ಕೊರೋನಾ ಅಟ್ಟಹಾಸಕ್ಕೆ ರಾಜ್ಯದಲ್ಲಿ ಶತಕ ದಾಟಿದ ಸಾವಿನ ಸಂಖ್ಯೆ! 8ಸಾವಿರದ ಸನಿಹ ತಲುಪುತಿದೆ ಸೋಂಕಿತರ ಸಂಖ್ಯೆ ಎಚ್ಚರ! ಎಚ್ಚರ! ಎಚ್ಚರ!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಹಾಮಾರಿ ಅಟ್ಟಹಾಸಕ್ಕೆ ಸಾವಿನ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದ್ದು ಸಾವಿನ ಸಂಖ್ಯೆಯಲ್ಲೂ ಶತಕದ ಗಡಿ ದಾಟಿದೆ. ಇಂದು 18ಜಿಲ್ಲೆಗಳಲ್ಲಿ ಕೊರೋನಾ ರುದ್ರನರ್ತನ ಮುಂದುವರಿದಿದ್ದು ರಾಜ್ಯರಾಜಧಾನಿಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಕರ್ನಾಟಕದಲ್ಲಿ ಇಂದು 204ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 7734ಕ್ಕೆ ಏರಿಕೆಯಾಗಿದೆ.

READ ALSO

204ಸೋಂಕಿತರ ಪೈಕಿ 108 ಮಂದಿ ವಿದೇಶದಿಂದ ಪ್ರಯಾಣ ಬೆಳೆಸಿದವರಾಗಿದ್ದಾರೆ.

ಕೊರೋನಾ ಮಹಾಮಾರಿ ಅಟ್ಟಹಾಸಕ್ಕೆ 8ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ102ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಸೋಂಕಿತರ ವಿವರಗಳು

ಬೆಂಗಳೂರು 56
ಯಾದಗಿರಿ 37
ಬಳ್ಳಾರಿ 29
ಕಲಬುರ್ಗಿ 19
ಬೀದರ್ 12
ದಕ್ಷಿಣಕನ್ನಡ 08
ಧಾರವಾಡ 08
ಮಂಡ್ಯ 07
ಹಾಸನ 05
ಉಡುಪಿ 04
ಬಾಗಲಕೋಟೆ 04
ಶಿವಮೊಗ್ಗ 04
ದಾವಣಗೆರೆ 03
ಚಿಕ್ಕಬಳ್ಳಾಪುರ 03
ಉತ್ತರಕನ್ನಡ 03
ರಾಯಚೂರು 01
ಮೈಸೂರು 01