ಬೆಂಗಳೂರು: ರಾಜ್ಯಾದ್ಯಂತ ಕೊರೋನ ಮಹಾಮಾರಿ ತನ್ನ ರುದ್ರನರ್ತನವನ್ನು ಮತ್ತೆ ಮುಂದುವರೆಸಿದ್ದು ರಾಜ್ಯದಲ್ಲಿಂದು 271 ಸೋಂಕಿತರು ಪತ್ತೆಯಾಗಿದ್ದು ಗಣಿ ನಾಡು ಬಳ್ಳಾರಿಯಲ್ಲಿ ತನ್ನ ಆರ್ಭಟವನ್ನು ಮುಂದುವರಿಸಿದ್ದು ಬೆಂಗಳೂರು, ಉಡುಪಿ, ಕಲಬುರ್ಗಿ, ಧಾರವಾಡ, ದಕ್ಷಿಣಕನ್ನಡ, ಬೀದರ್ ನಲ್ಲಿ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದು ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಕರ್ನಾಟಕದಲ್ಲಿ ಇಂದು 271ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆಯಾಗಿದೆ.
ಕೊರೋನಾ ಮರಣಮೃದಂಗಕ್ಕೆ ಬೆಂಗಳೂರಿನ ನಾಲ್ವರು, ಕಲಬುರ್ಗಿ02, ಹಾಸನ01 ಒಟ್ಟು 7ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 79ಕ್ಕೆ ಏರಿಕೆಯಾಗಿದೆ.
271ಸೋಂಕಿತರು ಪೈಕಿ 106 ಸೋಂಕಿತರು ವಿದೇಶ ಹಾಗೂ ಹೊರರಾಜ್ಯದಿಂದ ಬಂದವರಾಗಿರುತ್ತಾರೆ.
ಬಳ್ಳಾರಿ 97
ಬೆಂಗಳೂರು 36
ಉಡುಪಿ 22
ಕಲಬುರ್ಗಿ 20
ಧಾರವಾಡ 19
ದಕ್ಷಿಣಕನ್ನಡ 17
ಬೀದರ್ 10
ಹಾಸನ 09
ಮೈಸೂರು 09
ತುಮಕೂರು 07
ಶಿವಮೊಗ್ಗ 06
ರಾಯಚೂರು 04
ಉತ್ತರಕನ್ನಡ 04
ಚಿತ್ರದುರ್ಗ 03
ರಾಮನಗರ 03
ಮಂಡ್ಯ 02
ಬೆಳಗಾವಿ 01
ವಿಜಯಪುರ 01
ಕೋಲಾರ 01