ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ಕೆಲವೆಡೆ ಮಿಡತೆ ಹಾವಳಿ ಕಂಡು ಬಂದಿದ್ದು ಇದೀಗ ಕರಾವಳಿಯಾಧ್ಯಂತ ಮಿಡತೆ ಹಾವಳಿಯ ಬೀತಿ ಎದುರಾಗಿದೆ. ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೆ ಅನೀಶ್ ಎಂಬವರ ತೋಟದಲ್ಲಿ ಇಂದು ಮಧ್ಯಾಹ್ನ ಮಿಡತೆಗಳ ಗುಂಪು ಕಂಡುಬಂದಿದೆ. ಅನೀಶ್ ಅವರು ಇಂದು ಮಧ್ಯಾಹ್ನ ತನ್ನ ರಬ್ಬರ್ ತೊಟದಲ್ಲಿ ಹೋಗಿ ನೋಡಿದಾಗ ಮಿಡತೆಗಳು ರಬ್ಬರ್ ಗಿಡಗಳ ಕೆಳಗೆ ಇರುವ ಗಿಡ ಬಳ್ಳಿಗಳ ಸೊಪ್ಪುಗಳನ್ನು ತಿನ್ನುವುದನ್ನು ಗಮನಿಸಿದಾಗ ಮಿಡತೆಗಳ ಹಿಂಡು ಕಂಡುಬಂದಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಿಡತೆ ಹಾವಳಿ ಬಗ್ಗೆ ಮಾಹಿತಿ ಬಂದಿದೆ. ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜಿಲಾಡಿಯ ವಿಶ್ವನಾಥ ಏರಾ ಎಂಬವರ ತೋಟದಲ್ಲಿ ಮಿಡತೆಗಳ ಗುಂಪು ಕಂಡುಬಂದಿದೆ. ಗುಂಪು, ಗುಂಪಾಗಿ ಆಗಮಿಸುವ ಮಿಡತೆಗಳು ಮರದ ಎಲೆಗಳನ್ನು ತಿನ್ನುತ್ತಿವೆ. ಸಾಮಾನ್ಯವಾಗಿ ಸಾಯಂಕಾಲ ಸಮಯದಲ್ಲಿ ಈ ಮಿಡತೆಗಳ ಗುಂಪು ಕಾಣಸಿಗುತ್ತಿದೆ. ಈಗಾಗಲೇ ಎಲ್ಲಾ ಕಡೆಯಲ್ಲೂ ಮಿಡತೆಗಳ ಹಾವಳಿಯಿಂದ ತತ್ತರಿಸುತ್ತಿರುವಾಗ ತಾಲೂಕಿನಲ್ಲಿಯೂ ಮಿಡತೆಗಳು ಕಂಡು ಬಂದಿದ್ದು ಕೃಷಿಕರು ಚಿಂತೆಗೀಡಾಗುವಂತೆ ಮಾಡಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ👇🏼👇🏼👇🏼👇🏼👇🏼