ಇಂದು ತಂಬಾಕು ರಹಿತ ದಿನ ಯುವಜನತೆ ತಂಬಾಕು ಸೇವನೆಯಿಂದ ದೂರವಿದ್ದು ಕ್ಯಾನ್ಸರ್ ನಂತಹ ಕಾಯಿಲೆಗೆ ವಿದಾಯ ಹಾಡಬೇಕಾಗಿದೆ. ವಿಶ್ವ ತಂಬಾಕು ನಿಷೇಧ ದಿನವು ವಿಶ್ವ ಪರ್ಯಂತ ಪ್ರತಿ ವರ್ಷ ಮೇ 31ರಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು 1987ರಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಎಲ್ಲರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ ದಿನವನ್ನು ಆಯೋಜಿಸಿದರು.
1987ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ರಹಿತ ದಿನದ ಆಚರಣೆಯ ಬಗ್ಗೆ ಅಧಿಸೂಚನೆ ಹೊರಡಿಸಿತು.ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ದೃಷ್ಟಿಯಿಂದ ತಂಬಾಕು ನಿಷೇಧ ಬಗ್ಗೆ ಚಿಂತನೆಯನ್ನು ಕೈಗೊಂಡಿತು.ತಂಬಾಕು ಸೇವನೆಯಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಆರು ಮಿಲಿಯನ್ ನಷ್ಟು ಜನರು ಮರಣ ಹೊಂದುತಿದ್ದಾರೆ.
ಧೂಮಪಾನ ಕೆಟ್ಟದ್ದು ಆದರೆ ಧೂಮಪಾನಿಗಳು ಕೆಟ್ಟವರಲ್ಲ. ಆದುದರಿಂದ ಸರ್ಕಾರ ಮನುಷ್ಯನ ಭವಿಷ್ಯದ ಬಗ್ಗೆ ಚಿಂತಿಸಿ ತಂಬಾಕು ನಿಷೇಧವನ್ನು ಮಾಡುತ್ತಾರೆ. ಭಾರತ ದೇಶದಲ್ಲಿ ರೆಡ್ ಕ್ರಾಸ್ ಸಂಸ್ಥೆ,ಯನ್ ಜಿ ಒ,ಮುಂತಾದ ಸಂಸ್ಥೆಗಳು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಹಲವು ಉಪನ್ಯಾಸಗಳನ್ನು, ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನು ಮೂಡುತ್ತಿವೆ. ಹಾಗೆಯೇ ತಂಬಾಕಿನ ಯಾವುದೇ ರೀತಿಯ ಜಾಹಿರಾತಿಗೂ ಅವಕಾಶ ಕೊಡುತಿಲ್ಲ.ತಮಿಳುನಾಡಿನಲ್ಲಿ ಕ್ಯಾನ್ಸರ್ ಸಂಸ್ಥೆ ತಂಬಾಕು ನಿಯಂತ್ರಣ ತೆರೆದಿದೆ.
ಇದರ ಮುಖ್ಯ ಉದ್ದೇಶವೆಂದರೆ ಒಂದು ಸಂಪೂರ್ಣ ದಿನ ಅಂದು ಘಂಟೆಗಳ ಕಾಲ ಯಾವುದೇ ರೀತಿಯ ತಂಬಾಕು ಇರುವ ವಸ್ತುಗಳನ್ನು ಸೇವಿಸದಿರುವುದು ಅಥವಾ ಉಪಯೋಗಿಸದೆ ಇರುವುದು.
ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿಂದ ಅಂದರೆ 30-40 ಹರೆಯದವರಿಗಿಂತ ಹೆಚ್ಚಾಗಿ ಯುವಕರೆ ಹೆಚ್ಚಾಗಿ ತಂಬಾಕು ಇರುವ ವಸ್ತುಗಳನ್ನು ಸೇವಿಸುತಿದ್ದಾರೆ. ಯುವಕರಿಗೆ ಅದರಿಂದ ಆಗುವ ಹಾನಿ,ತೊಂದರೆಗಳನ್ನು ಅರ್ಥಮಾಡಿಸಲು ಈ ದಿನ ಒಂದು ಪ್ರಯತ್ನ ಇದನ್ನು ವಿಶ್ವದಾದ್ಯಂತ ಆಚರಿಸುತ್ತಾರೆ.
ತಂಬಾಕು ಸೇವನೆಯಿಂದ ಆಗುತ್ತಿರುವ ಸಾವಿನ ಸಂಖ್ಯೆಯು ಕ್ಷೀಣವಾಗಿ ಹೆಚ್ಚುತ್ತಲೇ ಇದೆ. ಧೂಮಪಾನ ತಮ್ಮ ಅಕ್ಕಪಕ್ಕದಲ್ಲಿರುವವರಿಗೆ ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತದೆ. ಹೀಗೆ ತಮಗೆ ಕಾಯಿಲೆಯನ್ನು ತಂದುಕೊಳ್ಳುವುದಲ್ಲದೆ ಇದರ ಚಟ ಇಲ್ಲದೆ ಇರುವ ಜನಕ್ಕೂ ಕಾಯಿಲೆಗಳನ್ನು ಬರಿಸುತ್ತದೆ. ಹೀಗಾಗಿ ಬಹಳಷ್ಟು ಜನ ಸಾಯುತ್ತಾರೆ.
ಈ ದಿನವನ್ನು ಬೂದಿ ಟ್ರೇ ಗಳಲ್ಲಿ ಧೂಮುಗಳನ್ನು ಇಟ್ಟು ಆಚರಿಸುತ್ತಾರೆ. ತಂಬಾಕು ಹಾಗು ಅದರಿಂದ ತಯಾರಿಸುವ ವಸ್ತುಗಳಿಂದ ಆಗುವ ಹಾನಿ ತಡೆಗಟ್ಟಲು ಈ ದಿನ ಆಚರಿಸಲಾಗುತ್ತದೆ.