ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

ಬೆಳ್ತಂಗಡಿ: ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಲುವಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ಸಾರಥ್ಯದಲ್ಲಿ 6ನೇ ವರ್ಷದ ದೋಸೆ ಹಬ್ಬ ಹಾಗೂ ಗೋ ಪೂಜಾ ಉತ್ಸವ ಅಕ್ಟೋಬರ್ 20 ಸೋಮವಾರದಂದು ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ ಜರುಗಲಿದೆಯೆಂದು ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ತಿಳಿಸಿದೆ.

ದೇಶದ ಜನಪ್ರಿಯ ಪ್ರಧಾನಿ ಶ್ರೀ ನರೇಂದ್ರ ಮೋದೀಜಿಯವರ 75ನೇ ಹುಟ್ಟು ಹಬ್ಬದ ಸಲುವಾಗಿ ಹಾಗು ದಣಿವರಿಯದ ಅತ್ಯುತ್ತಮ ಆಡಳಿತವನ್ನು ನಡೆಸಿಕೊಂಡು ಗುಜರಾತ್ ಹಾಗೂ ಭಾರತದ ಆಡಳಿತ ಚುಕ್ಕಾಣಿ ಹಿಡಿದು 25ನೇ ವರ್ಷ ಆರಂಭವಾಗುವ ಸವಿನೆನಪಿಗಾಗಿ ಅದೇ ದಿನ ಬೆಳಗ್ಗೆ 8.00 ಗಂಟೆಗೆ ನಮೋ‌ ಮ್ಯಾರಥಾನ್ ಓಟ, ವಾಣಿ ಶಿಕ್ಷಣ ಸಂಸ್ಥೆಯ ಬಳಿಯಿಂದ ಆರಂಭಗೊಂಡು ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ನಡೆಯಲಿದೆ. ಬಳಿಕ ಗಣ್ಯರ ಉಪಸ್ಥಿತಿಯಲ್ಲಿ ತಾಲೂಕಿನ ಮನೆ ಹಬ್ಬವಾದ ದೋಸೆಹಬ್ಬಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಾಂಸ್ಕೃತಿಕ ತುಡರ್ ನೃತ್ಯ ಸ್ಪರ್ಧೆ ಸಾಯಂಕಾಲದವರೆಗೆ ನಡೆಯಲಿದ್ದು, ಮಕ್ಕಳ ಹುಲಿವೇಷ ಸ್ಪರ್ಧೆ ಬಾಲೆ ಪಿಲಿ ಸಂಜೆ 6ರ ಗೋಧೋಳಿ ಮುಹೂರ್ತದಲ್ಲಿ ಗೋ ಪೂಜಾ ಉತ್ಸವ, ದೀಪ ಪ್ರಜ್ವಲನೆ ಹಾಗೂ ರಾತ್ರಿ ಭಜರಂಗ ಬಲಿ ನಾಟಕ ಪ್ರದರ್ಶನ ಹಾಗೂ ರೀಲ್ಸ್ ಸ್ಪರ್ಧೆಯೂ ನಡೆಯಲಿದೆ. ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು, ಜಿಲ್ಲಾ ಬಿಜೆಪಿ ಮುಖಂಡರು, ಸಂಸದರು, ಶಾಸಕರೂ ಸೇರಿದಂತೆ ಹಲವು ಗಣ್ಯರು ಭಾಗಿಯಾಗುವ ಈ ಸಾಂಸ್ಕೃತಿಕ ಹಬ್ಬದಲ್ಲಿ ಬೆಳ್ತಂಗಡಿ ತಾಲೂಕಿನ ಜನತೆ ಆಗಮಿಸಿ ದೋಸೆ ಸವಿದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.

Spread the love
  • Related Posts

    ಬೆಳ್ತಂಗಡಿ : ಗರ್ಡಾಡಿ ಖಾಸಗಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ, ವಕೀಲೆ ಸಮೇತ ಮೂವರ ವಿರುದ್ಧ ಪ್ರಕರಣ ದಾಖಲು

    ಬೆಳ್ತಂಗಡಿ :ನ್ಯಾಯಾಲಯದಲ್ಲಿರುವ ಜಾಗದ ವಿವಾದ ಸಂಬಂಧ ಅಕ್ರಮವಾಗಿ ಆ ಜಾಗಕ್ಕೆ ಪ್ರವೇಶ ಮಾಡಿ ಸಿಸಿಕ್ಯಾಮರಗಳಿಗೆ ,ಡಿವಿಆರ್ ಸೇರಿದಂತೆ ಇತರ ವಸ್ತುಗಳಿಗೆ ಹಾನಿ ಮಾಡಿ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎ.24 ರಂದು ಆರೋಪಿಗಳಾದ ಶಾಂತಲಾ ಪ್ರಭು, ಮನೋಹರ್,…

    Spread the love

    ಮುಂಡಾಜೆ Airtel ಟವರ್ ಗೆ ಸಿಡಿಲಾಘಾತವಾಯಿತೇ??? 5ಜಿ ದುನಿಯಾದಲ್ಲಿ 2ಜಿಗೆ ಬರ – ಮುಂಡಾಜೆ, ಕಡಿರುದ್ಯಾವರ ಜನರ ವ್ಯಥೆ!!!

    ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಾನರ್ಪ, ಕಡಿರುದ್ಯಾವರ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ರಾತ್ರಿ ಸಮಯದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀವ್ರವಾಗುತ್ತಿದೆ ಎಂಬ ದೂರುಗಳು ಹೆಚ್ಚುತ್ತಿವೆ. ವಿಶೇಷವಾಗಿ Airtel ನೆಟ್ವರ್ಕ್ ಬಳಕೆದಾರರು “ಗರ ಬಡಿದಂತಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 5ಜಿ ದುನಿಯಾದಲ್ಲಿ…

    Spread the love

    You Missed

    ಬೆಳ್ತಂಗಡಿ : ಗರ್ಡಾಡಿ ಖಾಸಗಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ, ವಕೀಲೆ ಸಮೇತ ಮೂವರ ವಿರುದ್ಧ ಪ್ರಕರಣ ದಾಖಲು

    • By admin
    • April 25, 2026
    • 54 views
    ಬೆಳ್ತಂಗಡಿ : ಗರ್ಡಾಡಿ ಖಾಸಗಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ, ವಕೀಲೆ ಸಮೇತ ಮೂವರ ವಿರುದ್ಧ ಪ್ರಕರಣ ದಾಖಲು

    ಮುಂಡಾಜೆ Airtel ಟವರ್ ಗೆ ಸಿಡಿಲಾಘಾತವಾಯಿತೇ??? 5ಜಿ ದುನಿಯಾದಲ್ಲಿ 2ಜಿಗೆ ಬರ – ಮುಂಡಾಜೆ, ಕಡಿರುದ್ಯಾವರ ಜನರ ವ್ಯಥೆ!!!

    • By admin
    • April 25, 2026
    • 140 views
    ಮುಂಡಾಜೆ Airtel ಟವರ್ ಗೆ ಸಿಡಿಲಾಘಾತವಾಯಿತೇ??? 5ಜಿ ದುನಿಯಾದಲ್ಲಿ 2ಜಿಗೆ ಬರ – ಮುಂಡಾಜೆ, ಕಡಿರುದ್ಯಾವರ ಜನರ ವ್ಯಥೆ!!!

    ಗ್ರಾಹಕರ ದೂರುಗಳ ಬೆನ್ನಿಗೆ ಕ್ರಮ: ಗ್ಯಾಸ್ ಏಜೆನ್ಸಿಗೆ ಅಂತಿಮ ಎಚ್ಚರಿಕೆ, ಬೆಳ್ತಂಗಡಿ ಆಹಾರ ಇಲಾಖೆಯಿಂದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಗೆ ನೋಟೀಸ್ ಜಾರಿ

    • By admin
    • April 23, 2026
    • 142 views
    ಗ್ರಾಹಕರ ದೂರುಗಳ ಬೆನ್ನಿಗೆ ಕ್ರಮ: ಗ್ಯಾಸ್ ಏಜೆನ್ಸಿಗೆ ಅಂತಿಮ ಎಚ್ಚರಿಕೆ,  ಬೆಳ್ತಂಗಡಿ ಆಹಾರ ಇಲಾಖೆಯಿಂದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಗೆ ನೋಟೀಸ್ ಜಾರಿ

    ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ

    • By admin
    • April 22, 2026
    • 41 views
    ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿಭಾವದೊಂದಿಗೆ ವಿಷು ಜಾತ್ರಾ ಮಹೋತ್ಸವ ಸಂಪನ್ನ

    • By admin
    • April 22, 2026
    • 23 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿಭಾವದೊಂದಿಗೆ ವಿಷು ಜಾತ್ರಾ ಮಹೋತ್ಸವ ಸಂಪನ್ನ

    ಗೂಡ್ಸ್ ವಾಹನದಲ್ಲಿ ಪ್ರಯಾಣಿಕರು – ಚಾರ್ಮಾಡಿ ಘಾಟಿಯಲ್ಲಿ ಪಿಕಪ್ ವಾಹನ ಪಲ್ಟಿ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    • By admin
    • April 22, 2026
    • 46 views
    ಗೂಡ್ಸ್ ವಾಹನದಲ್ಲಿ ಪ್ರಯಾಣಿಕರು – ಚಾರ್ಮಾಡಿ ಘಾಟಿಯಲ್ಲಿ  ಪಿಕಪ್ ವಾಹನ ಪಲ್ಟಿ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ