ್ಲಿ ಕಟಾವು ಮಾಡಿರುವ ರೈತರು ಮಾತ್ರ ಅರ್ಹರು. ಸದರಿ ಬೆಳೆಯನ್ನು ಶುದ್ದ ಬೆಳೆಯಾಗಿ ಬೆಳೆದಿರುವ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.”

ಈ ಹಿನ್ನೆಲೆಯಲ್ಲಿ ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆ ಬೆಳೆದು 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ಹಾಗೂ ದಿನಾಂಕ 24-03-2020 ರಿಂದ 31-05-2020 ರವರೆಗಿನ ಅವಧಿಯಲ್ಲಿ ಫಸಲು ಕಟಾವು ಆಗಿರುವ, ಮೇಲಿನ ಬೆಳೆಯನ್ನು ಶುದ್ದ ಬೆಳೆಯಾಗಿ ಬೆಳೆದ ರೈತರು ಮಾತ್ರ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಅರ್ಜಿಗಳನ್ನು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಅಥವಾ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಬಹುದು. ತಾಲೂಕು ಹಾಗೂ ಜಿಲ್ಲಾ ಸಮಿತಿಗಳಿಂದ ಅನುಮೋದಿತವಾದ ರೈತರಿಗೆ ಪರಿಹಾರಧನವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ರೈತರು ಅರ್ಜಿಯೊಂದಿಗೆ ಆಧಾರ್ ಲಿಂಕ್ ಹಾಗೂ NPCI ಸೀಡಿಂಗ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ಆಧಾರ್ ಪ್ರತಿಯೊಂದಿಗೆ ಮತ್ತು ನಿಗದಿತ ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 25 ಆಗಿರುತ್ತದೆ.

ಈ ಕೆಳಗಿನ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.
ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆ 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರಬೇಕು. ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆ ದಿನಾಂಕ 24-03-2020 ರಿಂದ 31-05-2020ರಲ್ಲಿ ಕಟಾವು ಮಾಡಿರುವ ರೈತರು ಮಾತ್ರ ಅರ್ಹರು. ಸದರಿ ಬೆಳೆಯನ್ನು ಶುದ್ದ ಬೆಳೆಯಾಗಿ ಬೆಳೆದಿರುವ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ವಿವರಗಳಿಗೆ:
ತೋಟಗಾರಿಕೆ ಉಪನಿರ್ದೇಶಕರು, ದ.ಕ.ಜಿ.ಪಂ., ಮಂಗಳೂರು – 9448999226 ,
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ, ಮಂಗಳೂರು – 8277806378 (0824-2423615)
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬಂಟ್ವಾಳ – 8277806371 (08255-234102)
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಪುತ್ತೂರು – 9731854527 (08251-230905)
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಸುಳ್ಯ 9880993238 (08257-232020)
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬೆಳ್ತಂಗಡಿ – 8277806380 (08256-232148)
ಇವರನ್ನು ಸಂಪರ್ಕಿಸಲು ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 281 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 45 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 315 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 53 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 110 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ